LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಪ್ರೇಮಿಗಳಿಗೊಂದು ದಿನ ಯಾಕೆ....?

ಈ ವ್ಯಾಲೇಂಟೈನ್ ಯಾರು ಎಂಬುದಕ್ಕೆ ಮಾಹಿತಿಯನ್ನು ತಿಳಿದುಕೊಳ್ಳೋಣ....ಕ್ರಿಶ 270 ರಲ್ಲಿ ಈ ರೋಮನ್ ಸಂತ ವ್ಯಾಲೆಂಟೈನ್ ಒಬ್ಬ ಧರ್ಮಗುರು ಮತ್ತು ವೈದ್ಯನೂ ಆಗಿದ್ದ ಆದರೆ ಅವರಮ್ಮನಿಗೆ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇರಲಿಲ್ಲ ಅದಕ್ಕೆ ಅವನು ತಾಯಿಗೇ ಚಿಕಿತ್ಸೆ ಕೊಡಲಿಲ್ಲ... ನರಳುತ್ತಾ ಸತ್ತೇ ಹೋದಳು ಪಾಪ...

ಇನ್ನೂ ಅನೇಕ ಅಪರಾಧಗಳನ್ನು ಮಾಡಿದ್ದ ಇವನನ್ನು ಜೈಲಿಗೆ ಹಾಕಲಾಯಿತು. ಅಲ್ಲಿಗೆ ಆಗಾಗ ಬರುತ್ತಿದ್ದ ಜೈಲರನ ಮಗಳನ್ನು ಪ್ರೀತಿಸಿಲು ಪ್ರಾರಂಭಿಸಿ ಹಲವಾರು ಪ್ರೇಮ ಪತ್ರ ಗಳನ್ನು ಬರೆಯುತ್ತಾನೆ.. ಇದರಿಂದ ಅವನನ್ನು ಪ್ರೇಮಿಗಳ ರಾಜ ಎಂದು ಬಿಂಬಿಸಲಾಗುತ್ತದೆ. ಮುಂದೆ ಹಲವಾರು ಶತಮಾನಗಳ ನಂತರ ಅಂದರೆ ಸರಿಸುಮಾರು ಹದಿನಾಲ್ಕುನೇ ಶತಮಾನದಲ್ಲಿ ಯೂರೋಪಿನಲ್ಲಿ ಇದಕ್ಕೆ ವಾಣಿಜ್ಯದ ಮೆರಗು ಕೊಟ್ಟು "ವ್ಯಾಲೆಂಟೈನ್ಸ್ ಡೇ" ಎಂದು ಆಚರಿಸಲು ಪ್ರಾರಂಭವಾಗುತ್ತದೆ.

ನೋಡಿ ಎಂತಹಾ ವಿಪರ್ಯಾಸ ಹಾಗು ದುರಂತ... ಇಂತಹ ಮಾತೃದ್ರೋಹಿಯನ್ನು ಪ್ರೇಮರಾಜ ಎಂದು ಜನರನ್ನು ಮರಳು ಮಾಡಲಾಗುತ್ತಿದೆ. ಇಂತಹ ವ್ಯಕ್ತಿಯ ನೆನಪಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸ ಬೇಕಾಗಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಪ್ರೀತಿ ಮತ್ತು ಪ್ರೇಮಕ್ಕೆ ಅಲೌಕಿಕವಾದ ಆಧ್ಯಾತ್ಮಿಕವಾದ ಮಹತ್ವವನ್ನು ರಾಧಾ-ಕೃಷ್ಣರ ಪ್ರೀತಿಯಲ್ಲಿ ಕಾಣುತ್ತೇವೆ.

ಸಮರ್ಪಣಾ ಭಾವ, ನಿಸ್ವಾರ್ಥ ಪ್ರೀತಿ ಪ್ರೇಮದ ಉತ್ಕೃಷ್ಟ ಉದಾಹರಣೆಯನ್ನು ತೋರಿಸಿದ್ದಾರೆ. ಶ್ರೀರಾಮ ಚಂದ್ರ, ಕೃಷ್ಣ ಪರಮಾತ್ಮ ಎರಡೂ ಅವತಾರಗಳಲ್ಲಿ ಪ್ರೀತಿ ಪ್ರೇಮ ಜೊತೆಗೆ ಸಂಸಾರದ ಜವಾಬ್ದಾರಿಯನ್ನೂ ಕಲಿಸುತ್ತಾರೆ. ಪಾಶ್ಚಾತ್ಯರ ವ್ಯಾಲೆಂಟೈನ್ಸ್ ಡೇ ನಂತರ ಚಿಲ್ಡ್ರನ್ಸ್ ಡೇ, ಆ ನಂತರ ಮದರ್ಸ್ ಡೇ ಫಾದರ್ಸ ಡೇಗಳು ಸ್ಚೇಚ್ಛಾಚರದ ಪಾಠ ಹೇಳಿದರೆ ನಮ್ಮ ಸಂಸ್ಕೃತಿಯ ಎಲ್ಲ ಹಬ್ಬಗಳೂ ಬಂಧು ಬಾಂಧವರೊಂದಿಗೆ ಆಚರಿಸುವುದಾಗಿರುತ್ತದೆ.

ಪ್ರೀತಿಸಲು ದಿನ ಬೇಕಿಲ್ಲ, ನಮ್ಮ ಎಲ್ಲ ಸಂಬಂಧಗಳಲ್ಲೂ ಪ್ರೀತಿ ಹುಡುಕೋಣ.ಪ್ರೀತಿ ಸಿಕ್ಕಿತೆ? ಎಲ್ಲಿದೆ ಎಂದು ಹುಡುಕುತಿತ್ತು ಜೀವ
ಎಲ್ಲೆಲ್ಲಿ ಹುಡುಕಲಿ ಎಲ್ಲಿದೆ ಎಂದು ಹುದುಕುತಿತ್ತು ಜೀವಪ್ರಕೃತಿಯ ಮಡಿಲಲ್ಲಿ ಇದೆಯೇ?ಅಂಬರದಲ್ಲಿ ಇದೆಯೇ?ಪಾತಾಳದಲ್ಲಿ ಇದೆಯೇ?
ಕಾಡಿನಲ್ಲಿ ಇದೆಯೇ?ಊರಿನಲ್ಲಿ ಇದೆಯೇ?ಎಲ್ಲೂ ಸಿಗಲಿಲ್ಲ ಪ್ರೀತಿ, ಹುಡುಕುತ ಹೊರಟಿತು ಜೀವ.

ತಾಯಿ ಮಗುವಿನ ಸಂಭಂಧದಲ್ಲಿ
ಗಂಡ ಹೆಂಡಿರ ನಡುವಿನಲ್ಲಿ
ಅಣ್ಣ ತಮ್ಮಂದಿರ ನಂಟಿನಲ್ಲಿ
ಅಕ್ಕ ತಂಗಿಯರ ಒಡನಾಟದಲ್ಲಿ
ಪ್ರೀಯತಮೆ ಪ್ರಿಯನ ಸಂಗದಲ್ಲಿ
ಎಲ್ಲೂ ನಿಜವಾದ ಪ್ರೀತಿ ಸಿಗಲೇ ಇಲ್ಲ ಎನ್ನುತಿತ್ತು ಜೀವ.

ಪ್ರಕೃತಿಯ ಕಣ ಕಣದಲ್ಲೂ ನಾನಿದ್ದೇನೆ ಪ್ರೀತಿಯು ಇದೆ ಎನ್ನುತಿತ್ತು ದೈವ
ಅಂಬರದಲ್ಲಿ ಇದೆ
ಪಾತಾಳದಲ್ಲಿ ಇದೆ
ಕಾಡಿನಲ್ಲಿ ಇದೆ
ನಾಡಿ ನಲ್ಲಿ ಇದೆ
ಎಲ್ಲೆಡೆಯೂ ಪ್ರೀತಿ ತುಂಬಿದೆ ಎನ್ನುತ್ತಿತ್ತು ದೈವ.

ತಾಯಿಯ ಕಣ್ಣಿನಲ್ಲಿ ಇದೆ ಮಗುವಿನ ನಗುವಿನಲ್ಲಿ ಇದೆಗಂಡನ ಅಕ್ಕರೆಯಲ್ಲಿ ಇದೆ ಹೆಂಡತಿಯ ಒಲವಿನಲ್ಲಿ ಇದೆಅಣ್ಣನ ಗದರುವಿಕೆಯಲ್ಲಿದೆ ತಮ್ಮನ ಜಗಳದಲ್ಲಿ ಇದೆಅಕ್ಕನ ಬುದ್ದಿ ಮಾತಿನಲ್ಲಿ ಇದೆ ತಂಗಿಯ ಹಠದಲ್ಲಿ ಇದೆಪ್ರಿಯತಮೆಯ ಹುಸಿ ಮುನಿಸಿನಲಿ ಪ್ರಿಯನ ತುಂಟಾಟದಲ್ಲಿ ಇದೆಎಲ್ಲೆಲ್ಲೂ ಪ್ರೀತಿಯೇ ತುಂಬಿದೆ ಎನ್ನುತಿತ್ತು ದೈವ.

ಜೀವ ದೈವದ ನಡುವೆ ಮಾತಿಗಿಳಿದಾಗ ಹೀಗೆ ಹೇಳಿತು ದೈವಎಲೈ ಜೀವವೇ ನೀನು ಬರೆ ಪಡೆಯುವ ಪ್ರೀತಿಯನ್ನು ಹುಡುಕುತ್ತ ಇದ್ದಿ ,ಅದಕ್ಕೆ ಅದು ನಿನಗೆ ಸಿಗುತ್ತಿಲ್ಲ.ಜೀವನದ ಒಂದು ಸತ್ಯ ತಿಳಿಯೋ ಜೀವ, ಪ್ರೀತಿ ಬರೆ ಪಡೆಯುವ ವಸ್ತುವಲ್ಲ?ನೀನು ಕೊಡುವ ಪ್ರೀತಿ ಎಲ್ಲೂ ಸಿಗುತ್ತದೆಪ್ರೀತಿಯ ಸಾರ್ಥಕ, ಪಡೆಯುವ ಪ್ರೀತಿಗಿಂತ ಕೊಡುವ ಪ್ರೀತಿಯಲ್ಲೇ ಇದೆ ಎಂದಿತು ದೈವ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು