LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಕನ್ನಡಾಂಬೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಿಂದ ಮಹಿಳಾ ದಿನಾಚರಣೆ

ಬೆಂಗಳೂರು: ಪ್ರತಿಷ್ಠಿತ ಕನ್ನಡಾಂಬೆ ಸಂಸ್ಥೆ ವತಿಯಿಂದ “ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕನ್ನಡ ಕಟ್ಟಾಳುಗಳು ಕುರಿತು ವಿಚಾರ ಸಂಕಿರಣ” ಕಾರ್ಯಕ್ರಮ ನಯನ ಸಭಾಂಗಣದಲ್ಲಿ ನಡೆಯಿತು.
೨೦೨೬ನೇ ವರ್ಷದ ಪದ್ಮಶ್ರೀ ಪ್ರಶಸ್ತಿ ಗೆ ಬಾಜಿನರಾಗಿರುವ ಗೌರವಾನ್ವಿತ ಕರ್ನಾಟಕದ ಮದರ್ ತೆರೇಸಾ ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾದ ಡಾ. ಸುಶೀಲಮ್ಮ ಅವರಿಗೆ “ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ನೆರವೇರಿಸಿದರು. ದಿವ್ಯ ಸಾನಿಧ್ಯವನ್ನು ಚಿಕ್ಕಮಗಳೂರಿನ ಡಾ. ಅಣ್ಣೇಗೌಡ ಮಹಾರುದ್ರನಾಥ ಅಘೋರಿ ರವರು ವಹಿಸಿದ್ದರು. ಅಧ್ಯಕ್ಷತೆಯನ್ನು ಸಾಹಿತಿಯಾಗು ಉದ್ಯಮಿ ಡಾ. ಎಸ್ ಅಕ್ಬರ್ ಭಾಷಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯುವ ವಿಜ್ಞಾನಿ ಡಾ. ಮಾದೇವ ನಾಗರಾಳ, ಕನ್ನಡ ಪಕ್ಷದ ಅಧ್ಯಕ್ಷ ಡಾ. ಪಿ. ಪುರುಷೋತ್ತಮ್, ವಕೀಲರಾದ ಡಾ. ವನಿತಾ ಯು. ಎಂ. ಸಮಾಜ ಸೇವಕ ಡಾ. ಸಿ ಎಂ ರಾಜಶೇಖರ್, ಚಲನಚಿತ್ರ ನಿರ್ಮಾಪಕಿ ಡಾ. ಸುಕನ್ಯಾ ಹಿರೇಮಠ, ಖ್ಯಾತ ಹಿನ್ನೆಲೆ ಗಾಯಕಿ ಶ್ವೇತಾ ಹಿರೇಮಠ, ನೃತ್ಯ ನಿರ್ದೇಶಕಿ ಪ್ರೀತಿ ಸಂಡೂರ್, ರಕ್ತದಾನಿ ಡಾ. ಟಿ. ತ್ಯಾಗರಾಜು ಮುಂತಾದವರು ಭಾಗಿ ಆಗಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವರಲಕ್ಷಿ÷್ಮ ಗುಣವಂತ ಮಂಜು ಎಲ್ಲರನ್ನು ಸ್ವಾಗತಿಸಿದರು. ಪದ್ಮಶ್ರೀ ಪುರಸ್ಕೃತ ಡಾ. ಸುಶೀಲಮ್ಮ ಅವರು ಮಾತನಾಡಿ, “ ಶ್ರದ್ಧೆ ಭಕ್ತಿ ಮತ್ತು ಶಿಸ್ತಿನ ಸಂಗಮವಾಗಿ ಕಾರ್ಯಕ್ರಮಗಳು ಮೂಡಿ ಬಂದಾಗ ಹೊಸ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿರಂತರ ಸೇವೆ ಮತ್ತು ನಾಡಿನ ಏಳಿಗೆಯ ಬಗ್ಗೆ ಕಾಳಜಿ ಇರುವವರು ಕನ್ನಡದ ಕಟ್ಟಾಳುಗಳಾಗುತ್ತಾರೆ. ಸಾಧಕರ ಸಾಲಿನಲ್ಲಿ ತಾವು ಇರಬೇಕಾದರೆ ನಾಡಿನ ಬಗ್ಗೆ ನುಡಿಯ ಬಗ್ಗೆ ಗೌರವ ಮತ್ತು ಪ್ರೀತಿ ಇರಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ಕುವೆಂಪು ಅವರ ನುಡಿಗಳಂತೆ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ, ಶ್ರೇಷ್ಠತೆಯ ಚಿಂತನೆ, ಸಕಾರಾತ್ಮಕ ಆಲೋಚನೆ, ಅಪಾರವಾದ ಪುಸ್ತಕ ಪ್ರೀತಿ, ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಮಾತನಾಡಿ, ನಾಡಿನ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷವಾಗಿ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಪದ್ಮಶ್ರೀ ಡಾ. ಸುಶೀಲಮ್ಮ ಅವರು ಮಾಡುತ್ತಿರುವ ಸೇವೆ ದಶ ದಿಕ್ಕುಗಳಿಗೂ ಹರಡಿದೆ. ನಿಸ್ವಾರ್ಥ ಸೇವೆಯ ಪ್ರಾಮಾಣಿಕ ಪ್ರತಿನಿಧಿಯಾಗಿ ಕನ್ನಡ ನಾಡಿನಲ್ಲಿ ಅವರು ಮದರ್ ತೆರೇಸಾ ಆಗಿದ್ದಾರೆ. ಇಂತಹ ದಿವ್ಯ ಚೇತನ ಶಕ್ತಿ ನಮ್ಮ ನಾಡಿನ ಕೀರ್ತಿ ಎoದು ಬಣ್ಣಿಸಿದರು.
ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಾಡಿಗೆ ಕೀರ್ತಿ ತಂದ ವಿವಿಧ ಕ್ಷೇತ್ರದ ಸಾಧಕರನ್ನು ವಿವಿಧ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಿ ಪುರಸ್ಕರಿಸಲಾಯಿತು. ಪ್ರೀತಿ ಸಂಡೂರು ಅವರ ನಟರನ್ ಸ್ಕೂಲ್ ಆಫ್ ಡಾನ್ಸ್ ವತಿಯಿಂದ ವಿಶೇಷವಾದ ಭರತನಾಟ್ಯ ಪ್ರಸ್ತುತಪಡಿಸಲಾಯಿತು. ಶ್ರೀಮತಿ ಸವಿಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು