LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ವ್ಯಾನ್-ಟ್ರಕ್ ಡಿಕ್ಕಿ: ಆರು ಮಂದಿ ಸಾವು

ಹೋಸ್ಟನ್ (ಅಮೆರಿಕ): ಮಿನಿ ವ್ಯಾನ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಭಾರತೀಯ ಕುಟುಂಬದ ಐವರು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಟೆಕ್ಸಾಸ್ ರಾಜ್ಯದಲ್ಲಿ ನಡೆದಿದೆ.ಜಾನ್‍ಸನ್ ಕೌಂಟಿ ಸಮೀಪ ಮಂಗಳವಾರ ಸಂಜೆ ಅಪಘಾತ ಸಂಭವಿಸಿದೆ ಎಂದು ಟೆಕ್ಸಾಸ್‍ನ ಸಾರ್ವಜನಿಕ ಸುರಕ್ಷತೆ ಇಲಾಖೆ (ಡಿಪಿಎಸ್) ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರ ಪ್ರದೇಶದ ಅಮಲಾಪುರಂ ಪಟ್ಟಣದ ಒಂದೇ ಕುಟುಂಬದ ಆರು ಮಂದಿ ವ್ಯಾನ್‍ನಲ್ಲಿ ಇದ್ದರು. ಈ ಪೈಕಿ 43 ವರ್ಷದ ಲೋಕೇಶ್ ಪೊಟಬತುಲಾ ಮಾತ್ರವೇ ಬದುಕುಳಿದಿದ್ದು, ಅವರೂ ಗಂಭೀರವಾಗಿ ಗಾಯಗೊಂಡಿದ್ದಾರೆ.ಲೋಕೇಶ್ ಅವರ ಪತ್ನಿ ನವೀನಾ ಪೊಟಬತುಲಾ (36), ಅವರ ಮಕ್ಕಳಾದ ನಿಶಿಧಾ (9), ಕಾರ್ತಿಕ್ (10), ನವೀನಾ ಅವರ ತಂದೆ ನಾಗೇಶ್ವರರಾವ್
ಪೊನ್ನಾದ (64), ತಾಯಿ ಸೀತಾಮಹಾಲಕ್ಷ್ಮಿ ಪೊನ್ನಾದ (60) ಹಾಗೂ ಇರ್ವಿಂಗ್ ಪಟ್ಟಣದವರಾದ ವಾಹನ ಚಾಲಕ ರುಷಿಲ್ ಬಾರ್ರಿ (28) ಮೃತಪಟ್ಟವರು ಎಂದು ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ.

ಪೊಟಬತುಲಾ ದಂಪತಿ ಟಿಸಿಎಸ್ ಕಂಪನಿಯ ನೌಕರರಾಗಿದ್ದರು ಎಂದು ತಿಳಿದುಬಂದಿದೆ.ಟ್ರಕ್‍ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು, ಟ್ರಕ್ ಚಾಲನೆ ಮಾಡುತ್ತಿದ್ದವರ ಅಚಾತುರ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಸಂತ್ರಸ್ತರು ಮುಮ್ಮಿದಿವರಂ ಕ್ಷೇತ್ರದ ವೈಎಸ್‍ಆರ್‍ಸಿಪಿ ಶಾಸಕ ಪಿ.ವೆಂಕಟ ಸತೀಶ್ ಕುಮಾರ್ ಅವರ ಸಂಬಂಧಿಕರು.
ಮೃತ ದೇಹಗಳನ್ನು ಭಾರತಕ್ಕೆ ತರಲು ಉತ್ತರ ಅಮೆರಿಕದ ತೆಲುಗು ಅಸೋಸಿಯೇಷನ್ (ಟಿಎಎನ್‍ಎ) ಸಂಘಟನೆ ಸಹಾಯ ಮಾಡುತ್ತಿದೆ ಎಂದು ವೆಂಕಟ ಸತೀಶ್ ಮಾಹಿತಿ ನೀಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು