LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಇಂದು ವಿಶ್ವ ಕವಿತೆ ದಿನ

ವಿಶ್ವ ಕವಿತೆ ದಿನವನ್ನು ಮಾರ್ಚ 21ನೇ ತಾರೀಕಿನಂದು ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು "ಮನುಷ್ಯರ ವಿಶೇಷವಾದ ಸೃಜನಾತ್ಮಕ ಬುದ್ಧಿವಂತಿಕೆಯನ್ನು ಗುರುತಿಸಲು ವಿಶ್ವ ಕವಿತೆಯ ದಿನವನ್ನು 1999ರಿಂದ ಆಚರಿಸಲು ಆರಂಭಿಸಿದರು. ರಾಷ್ಟ್ರೀಯ ಕವಿತಾ ದಿನವನ್ನು ಅಕ್ಟೋಬರ್ ತಿಂಗಳಿನ ಮೊದಲನೇ ಗುರುವಾರದಂದು ಆಚರಿಸಲಾಗುತ್ತದೆ.

ಯುವ ಕವಿಗಳ ಕವಿತಾ ರಚನೆಗೆ ಪ್ರೋತ್ಸಾಹ ನೀಡಲು 2024ರ ವಿಶ್ವ ಕವಿತಾ ದಿನದ ಥೀಮ್ " ದೈತ್ಯ ಪ್ರತಿಭೆಗಳ ಹೆಗಲ ಮೇಲೆ ನಿಲ್ಲುವುದ" ಎಂಬುದಾಗಿದೆ. ಉತ್ತಮ ಸಾಹಿತ್ಯದ ರಚನೆಗೆ ಹಿರಿಯ ಕವಿಗಳ ಅನುಭವವನ್ನು ಓದಿ ತಿಳಿದು ಅದರ ಸರಿಯಾದ ಪ್ರಯೋಜನ ಪಡೆದು ಉತ್ತಮ ಕವಿತ್ವ ರಚನೆಯನ್ನು ಮಾಡುವ ಉದ್ದೇ ಶದಿಂದ ಈ ಬಾರಿಯ ಥೀಮ್ ದೊಡ್ಡ ದೊಡ್ಡ ಕವಿಗಳನ್ನು ಅನುಸರಿಸಿ ಉತ್ತಮ ಸೃಜನಾತ್ಮಕತೆಯನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಕವಿತೆ ಕವಿಯ ಮನದ ಅದ್ಭುತವಾದ ಭಾವನೆಯನ್ನು ಕೆಲವೇ ಪದಗಳಲ್ಲಿ ಕಟ್ಟಿ ಹಾಕುವ ಕಲೆ. ಸುಂದರ ರಸಾನುಭೂತಿ, ಸೂಕ್ತ ಪದಗಳ ಜೋಡನೆ, ಲಯಬದ್ಧವಾದ ಸಾಲುಗಳ ರಚನೆ, ಗೇಯತೆ ಕವಿತೆಯ ವಿಶೇಷತೆಯಾಗಿರುತ್ತದೆ. ಒಂದು ಕಥೆ, ಇತಿಹಾಸ ಘಟನೆಯನ್ನು ಕೆಲವೇ ಪದಗಳಲ್ಲಿ ಕಟ್ಟಿ ಹಾಕುವುದು ಅದ್ಭುತವಾದ ಕಲೆಯೇ ಆಗಿದೆ.

ಹಿಂದಿನ ಕಾಲದಲ್ಲಿ ವಿದ್ಯೆಯನ್ನು ಕಲಿಯದವರು ಕೂಡ ಹಾಡುಗಳನ್ನು ಕಟ್ಟಿ ಹಾಕುವ ಸುಂದರ ಕಲೆಯನ್ನು ಕಲಿತಿದ್ದರು ಹೀಗೆಯೇ ಜಾನಪದ ಪದ ಹಾಡುಗಳು ಹುಟ್ಟಿ ಕೊಂಡಿದ್ದು, ಕವಿಯಿಂದ ಏನು ಪ್ರಯೋಜನ ಎಂಬುದು ಇಂದಿನ ಯುವ ಜನರ ಪ್ರಶ್ನೆಯಾಗಿದೆ? ಕವಿತೆ ಓದುವುದರಿಂದ ಏನು ಪ್ರಯೋಜನವೆಂದು ಕೇಳಿದರೆ ಮನಸ್ಸಿಗೆ ಆನಂದವು ಉಂಟಾಗುವತ್ತದೆ.

ಇತ್ತೀಚಿಗೆ ಕವಿತಾ ರಚನೆಗೆ ಬಹಳ ಪ್ರೋತ್ಸಾಹ ನೀಡುತ್ತಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹಳೆಗನ್ನಡ ಕಾಲದಿಂದಲೂ ಕಾವ್ಯ ರಚನೆ ಉತ್ತಮವಾಗೇ ನಡೆಯುತ್ತಿತ್ತು. ಛಂದಸ್ಸು ಅಲಂಕಾರ ಬದ್ಧ ಹಳೆಯ ಕವಿತೆಯ ರಚನೆ ಕಷ್ಟಕರವೆಸಿಸುವಾಗ ಆಂಗ್ಲ ಸಾಹಿತ್ಯದ ಪ್ರಭಾದ ನವೋದಯ ಸಾಹಿತ್ಯದ ರಚನೆ ಆರಂಭವಾಗಿ ಎರಡು ದಶಮಾನಗಳಿಂದ ನವ್ಯಕವ್ಯದ ರಚನೆಯಾಗುತ್ತಿದೆ.

ನವ್ಯಕಾವ್ಯದಲ್ಲಿ ಪದ ಅಥವಾ ವಾಕ್ಯಗಳ ಮಿತಿ ಯಾವುದೇ ನಿಯಮವಿರದೇ ಹೋದರು ಲಯಬದ್ಧತೆ ವಿಚಾರದ ಸ್ಪಷ್ಟತೆ ಹೇಳುವ ರೀತು ಮಹತ್ವವನ್ನು ಪಡೆಯುತ್ತದೆ.ಎಲ್ಲ ಭಾಷೆಯ ಕವಿತೆಗಳೂ ಅದರದೇ ಆದ ಸೊಗಡನ್ನು ಪಡೆದಿವೆ. ಒಂದು ಭಾಷೆಯ ಕವಿತೆಗಳು ಇನ್ನೊಂದು ಭಾಷೆಗೆ ಅನುವಾದಗೊಳ್ಳುವುದು. ವಿವಿಧ ಭಾಷೆಯ ಕವಿಗಳ ಹೊಸ ಹೊಸ ಪ್ರಯೋಗಗಳು, ಟಂಕಾ, ಹಾಯ್ಕ, ತನಗ ಮೊದಲಾದ ವಿದೇಶಿ ಹಾಗೂ ದೇಶೀಯ ಕವಿತಾ ಪ್ರಕಾರವನ್ನು ಸಾಮಾಜಿಕ ಜಾಲತಾಣಗಳು ಪ್ರಸಿದ್ಧಿಗೆ ತರುವುದರ ಜೊತೆಗೆ         ಪ್ರೋತ್ಸಾಹವನ್ನು ನೀಡುತ್ತಿವೆ.

ಈ ನಿಟ್ಟಿನಲ್ಲಿ ಅನೇಕ ಸಾಮಾಜಿಕ ಜಾಲತಾಣದ ಸಾಹಿತ್ಯಿಕ ಗುಂಪುಗಳು ಶ್ರಮಿಸುತ್ತಿವೆ. ಹೊಸ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಲ್ಲದೇ ಹೊಸ ಕವಿಗಳ ಉದಯವೂ ಆಗುತ್ತಿದೆ. ಹಿಂದಿನ ಕಾಲದಲ್ಲಿ ಕೆಲವೇ ಜನರ ಕೆಲವೇ ವೃತಿಯ ಜನರ ಕೈಗೂಸಾಗಿದ್ದ ಕವಿತೆ ಇಂದು ಎಲ್ಲರ ತರಬೇತಿ ಪಡೆದು ಕಲಿಯ ಬಹುದಾದ ವಿದ್ಯೆಯಾಗಿದೆ.

ವಿಶ್ವ ಕವಿತಾ ದಿನವನ್ನು ಕವಿತೆಯ ಕುರಿತಾದ ಕಾರ್ಯಾಗಾರವನ್ನು ನಡೆಸುವುದು, ತರಬೇತಿ ನೀಡುವುದರ ಮೂಲಕ ಆಚರಿಸುತ್ತಾರೆ. ಕವಿತೆಯ ದಿನದ ವಿಶೇಷ ಕವಿ ಗೋಷ್ಠಿಗಳನ್ನು ಕೂಡ ಆಚರಿಸುತ್ತಾರೆ.
- ಮಾಧುರಿ ದೇಶಪಾಂಡೆ, ಬೆಂಗಳೂರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು