LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಆಟ ಆರಂಭಿಸುವ ಮುನ್ನವೇ ಆಯುಷ್ ಮಾತ್ರೆ ಬ್ಯಾಟ್ 2 ಬಾರಿ ಪರಿಶೀಲಿಸಿದ ಅಂಪೈರ್

ಚೆನ್ನೈನ ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) vs ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವಿನ ಐಪಿಎಲ್ ಪಂದ್ಯದಲ್ಲಿ, ಸಿಎಸ್‌ಕೆ ಬ್ಯಾಟ್ಸಮನ್ ಆಯುಷ್ ಮಾತ್ರೆ ಅವರ ಬ್ಯಾಟ್‌ನ್ನು ಪಂದ್ಯದ ಅಂಪೈರ್ ಎರಡು ಬಾರಿ ಪರೀಕ್ಷೆ ನಡೆಸಿದ ಘಟನೆ ನಡೆದಿದೆ.
ಪಂದ್ಯದಲ್ಲಿ ಸಿಎಸ್‌ಕೆ ಪರವಾಗಿ ಮೂರನೇ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದ ಆಯುಷ್ ಮಾತ್ರೆ, ಮೈದಾನಕ್ಕೆ ಬರುತ್ತಿದ್ದಂತೇ, ಅಂಪೈರ್ ಅವರ ಬ್ಯಾಟ್‌ನ್ನು ಪರೀಕ್ಷಿಸಿದರು.
ತಪ್ಪಾಗಿ ಅಳತೆ ಮಾಪಕವನ್ನು ಅಂಪೈರ್ ಉಲ್ಟಾ ಹಿಡಿದು ಅಳತೆ ಮಾಡಿದ ಕಾರಣ ಎರಡು ಬಾರಿ ಪರಿಶೀಲಿಸಲಾಯಿತು ನಂತರ ಅಂ ಪೇರ್ ತಪ್ಪಿನ ಅರಿವಾಗಿ ಸರಿಯಾಗಿ ಅಳತೆ ಮಾಡಿದ ಮೇಲೆ ಬ್ಯಾಟ್ ಸೈಜ್ ಸರಿಯಾಗಿ ಇತ್ತು. ಅಲ್ಲದೇ ಬ್ಯಾಟ್‌ನ್ನು ಬದಲಿಸುವಂತೆ ಆಯುಷ್ ಮಾತ್ರೆ ಅವರಿಗೆ ಅಂಪೈರ್ ಸೂಚಿಸಿದರು. ಬಳಿಕ ಮತ್ತೆ ಎರಡನೇ ಬ್ಯಾಟ್‌ನ್ನು ಪರೀಕ್ಷಿಸಿದ ಬಳಿಕ , ಮೊದಲನೇ ಬ್ಯಾಟ್‌ನಲ್ಲೇ ಆಡುವಂತೆ ಸೂಚಿಸಿದರು.ಇದು ಕೆಲಕಾಲ ಮೈದಾನದಲ್ಲಿ ಗೊಂದಲಮಯ ಪರಿಸ್ಥಿತಿಯನ್ನು ಸೃಷ್ಟಿಸಿತು. ಆದರೆ ಕೊನೆಯಲ್ಲಿ ಆಯುಷ್ ಮಾತ್ರೆ ತಾವು ಮೊದಲ ಬಾರಿಗೆ ಮೈದಾನಕ್ಕೆ ತಂದಿದ್ದ ಬ್ಯಾಟ್‌ನಲ್ಲೇ ಆಟವಾಡಿದರು.
ಆದರೆ ಅಂಪೈರ್ ಆಯುಷ್ ಮಾತ್ರೆ ಅವರ ಬ್ಯಾಟ್ ಪರಿಶೀಲಿಸಿದ್ದು ಮತ್ತು ಬ್ಯಾಟ್ ಬದಲಿಸಿ ಆಮೇಲೆ ಮತ್ತೆ ಹಳೆಯ ಬ್ಯಾಟ್‌ನ್ನೇ ಮರಳಿ ನೀಡಿದ್ದು ಹಲವು ರೀತಿಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು, ಅನೇಕರು ಸಿಎಸ್‌ಕೆ ತಂಡದ ವಿರುದ್ಧ ಫಿಕ್ಸಿಂಗ್ ಆರೋಪ ಹೊರಿಸಲಾರಂಭಿಸಿದ್ದಾರೆ.
ಅAಪೈರ್ ಬ್ಯಾಟ್ ಏಕೆ ಚೆಕ್ ಮಾಡುತ್ತಾರೆ?
ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ವಿಶೇಷವಾಗಿ ಐಪಿಎಲ್ ಪಂದ್ಯಾವಳಿಗಳಲ್ಲಿ ಗರಿಷ್ಠ ಅನುಮತಿಸಬಹುದಾದ ಆಯಾಮಗಳಿಗೆ (10.8 ಸೆಂ.ಮೀ ಅಗಲ, 6.7 ಸೆಂ.ಮೀ ಆಳ ಮತ್ತು 4 ಸೆಂ.ಮೀ ಅಂಚು) ಸಂಬAಧಿಸಿದ ನಿಯಮಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು, ಅಂಪೈರ್‌ಗಳು ಬ್ಯಾಟ್ ಗೇಜ್‌ನೊಂದಿಗೆ ಕ್ರಿಕೆಟ್ ಬ್ಯಾಟ್‌ಗಳನ್ನು ಪರಿಶೀಲಿಸುತ್ತಾರೆ. ಈ ಇನ್-ಮ್ಯಾಚ್ ಪರಿಶೀಲನೆಯು ಬ್ಯಾಟರ್‌ಗಳಿಗೆ ಅನ್ಯಾಯದ ಪ್ರಯೋಜನವನ್ನು ನೀಡುವ ದೊಡ್ಡ ಗಾತ್ರದ ಬ್ಯಾಟ್‌ಗಳ ಬಳಕೆಯನ್ನು ತಡೆಯುವ ಮೂಲಕ, ನ್ಯಾಯಯುತ ಆಟವನ್ನು ಖಚಿತಪಡಿಸುತ್ತದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು