ಬೆಂಗಳೂರು: ವಿಧಾನಸಭೆಯ ವಿಪಕ್ಷ ನಾಯಕನಾಗಿ ಇಷ್ಟು ದಿನವಾದ್ರೂ ಸರ್ಕಾರಿ ನಿವಾಸ ಹಂಚಿಕೆಯಾಗಿಲ್ಲ ನನಗೆ ಈ ಕೂಡಲೇ ನಿವಾಸ ಹಂಚಿಕೆ ಮಾಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಮೂರು ನಿವಾಸದ ವಿಳಾಸ ಬರೆದು, ಇದರಲ್ಲಿ ಒಂದನ್ನು ನನಗೆ ಹಂಚಿಕೆ ಮಾಡಿ ಎಂದು ತಿಳಿಸಿದ್ದಾರೆ.
ಕುಮಾರಕೃಪ ಪೂರ್ವದಲ್ಲಿರುವ ಸರ್ಕಾರಿ ನಿವಾಸ, ರೇಸ್ ವ್ಯೂ ಕಾಟೇಜ್ನಲ್ಲಿರುವ ಸರ್ಕಾರಿ ನಿವಾಸ, ರೇಸ್ ವ್ಯೂ ಕಾಟೇಜ್ನಲ್ಲಿರುವ ಸರ್ಕಾರಿ ನಿವಾಸ ಈ ಮೂರು ಸರ್ಕಾರಿ ನಿವಾಸದ ಪೈಕಿ ಒಂದನ್ನು ನನಗೆ ಹಂಚಿಕೆ ಮಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈವರೆಗೂ ನನಗೆ ಸರ್ಕಾರಿ ನಿವಾಸ ಹಂಚಿಕೆ ಆಗಿಲ್ಲ. ಈ ನಿಟ್ಟಿನಲ್ಲಿ ನಾನು ಏಪ್ರಿಲ್ 2026 ರಿಂದ ನಾನು ಸರ್ಕಾರಿ ನಿವಾಸ ಭತ್ಯೆ ಪಡೆಯುತ್ತಿಲ್ಲ. ಸರ್ಕಾರಿ ನಿವಾಸದ ಭತ್ಯೆ ಪಡೆಯದೇ ಪ್ರತಿಭಟನೆಗೆ ನಿರ್ಧರಿಸಿದ್ದೇನೆ ಎಂದು ಎಚ್ಚರಿಸಿದ್ದಾರೆ. ಇದರ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಲಿ ವಾಸವಿರುವ ಸರ್ಕಾರಿ ನಿವಾಸವನ್ನೇ ನೀಡಿ ಎಂದು ಬೇಡಿಕೆಯಿಟ್ಟಿದ್ದಾರೆ.
ಸರ್ಕಾರಿ ನಿವಾಸಕ್ಕೆ ಬೇಡಿಕೆಯಿಟ್ಟ ಆರ್.ಅಶೋಕ್



