LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರಾಘಣ್ಣನ ಮೊದಲ ಸಿನಿಮಾ ಸೋತಾಗ ಅಣ್ಣಾವ್ರು ತಲೆ ಸವರಿ ಏನಂದಿದ್ರು?

2ನೇ ಸಿನಿಮಾ ಗೆದ್ದಾಗ ಏನಂದಿದ್ರು?ವರನಟ ಡಾ. ರಾಜ್‍ಕುಮಾರ್ ಸರಳತೆಗಷ್ಟೇ ಹೆಸರಾದವರಲ್ಲ. ಸಿನಿಮಾ ಮೂಲಕ ಆದರ್ಶಗಳನ್ನು ನಾಡಿಗೆ ಬಿತ್ತರಿಸಿದ ಕಲಾವಿದ. ಅದಕ್ಕೆ ಇಂದಿಗೂ ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತೇವೆ. ಕನ್ನಡಿಗರು ಮೆಚ್ಚುವ ಆರಾಧ್ಯ ದೈವ ಆಗಿದ್ದರೂ, ಅಹಂಕಾರ, ದರ್ಪ ಯಾವುದನ್ನೂ ತೋರಿಸಲಿಲ್ಲ. ಇಂದಿನ ಕಲಾವಿದರಿಗೆ ಅಣ್ಣಾವ್ರು ಮಾದರಿಯಾಗಿದ್ದಾರೆ.

ಡಾ.ರಾಜ್‍ಕುಮಾರ್ ಅದ್ಭುತ ನಟ ಅನ್ನೋದು ಒಂದು ಕಡೆಯಾದರೆ, ಅಷ್ಟೇ ಒಳ್ಳೆಯ ಫ್ಯಾಮಿಲಿ ಮ್ಯಾನ್. ತಾನೆಷ್ಟೇ ಬ್ಯುಸಿಯಾಗಿದ್ದರೂ, ತನ್ನ ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ಮಕ್ಕಳು ಸೋತಾಗ, ಗೆದ್ದಾಗ ಜೊತೆಯಲ್ಲಿರುತ್ತಿದ್ದರು. ಒಬ್ಬ ನಟನಾಗಿ ಅಣ್ಣಾವ್ರ ಬಗ್ಗೆ ಅಭಿಮಾನಿಗಳಿ ಚೆನ್ನಾಗಿಯೇ ಗೊತ್ತಿದೆ. ಅದೇ ಮನೆಯೊಳಗೆ ಅವರು ಹೇಗಿರುತ್ತಿದ್ದರು? ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು ಅನ್ನುವ ಸಂಗತಿ ಗೊತ್ತಿಲ್ಲ.

ರಾಘವೇಂದ್ರ ರಾಜ್‍ಕುಮಾರ್ ತನ್ನ ಮೊದಲ ಸಿನಿಮಾ 'ಚಿರಂಜೀವಿ ಸುಧಾಕರ್' ಸೋತಿತ್ತು. ಆ ವೇಳೆ ರಾಘಣ್ಣ ಮಾನಸಿಕವಾಗಿ ಕುಗ್ಗಿದ್ದರು. ಈ ವೇಳೆ ಅಣ್ಣಾವ್ರು ಮಗ ಬಳಿ ಬಂದು ತಲೆ ಸವರಿ ಧೈರ್ಯ ತುಂಬಿದ್ದರು. ಮುಂದಿನ ವರ್ಷ 'ನಂಜುಂಡಿ ಕಲ್ಯಾಣ' ಗೆದ್ದಿತ್ತು. ಆಗಲೂ ರಾಘಣ್ಣನಿಗೆ ಬುದ್ದಿ ಮಾತುಗಳನ್ನು ಹೇಳಿದ್ದರು. 'ಗಜಪತಿ ಗರ್ವಭಂಗ' ಗೆದ್ದಾಗಲೂ ರಾಘಣ್ಣನ ಜೊತೆ ಮಾತಾಡಿದ್ದರು. ಈ ವಿಷಯವನ್ನು ಇತ್ತೀಚೆಗೆ ನಡೆದ ಅಣ್ಣಾವ್ರ 96ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು