ಬೆಂಗಳೂರು: ಪ್ರತಿಭಟನೆ ಮಾಡೋದು ಅವರ ಹಕ್ಕು, ಸಂವಿಧಾನಾತ್ಮಕವಾಗಿ ಅವಕಾಶ ಕೊಟ್ಟಿದ್ದಾರೆ. ಆದರೆ ಯಾವ ವಿಷಯದಲ್ಲಿ ಪ್ರತಿಭಟನೆ ಮಾಡುತ್ತಾರೆ, ಯಾಕೆ ಮಾಡುತ್ತಾರೆ ಅನ್ನೋದು ಮುಖ್ಯ. ಅವರ ಅಜೆಂಡ ಏನಿದೆ ಅನ್ನೋದನ್ನ ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಂ ಧರ್ಮಗುರುಗಳಿಂದ ಕಾಂಗ್ರೆಸ್ಗೆ ಎಚ್ಚರಿಕೆ ವಿಚಾರ. ಕೆಲವರು ಅವರನ್ನು ಡಿಸ್ಟರ್ಬ್ ಮಾಡಲು ತುಪ್ಪ ಸುರಿಯುತ್ತಾರೆ. ದೇಶದ ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತರಬೇಕು ಅನ್ನೋದೇ ಕಾಂಗ್ರೆಸ್ ಪಕ್ಷದ ಮುಖ್ಯ ಧ್ಯೇಯ. ನಮ್ಮ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಕೆಲವು ಸಂದರ್ಭಗಳಲ್ಲಿ ತಪ್ಪುಗಳು ಆಗಿದ್ರೂ ಅದನ್ನ ಸರಿಪಡಿಸಿಕೊಂಡು ಮುಂದಕ್ಕೆ ಹೋಗುತ್ತೇವೆ. ಆ ಸಮುದಾಯಗಳು ಕೆಲವು ಸಂದರ್ಭದಲ್ಲಿ ಬೇರೆ ಬೇರೆ ತೀರ್ಮಾನಗಳನ್ನ ಮಾಡಿಬಿಡುತ್ತವೆ. ಅಂತಹ ಸಂದರ್ಭದಲ್ಲಿ ನಾವು ತಪ್ಪಾಗಿದ್ದರೆ ಸರಿಪಡಿಸೋಣ ಬನ್ನಿ ಅಂತ ಮಾತನ್ನಾಡ್ತೇವೆ. ಒಂದು ಅಸೆಂಬ್ಲಿ ಟಿಕೆಟ್ಗೋಸ್ಕರ ಇಂತಹ ದೊಡ್ಡ ತೀರ್ಮಾನವನ್ನು ಅವರು ಮಾಡಬಾರದು. ನಮ್ಮ ಅಧ್ಯಕ್ಷರಾಗಲಿ, ಸಿಎಂ ಆಗಲಿ ನಾವೆಲ್ಲ ಅವರ ಜೊತೆ ಮಾತನ್ನಾಡಿ ಸರಿಪಡಿಸಿಕೊಳ್ಳುತ್ತೇವೆ. ಅದರಲ್ಲೇನೂ ತೊಂದರೆ ಆಗುವುದಿಲ್ಲ
ಅವರ ಬೇಡಿಕೆಗಳು, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದು ಒಂದು ಹಂತ. ಆದರೆ ಅವರು ಕಾಂಗ್ರೆಸ್ ನ ವಿರುದ್ಧ ತೀರ್ಮಾನ ತೆಗೆದುಕೊಳ್ಳಬಾರದು ಅನ್ನೋದು ನಮ್ಮ ಇಚ್ಛೆ. ಅದಕ್ಕಾಗಿ ನಾವು ಅವರ ಜೊತೆ ಮಾತನಾಡುತ್ತೇವೆ ಎಂದರು.
ಪ್ರತಿಭಟನೆ ಎಲ್ಲರ ಹಕ್ಕು: ಪರಂ



