LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ತಲಕಾಡು ನಿಸರ್ಗಧಾಮ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಸಾವು

ತಿ.ನರಸೀಪುರ: ತಲಕಾಡು ನಿಸರ್ಗಧಾಮ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಸಾವನಪ್ಪಿರುವ ದುರ್ಘಟನೆ ಸಂಭವಿಸಿದೆ.ತಾಲ್ಲೂಕಿನ ಪ್ರವಾಸಿ ತಾಣದಲ್ಲೊಂದಾದ ತಲಕಾಡು ಕಾವೇರಿ ನಿಸರ್ಗ ಧಾಮದಲ್ಲಿ ನೀರಿನಲ್ಲಿ ಆಟವಾಡಲು ಹೋಗಿ ಪಿಯುಸಿ ವಿದ್ಯಾರ್ಥಿನಿ ರಮ್ಯಾ (17) ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಚಾರ್ವಿ (12 ) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು ಮತ್ತೊಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ ತಲುಪಿದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಯಿತು.ತಲಕಾಡು ಕಾವೇರಿ ನಿಸರ್ಗಧಾಮಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ಅಕ್ಷಯಲಿಯ ನವಜೀವನ ಎನ್ಜಿಒ ಸಂಸ್ಥೆಯ 71 ಮಕ್ಕಳು ಪ್ರವಾಸಕ್ಕೆ ಬಂದು ಕಾವೇರಿ ನದಿ ನೀರಿನಲ್ಲಿ ಆಟ ಆಡುತ್ತಿದ್ದಾಗ ಮೂರು ಜನ ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬಳ ಸ್ಥಿತಿ ಗಂಭೀರ ತಲುಪಿತು.ವಿಷಯ ತಿಳಿದ ಪೊಲೀಸರು ಸ್ಥಳೀಯರ ಸಹಾಯದಿಂದ ನೀರಿನಲ್ಲಿ ಮುಳುಗಿದ್ದ ಮೂವರು ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿ ತಲಕಾಡು ಆಸ್ಪತ್ರೆಗೆ ಕರತರಲಾಯಿತು. ಮೂವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಸುಚಿತ್ರರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಯಿತು. ಮೃತಪಟ್ಟ ರಮ್ಯಾ, ಚಾರ್ವಿ ರ ಮೃತ ದೇಹವನ್ನು ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಯಿತು.ಇಂತಹ ಘಟನೆಗಳು ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ಆಗಾಗ ನಡೆಯುತ್ತಿರುತ್ತವೆ ಘಟನೆಗಳಿಗೆ ಅರಣ್ಯ ಇಲಾಖೆಯವರ ಕರ್ತವ್ಯ ನಿರ್ಲಕ್ಷ ವೆ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಸಪಡಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಯಿತು.ತಲಕಾಡು ಐತಿಹಾಸಿಕ ಪ್ರವಾಸಿಗರ ತಾಣವಾಗಿದ್ದು ವೀಕ್ಷಣೆ ಮಾಡುವ ಸಲುವಾಗಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ನದಿಯಲ್ಲಿ ಆಟ ಆಡುವ ಸಲುವಾಗಿ ಹೋಗುವ ಪ್ರವಾಸಿಗರು ನದಿಯ ಹಾಳವನ್ನು ತಿಳಿಯದೆ ಆಟ ಆಡುವ ಸಮಯದಲ್ಲಿ ಸಾವಿಗೀಡಾಗುತ್ತಿದ್ದಾರೆ, ಆಗಾಗ ಈ ಘಟನೆಗಳು ಮರುಕಳಿಸುತ್ತಿದ್ದರು ಇದಕ್ಕೆ ಸಂಬAಧ ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಸೂಚನಾ ಫಲಕವನ್ನು ಅಳವಡಿಸದೇ, ಪ್ರವಾಸಿಗರಿಗೆ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡದೆ ತುಂಬ ಆಳವಿದ್ದರು ಪ್ರವಾಸಿಗರಿಗೆ ಯಾವುದೇ ಮಾಹಿತಿ ನೀಡದೇ ನಿರ್ಲಕ್ಷವನ್ನು ತೋರುತ್ತಿದ್ದಾರೆ, ಇವರಿಗೆ ಗೇಟ್ನಲ್ಲಿ ಹಣವನ್ನು ವಸೂಲಿ ಮಾಡುವುದಷ್ಟೇ ಇವರ ಕೆಲಸ ಎಂದು ಸ್ಥಳೀಯರು ಆರೋಪ ಮಾಡಿದರು.
ತಕ್ಷಣವೇ ಇಲ್ಲಿ ನೋಡಿಕೊಳ್ಳಲು ನೇಮಕ ಮಾಡಿದಂತವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದರು. ಇಲ್ಲದಿದ್ದರೆ ನಾವು ಯಾವುದೇ ಕಾರಣಕ್ಕೂ ಗೇಟ್ ತೆರೆಯಲು ಬಿಡುವುದಿಲ್ಲ ಎಂದು ಆಗ್ರಹಿಸಿ ಗೇಟ್ ಬಂದ್ ಮಾಡಿ ಅರಣ್ಯ ಇಲಾಖೆಗೆ ಧಿಕ್ಕಾರಕೂಗಿ ಪಟ್ಟು ಹಿಡಿದ ಸ್ಥಳೀಯ ಪ್ರತಿಭಟನೆಕಾರರು ,ತಕ್ಷಣವೇ ತುರ್ತಾಗಿ ನದಿಯಲ್ಲಿರುವ ಹಾಳವನ್ನು ಮುಚ್ಚಿಸಿ ಅಲ್ಲಿ ಎಚ್ಚರಿಕೆಯ ನಾಮ ಫಲಕವನ್ನು ಅಳವಡಿಸಿ ನಂತರ ಪ್ರವಾಸಿಗರಿಗೆ ಧ್ವನಿ ಮುದ್ರಕದಿಂದ ಪ್ರಕಟಿಸಬೇಕು ಎಂದು ಆಗ್ರಹಿಸಿದರು.ನಂತರ ಇದಕ್ಕೆ ಅಧಿಕಾರಿಗಳು ನಾಳೆ ಅಷ್ಟರಲ್ಲಿ ಮಾಡುವುದಾಗಿ ತಿಳಿಸಿದರು,
ಸಾಲು ಸಾಲಾಗಿ ಪ್ರವಾಸಿಗರು ಸಾವಿಗೀಡಾಗುತ್ತಿದ್ದರು ಅರಣ್ಯ ಇಲಾಖೆ ಇದಕ್ಕೆ ತುರ್ತಾಗಿ ಕ್ರಮ ತೆಗೆದುಕೊಳ್ಳದಿರುವುದು ನಿಜಕ್ಕೂ ದುರದೃಷ್ಟಕರವಾದ ಸಂಗತಿ, ಅಧಿಕಾರಿಗಳ ಕರ್ತವ್ಯ ನಿರ್ಲಕ್ಷದಿಂದ ಏನು ಅರಿಯದ ಮುಗ್ದ ಅನಾಥ ಮಕ್ಕಳು ಪ್ರವಾಸಕ್ಕೆ ಬಂದು ಶವವಾಗಿ ಹೋಗಿದ್ದು ಎಂತವರ ಮನಸ್ಸನ್ನು ಮಮ್ಮಲ ಮರುಗುವ ಸಂಗತಿ, ಇನ್ನಾದರು ಅಮಾಯಕ ಜೀವಗಳ ಪ್ರಾಣ ಹಾನಿಯಾಗದಂತೆ ಅಧಿಕಾರಿಗಳು ನಿದ್ರೆಯಿಂದ ಎದ್ದು ಕಾಲಹರಣ ಮಾಡುವುದನ್ನು ಬಿಟ್ಟು ಕಟ್ಟೆಚ್ಚರ ವಹಿಸಬೇಕಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು