LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪ್ರಶಸ್ತಿಗೆ, ಟೀಂ ಇಂಡಿಯಾದ ಮೂವರು ಗೇಮ್ ಚೇಂಜರ್ಸ್

ಭಾರತ ತನ್ನ ಮೊದಲ ಪಂದ್ಯವನ್ನು ಇದೇ ಭಾನುವಾರ, ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದೆ. ಟೂರ್ನಿಯ ಮುಂದಿನ ಪಂದ್ಯಗಳಲ್ಲಿ, ಮೂವರು ಆಟಗಾರರ ಪಾತ್ರ ಅತ್ಯಂತ ನಿರ್ಣಾಯಕ ಎಂದು ಟೀಂ ಇಂಡಿಯಾ ಮಾಜಿ ಕೋಚ್ ಮತ್ತು ಆಟಗಾರ ಸಂಜಯ್ ಬಂಗಾರ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಸೊನ್ನೆ ಸುತ್ತಿ, ಹೆಡ್ ಕೋಚ್ ಮತ್ತು ನಾಯಕನಿಗೆ ದೊಡ್ಡ ತಲೆನೋವಾಗಿರುವ ಅಭಿಷೇಕ್ ಶರ್ಮಾ, ಮುಂದಿನ ಪಂದ್ಯಗಳಲ್ಲಿ ಆಡಲಿದ್ದಾರಾ ಅಥವಾ ಅವರನ್ನು ಬೆಂಚ್ ಕಾಯಿಸುವ ನಿರ್ಧಾರಕ್ಕೆ ಬರಲಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಬಂಗಾರ್ ಪ್ರಕಾರ, ಮೂವರು ಕ್ರಿಟಿಕಲ್ ಆಟಗಾರರು ಯಾರೆಲ್ಲಾ?
ಟೀಂ ಇಂಡಿಯಾದ ಮಾಜಿ ಕೋಚ್ ಸಂಜಯ್ ಬಂಗಾರ್‌ಳ ಪ್ರಶಸ್ತಿಯ ಕನಸನ್ನು ನನಸಾಗಿಸಿಕೊಳ್ಳಲು ಮೂವರು ಆಟಗಾರರು ಭಾರತದ ಪಾಲಿಗೆ ಟ್ರಂಪ್ ಕಾರ್ಡ್ ಎಂದು ಸಂಜಯ್ ಬಂಗಾರ್ ಅಭಿಪ್ರಾಯ ಪಟ್ಟಿದ್ದಾರೆ. ತಂಡದಲ್ಲಿ ಸಮತೋಲನ ಮತ್ತು ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗಲು ಮೂವರು ಕೀ ಆಟಗಾರರು ಹೇಗೆ ಮುಖ್ಯ ಎಂದು ಬಂಗಾರ್ ವಿವರಿಸಿದ್ದಾರೆ. ಬಂಗಾರ್ ಪ್ರಕಾರ, ಲೀಗ್ ಹಂತದ ಮ್ಯಾಚ್?ಗಳಲ್ಲಿ ಭಾರತ ಅಜೇಯವಾಗಿರುವ ಹಿನ್ನಲೆಯಲ್ಲಿ, ಅದೇ ಗೆಲುವಿನ ವೇಗದಲ್ಲಿ ಭಾರತ ಸಾಗಬೇಕಿದೆ. ಯಾಕೆಂದರೆ, ಮುಂದೆ ಹೋಗುತ್ತಾ, ಪಂದ್ಯಗಳು ಕಠಿಣವಾಗುತ್ತಾ ಸಾಗುತ್ತದೆ ಎಂದು ಹೇಳಿದ್ದಾರೆ.
ಸೂಪರ್ ೮ ಹಂತದಲ್ಲಿ ಎಲ್ಲಾ ತಂಡಗಳಿಗೆ ಮೂರು ಪಂದ್ಯಗಳಿರುತ್ತವೆ. ಮೂರೂ ಪಂದ್ಯ ಗೆದ್ದರೆ, ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲು ಅವಕಾಶ ಸಿಗಲಿದೆ. ಎರಡು ಪಂದ್ಯ ಗೆದ್ದರೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಿರುತ್ತದೆ. ಆದರೆ, ಗುಂಪಿನ ಮೂರು ತಂಡಗಳು ತಲಾ ಎರಡು ಪಂದ್ಯ ಗೆದ್ದರೆ, ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ.
ವಿಶ್ವದ ಅತ್ಯಂತ ಶ್ರೇಷ್ಠ ಡೆತ್ ಬೌಲರ್ ಎಂದೆನಿಸಿಕೊಂಡಿರುವ ಜಸ್ಪಿçÃತ್ ಬುಮ್ರಾ, ಸಂಜಯ್ ಬಂಗಾರ್ ಹೆಸರಿಸಿದ ಎರಡನೇ ಕೀ ಆಟಗಾರ. ಆರಂಭಿಕ ಸ್ಪೆಲ್ ನಲ್ಲಿ ವಿಕೆಟ್ ಪಡೆಯುವುದರಿಂದ ಎದುರಾಳಿಗಳು ದೊಡ್ಡ ಮಟ್ಟದ ಸ್ಕೋರ್ ಹೊಡೆಯುವುದಕ್ಕೆ ನಿಯಂತ್ರಣ ತಂದಂತೆ ಆಗುತ್ತದೆ. ನೆದರ್ಲಾ್ಯಂಡ್ ವಿರುದ್ದದ ಪಂದ್ಯದಲ್ಲಿ ಬುಮ್ರಾ, ಮೂರು ಓವರ್ ಎಸೆದು, ಹದಿನೇಳು ರನ್ನಿಗೆ ಒಂದು ವಿಕೆಟ್ ಪಡೆದಿದ್ದರು. ಪಾಕ್ ವಿರುದ್ದ ಎರಡು ಓವರ್ ಎಸೆದು ಹದಿನೇಳು ರನ್ನಿಗೆ ಎರಡು ವಿಕೆಟ್ ಪಡೆದಿದ್ದರು.
ಭಾರತದ ಟಿ೨೦ ತಂಡದ ನಾಯಕ ಸೂರ್ಯ ಕುಮಾರ್ ಅವರ ಬ್ಯಾಟಿಂಗ್ ಕೂಡಾ, ಮುಂಬರುವ ಪಂದ್ಯಗಳಲ್ಲಿ ಅತ್ಯಂತ ಮುಖ್ಯ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು