LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಚಿರತೆ ಹತ್ಯೆಗೆ ವ್ಯಾಪಕ ಆಕ್ರೋಶ

ಬೆಂಗಳೂರು: ಕಳೆದ ಮೂರು ದಿನಗಳಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್‍ನ ಕೃಷ್ಣಾರೆಡ್ಡಿಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು.

ಆದರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಡಬಲ್ ಬ್ಯಾರಲ್ ಗನ್‍ನಿಂದ ಗುಂಡು ಹಾರಿಸಿದ್ದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿತ್ತು. ಚಿರತೆ ಸಾವು ಜನರ ಆಕ್ರೋಶ ಕಾರಣವಾಗಿದ್ದು, ಅರಣ್ಯ ಇಲಾಖೆಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಹೌದು ಕಾರ್ಯಾಚರಣೆ ಸಂದರ್ಭದಲ್ಲಿ ಭಯ ಬಿದ್ದ ಚಿರತೆ ಬಲೆಯ ಕಡೆ ಓಡಿ ಬಂದಿತ್ತು. ಚಿರತೆ ಬಲೆಗೆ ಬಂದು ಬಿದ್ದಾಗ ವೈದ್ಯರು ಅರವಳಿಕೆ ನೀಡಬಹುದಿತ್ತು. ಆದರೆ ಬಲೆಗೆ ಬಿದ್ದ ಬಳಿಕ ಚಿರತೆಯ ಬೆನ್ನಿನ ಮೇಲೆ ಫೈರಿಂಗ್ ಮಾಡಲಾಗಿತ್ತು. ಬೆನ್ನಿಂದ ಹೊಕ್ಕ ಗುಂಡು ಎದೆಗೆ ನುಗ್ಗಿತ್ತು. ಪರಿಣಾಮ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.

ಇನ್ನು ಕಾರ್ಯಾಚರಣೆ ವೇಳೆ ತಂಡದಲ್ಲಿ ಉತ್ತಮ ತರಬೇತಿ ಪಡೆದಿದ್ದ ವೈದ್ಯರು ಇರಲಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇಷ್ಟು ದೊಡ್ಡ ಕಾರ್ಯಾಚರಣೆ ಆಗಿದ್ದರು ನುರಿತ ತಂಡವನ್ನ ಕರೆಸಿರಲಿಲ್ಲ. ಅರವಳಿಕೆ ನೀಡಲು ಹಲವಾರು ಜನ ವೈದ್ಯರ ತಂಡವಿತ್ತು. ಕತ್ತು ಅಥವಾ ತೊಡೆ ಭಾಗಕ್ಕೆ ಅರವಳಿಕೆಯನ್ನು ಸಾಮಾನ್ಯವಾಗಿ ಡಾಟ್ ಮಾಡಲಾಗುತ್ತೆ.

ಸಾಮಾನ್ಯವಾಗಿ ಮಾಂಸ ಹೆಚ್ಚಾಗಿ ಇರುವ ಕಡೆ ಅರವಳಿಕೆ ನೀಡಲಾಗುತ್ತದೆ. ಅರವಳಿಕೆ ನೀಡಿದ ಬಳಿಕ ಕನಿಷ್ಠ ಹತ್ತು ನಿಮಿಷ ಬೇಕು ಒಂದು ಪ್ರಾಣಿ ಪ್ರಜ್ಞೆ ತಪ್ಪಲು. ಗ್ಯಾಸ್ ಗನ್ ಮೂಲಕ ಹೆಚ್ಚಿನ ಪ್ರೆಶರ್‍ನಲ್ಲಿ ಅರವಳಿಕರ ಇಂಜೆಕ್ಟ್ ಮಾಡಬೇಕು.ಇದು ಸರಿಯಾಗಿ ಆಗದೆ ಇದ್ದರೆ ಚಿರತೆಗಳು ಇನ್ನಷ್ಟು ಕೋಪಗೊಳ್ಳುತ್ತವೆ. ನಿನ್ನೆಯೂ (ನ.01) ಕೂಡ ಇದೇ ರೀತಿ ಆಗಿತ್ತು.

ಮೊದಲನೇ ಬಾರಿ ಅರವಳಿಕೆ ನೀಡಿದಾಗ ಸರಿಯಾಗಿ ಇಂಜೆಕ್ಟ್ ಆಗಿರಲಿಲ್ಲ. ಇದರಿಂದ ಚಿರತೆ ಹತ್ತಿರ ಇದ್ದ ವೈದ್ಯರಿಗೆ ಅಟ್ಯಾಕ್ ಮಾಡಿತ್ತು. ಎರಡನೇ ಬಾರಿಯ ಕಾರ್ಯಾಚರಣೆಯಲ್ಲಿ ಅರವಳಿಕೆ ನೀಡಲು ಎಲ್ಲಾ ಅವಕಾಶವಿತ್ತು, ಆದರೆ ಅರವಳಿಕೆ ನೀಡದೆ ಚಿರತೆಯನ್ನು ಕೊಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕೊಲ್ಲುವ ಸಲುವಾಗಿ ಇಷ್ಟೊಂದು ಕಾರ್ಯತಂತ್ರ ರೂಪಿಸಿದ್ದು ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಮೊದಲನೇ ಬಾರಿ ಅಟ್ಯಾಕ್ ಮಾಡಿದಾಗ ನುರಿತ ತಜ್ಞರನ್ನು ಕೂಡಲೇ ಸ್ಥಳಕ್ಕೆ ಕರೆಸಬಹುದಿತ್ತು. ಮೊದಲೇ ಫೆಲ್ಯೂರ್ ಆಗಿದ್ದ ತಂಡವನ್ನೇ ಮತ್ತೆ ಅರವಳಿಕೆ ನೀಡಲು ಮುಂದೆ ಬಿಡಲಾಗಿತ್ತು. ಅರಣ್ಯ ಇಲಾಖೆಯ ಚಿರತೆ ಕಾರ್ಯಾಚರಣೆ ವಿರುದ್ಧ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು