LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

"ರೈಸಿಂಗ್ ಏಷ್ಯಾ ಕಪ್‌ನಲ್ಲಿ ವೈಭವ್ ಸೂರ್ಯವಂಶಿ ೧೧ ಬೌಂಡರಿ, ೧೫ ಸಿಕ್ಸ್"

ಇದು ಅದ್ಭುತ. ವೈಭವ್ ಸೂರ್ಯವಂಶಿ ಎಂಬ ೧೪ ವರ್ಷದ ಬಾಲಕ ತನ್ನ ಅತ್ಯಮೋಘ ಬ್ಯಾಟಿಂಗ್ ನಿಂದ ಮತ್ತೊಮ್ಮೆಕ್ರಿಕೆಟ್ ವಿಶ್ವವನ್ನು ಚಕಿತಗೊಳಿಸಿದ್ದಾನೆ. ಕೇವಲ ೪೨ ಎಸೆತಗಳಲ್ಲಿ ೧೪೪ ರನ್‌ ಚೆಚ್ಚಿದ್ದಾರೆ. ಅದರಲ್ಲಿ ೧೧ ಬೌಂಡರಿ, ೧೫ ಸಿಕ್ಸ್!  ಸ್ಟ್ರೈಕ್‌  ರೇಟ್ ೩೪೨.೮೫! ೧೭ ಎಸೆತದಲ್ಲಿ ಅರ್ಧಶತಕ ಬಾರಿಸಿದ ಬಾಲಕ ಶತಕದ ಗಡಿ
ದಾಟಲು ತೆಗೆದುಕೊಂಡದ್ದು ಕೇವಲ ೩೨ ಎಸೆತ! ಇಂತಹ ಕಂಡುಕೇಳರಿಯದ ಘಟನೆ ನಡೆದಿರುವುದು ಕತಾಕ್ ನಲ್ಲಿ ಶುಕ್ರವಾರ ಪ್ರಾರಂಭ ಆಗಿರುವ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್
೨೦೨೫ ಪಂದ್ಯಾವಳಿಯ ಭಾರತ ಎ ಮತ್ತು ಯುಎಇ ನಡುವಿನ ಪಂದ್ಯದಲ್ಲಿ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿತೇಶ್ ಶರ್ಮಾ ನೇತೃತ್ವದ ಭಾರತಎ ತಂಡ ೧೬ ರನ್ ಗಳಿರುವಾಗಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ವೈಭವ್ ಸೂರ್ಯವಂಶಿ ಆಡಿದ್ದೇ ಆಟವಾಯಿತು. ಭಾರತ ತಂಡ ಕೇವಲ ೪ ಓವರ್ ಗಳಲ್ಲಿ೫೦ ರನ್ ಗಳ ಗಡಿ ದಾಟಿತು. ಭಾರತ ತಂಡ ೮೨ ರನ್ ಗಳಿಸಿದ್ದಾಗ ವೈಭವ್ ಅವರು ಕೇವಲ ೧೭ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ೩೨ ಎಸೆತದಲ್ಲಿ ಶತಕ ಅವರ ರನ್  ಗಳಿಕೆ ವೇಗಕ್ಕೆ ಕಡಿವಾಣ ಹಾಕಲು ಯುಎಇ ಬೌಲರ್ ಗಳಿಂದ ಸಾಧ್ಯವಾಗಲೇ ಇಲ್ಲ.

ತಂಡದ ಮೊತ್ತ ೧೫೦ ದಾಟುವ ಮೊದಲೇ ವೈಭವ್ ಸೂರ್ಯವಂಶಿ ಅವರು ಶತಕವನ್ನೂ ಪೂರೈಸಿಕೊಂಡರು. ಅವರ ಶತಕ ಕೇವಲ ೩೨ ಎಸೆತಗಳಿಂದ ಬಂದಿತ್ತು. ಮತ್ತೊಂದು ತುದಿಯಲ್ಲಿ ನಮನ್ ಧಿರ್(೨೩ ಎಸೆತದಲ್ಲಿ ೩೪) ಅವರು ವೈಭವ್ ಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರು ೨ನೇ ವಿಕೆಟ್ ಗೆ ೧೬೩ ರನ್ ಗಳ ಅದ್ಬುತ ಜೊತೆಯಾಟವಾಡಿದರು. ಹೀಗಾಗಿ ಕೇವಲ ೧೧. ಓವರ್ ಗಳಲ್ಲೇ ತಂಡ ೧೬೯ ರನ್ ಪೇರಿಸಿದರು. ಈ ಹಂತದಲ್ಲಿ ನಮನ್ ಧಿರ್ ಅವರು ಔಟಾಗಿ ಪೆವಿಲಿಯನ್ ಸೇರಿಕೊಂಡರು.

ಇದಾದ ಬಳಿಕ ನಾಯಕ ಜಿತೇಶ್ ಶರ್ಮಾ ಅವರನ್ನು ಸೇರಿಕೊಂಡ ವೈಭವ್ ತಮ್ಮ ಬ್ಚಾಟಿಂಗ್ ವೈಭವವನ್ನು ಮುಂದುವರಿಸಿದರು. ಆದರೆ ತಂಡದ ಮೊತ್ತ ೧೯೫ ಆಗಿದ್ದಾಗ ಮುಹಮ್ಮದ್ ಫರಾಝುದ್ದೀನ್ ಅವರ ಬೌಲಿಂಗ್ ನಲ್ಲಿ ಆಹ್ಮದ್ ತಾರೀಕ್ ಅವರಿಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ಜಿತೇಶ್ ಶರ್ಮ ಅವರು ಕೇವಲ ೩೨ ಎಸೆತದಲ್ಲಿ ೮೩ ರನ್ ಸಿಡಿಸಿದರು. ಅವರು ೮ ಬೌಂಡರಿ ಮತ್ತು ೬ ಸಿಕ್ಸರ್ ಸಿಡಿಸಿದರು. ಅಂತಿಮವಾಗಿ ಭಾರತ ಎ ತಂಡ ನಿಗದಿತ ೨೦ ಓವರ್ ಗಳಲ್ಲಿ ೪ ವಿಕಟ್ ನಷ್ಟಕ್ಕೆ ೨೯೭ ರನ್ ಗಳ ಬೃಹತ್
ಮೊತ್ತ ದಾಖಲಿಸಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು