ಕೋಲಾರ: ಸಂಸತ್ತಿನಲ್ಲಿ ಚರ್ಚೆ ಮಾಡದೆ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಲಾಗಿತ್ತು. ಕಳೆದ 2023ರಲ್ಲಿ ಮಂಡಿಸಿದ ವಿಧೇಯಕವನ್ನೇ ಮತ್ತೆ ಮಂಡಿಸಲಾಯಿತು. ವಿಧೇಯಕ ಮಂಡಿಸುವ ಮೊದಲು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ಆಗಬೇಕಾಗಿತ್ತು. ಚರ್ಚೆ ಇಲ್ಲದೆ ಮಂಡಿಸಿದ ಕಾರಣ ಮಹಿಳಾ ಮೀಸಲಾತಿ ವಿಧೇಯಕವನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವಿರೋಧಿಸಿದ ಕಾರಣ ವಿಧೇಯಕಕ್ಕೆ ಸೋಲು ಆಯಿತು. ವಿಧೇಯಕ ಮಂಡನೆ ಹಿಂದೆ ಆಡಳಿತರೂಢ ಬಿಜೆಪಿ ರಹಸ್ಯ ಕಾರ್ಯಸೂಚಿ ಅಡಗಿದೆ ಎಂದು ಕೆ.ಜಿ.ಎಫ್. ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕೋಲಾರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅವರು ಮಹಿಳೆಯರ ಸಬಲೀಕರಣಕ್ಕೆ ಸಮಾನವಾದ ಅವಕಾಶಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಧಾನಸಭೆ ಮತ್ತು ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಮೀಸಲಾತಿ ಅಗತ್ಯವಿದೆ. ಕೇಂದ್ರ ಸರ್ಕಾರ ವಿಧೇಯಕ ಮಂಡಿಸುವ ಮೊದಲು ಎಲ್ಲಾ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ಯಾವುದೇ ಚರ್ಚೆ ಇಲ್ಲದೆ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಲ್ ಮಂಡಿಸಿದ ಕಾರಣ ಸೋಲು ಅನುಭವಿಸಬೇಕಾಯಿತು. ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ವಿರೋಧಿ ಎಂದು ಬಿಜೆಪಿ ಹಾಗೂ ಅದರ ಅಂಗ ಪಕ್ಷಗಳು ದೇಶಾದ್ಯಂತ ಅಪಪ್ರಚಾರ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದಲ್ಲಿ ಕಾಂಗ್ರೆಸ್ ವ್ಯಾಪಕವಾದ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಹಿಳಾ ಸಬಲೀಕರಣ ಸಮಾನತೆ ಸ್ಥಾನ ಮಾನಗಳ ಕುರಿತು ಜಾಗೃತಿಗಳು ಅಗತ್ಯವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿಧೇಯಕದಲ್ಲಿ ಹಲವಾರು ಲೋಪದೋಶಗಳು ಇವೆ. ಏಕಾಏಕಿ ಮೀಸಲಾತಿ ಪ್ರಸ್ತಾಪಿಸಿರುವುದರಿಂದ ಎಲ್ಲಾ ವಿಪಕ್ಷಗಳು ವಿರೋಧಿಸಿವೆ. ಹೊರತಾಗಿ ಕಾಂಗ್ರೆಸ್ ಸೇರಿದಂತೆ ಮಹಿಳಾ ಮೀಸಲಾತಿ ಜಾರಿಗೆ ವಿರೋಧಿವಿಲ್ಲ ಎಂದು ಸ್ವಷ್ಟ ಪಡೆಸಿದ್ದರೂ ಸಹ ಆಡಳಿತ ರೂಢ ಬಿಜೆಪಿ ಕಾಂಗ್ರೇಸ್ ಪಕ್ಷದ ಮೇಲೆ ನಿರಾಧಾರ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.ಮಹಿಳಾ ಸಬಲೀಕರಣ. ಮಹಿಳೆಯರ ಬೆಳವಣಿಗೆ, ಮಹಿಳೆಯ ಸಾಮಾಜಿಕ ನ್ಯಾಯಕ್ಕಾಗಿ ಚರ್ಚೆಗಳ ಅಗತ್ಯವಿತ್ತು. ಅದರೆ ಅದಕ್ಕೆ ಅವಕಾಶ ನೀಡದೆ , ವಿಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸದೆ ಏಕಾಏಕಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಲು ಮುಂದಾಗಿರುವುದನ್ನು ವಿಪಕ್ಷಗಳು ವಿರೋಧಿಸುವುದು ಸಮಂಜಸವಾಗಿದೆ. ಈಗಾಗಲೇ ಶೇ 33 ರಷ್ಟು ಮೀಸಲಾತಿ ಬಿಲ್ ಪಾಸ್ ಅಗಿತ್ತು ಅದರೆ ಡಿ ಲಿಮಿಟೇಷನ್ ಸಂದರ್ಭದಲ್ಲಿ ಶೇ 50 ಮಹಿಳಾ ಮೀಸಲಾತಿ ಜಾರಿ ಮಾಡುವಂತ ಅವಶ್ಯಕತೆ ಇರಲಿಲ್ಲ. ಬಿಜೆಪಿ ಪಕ್ಷಕ್ಕೆ ಮಹಿಳೆಯರ ಬಗ್ಗೆ ಆಲೋಚನೆಗಳನ್ನು ಏನಿದೆ ಎಂಬುವುದು ಪ್ರಸ್ತಾಪಿಸದೆ ಏಕಾ ಏಕಿ ಬಿಲ್ ಪಾಸ್ ಮಾಡಲು ಮುಂದಾಗಿರುವುದು ಅವೈಜ್ಞಾನಿಕತೆಯ ಪರಮಾವಧಿಯಾಗಿದೆ ಎಂದರು.
ಕಾಂಗ್ರೇಸ್ ಪಕ್ಷವು ಕಳೆದ 70 ವರ್ಷದ ಆಡಳಿತದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನಗಳನ್ನು ಕಲ್ಪಿಸಿದೆೆ. ಶೇ 33 ರಷ್ಟು ಮೀಸಲಾತಿ ಜಾರಿಗೆ ತಂದಿದೆ. ವಿಶೇಷವಾದ ಕಾಯ್ದೆಗಳನ್ನು ಜಾರಿಗೆ ತಂದು ಮಹಿಳೆಯರ ಸಂರಕ್ಷಣೆ, ಮಹಿಳೆಯರಿಗೆ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಿ ಕಾಪಾಡಿ ಕೊಂಡು ಬಂದಿರುವುದು ಕಾಂಗ್ರೇಸ್ ಪಕ್ಷ ಎಂಬುವುದು ಅರಿಯ ಬೇಕಾಗಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮಗಳು ನೀಡಿ ಜನಪರ ಆಡಳಿತ ನಡೆಸುತ್ತಿದೆ ಮಹಿಳೆಯರಿಗೆ ಸ್ಪಂದನೆ ಸಿಗುವುದು ಕಾಂಗ್ರೇಸ್ ಪಕ್ಷದಲ್ಲಿ ಎಂಬುವುದು ಈಗಾಗಲೇ ವಿಶೇಷವಾದ ಯೋಜನೆಗಳನ್ನು ರೂಪಿಸಿ ರುಜುವಾತು ಪಡೆಸಿದೆ ಎಂದು ತಿಳಿಸಿದರು. ಕಳೆದ 2023ರಲ್ಲಿ ಲೋಕ ಸಭೆ ಮತ್ತುರಾಜ್ಯ ಸಭೆಯಲ್ಲಿ ಮಂಡನೆಯಾಗಿ ಒಮ್ಮತದಿಂದಅAಗೀಕಾರವಾದ ಮಸೂದೆಯನ್ನು ಜಾರಿಗೆ ತರದೆ ದೇಶದಲ್ಲಿ ನಡೆಯುತ್ತಿದ್ದ 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಮಹಿಳಾ ವಿರೋಧಿಯೆಂದು ಬಿಂಬಿಸುವAತ ಷಡ್ಯಂತರವನ್ನು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮಾಡಿತು ಎಂಬ ಸತ್ಯಂಶವನ್ನು ಜನರ ಮುಂದಿಡ ಬೇಕಾಗಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರನ್ನು ಜಾಗೃತಿಗೊಳಿಸಲಾಗುತ್ತಿದೆ ಎಂದರು.ಯುಪಿಎ ಸರ್ಕಾರವು ಸಿದ್ದಪಡಿಸಿದ ಮಹಿಳಾ ಮೀಸಲಾತಿ ಬಿಲ್ನ್ನು 2023ರಲ್ಲಿ ಮಂಡಿಸಿ ಒಪ್ಪಿಗೆ ಪಡೆದು 2026ರ ಜನಗಣತಿ ನಂತರ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ನಂತರದಲ್ಲಿ ಜಾರಿಗೆ ತರುವ ಮಾತುಗಳನ್ನಾಡಿದ್ದ ಕೇಂದ್ರ ಸರ್ಕಾರವು 5 ರಾಜ್ಯಗಳ ಚುನಾವಣೆಗಳ ಸಂದರ್ಭಧಲ್ಲಿ ಜನರ ಬಳಿ ಹೋಗಲು ಮುಖವಿಲ್ಲದೆ ಮತ್ತೊಮ್ಮೆ ನಾರಿಶಕ್ತಿ ವಂದನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವAತ ನಾಟಕವಾಡಿ ಮತದಾರರನ್ನು ಮರಳು ಮಾಡುವ ಸಂಚು ಹೊಡಿತ್ತು .ಮಹಿಳೆಯರ ಮೀಸಲಾತಿ ನಿಜವಾದ ವಿರೋಧಿಗಳು ಬಿಜೆಪಿ ಹೊರತಾಗಿ ಕಾಂಗ್ರೇಸ್ ಪಕ್ಷವಲ್ಲ ಎಂದು ಪ್ರತಿಪಾದಿಸಿದರು. ಬಿಜೆಪಿ ಪಕ್ಷಕ್ಕೆ ಮಹಿಳೆಯರ ಮೀಸಲಾತಿ ಬಗ್ಗೆ ನಿಜವಾದ ಕಾಳಜಿ ಇದ್ದರೆ ಈಗಲು ಮಹಿಳೆಯರಿಗೆ ಶೇ 33 ರಷ್ಟು ಸಂಸದರ ಸ್ಥಾನವನ್ನು ಬಿಟ್ಟು ಕೊಡುವ ಮೂಲಕ ಸಾಭೀತು ಪಡೆಸಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಹಿಳಾ ಮೀಸಲಾತಿಯನ್ನು ಚುನಾವಣೆ ಹಾಗೂ ಕ್ಷೇತ್ರ ವಿಂಗಡಣೆ,ಜನಗಣತಿ ಸಂದರ್ಭದಲ್ಲಿ ಪ್ರಸ್ತಾಪಿಸಿದೆ ಎಂದು ದೂರಿದರು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುವುದಕ್ಕ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅಮಾನುಷ ಪ್ರಕರಣ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಇತ್ತು . ಮಹಿಳಾ ಮೀಸಲಾತಿ ಚರ್ಚೆಗಳಾಗದೆ ಜಾರಿ ಮಾಡುವುದರಿಂದ ದಕ್ಷಿಣಾ ರಾಜ್ಯಗಳಲ್ಲಿ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಾಗದು. ಉತ್ತರ ಭಾರತದಲ್ಲಿ ಶಿಕ್ಷಣಸ್ಥರ ಸಂಖ್ಯೆ ಕಡಿಮೆ ಇರುವುದು. ಅದರೆ ದಕ್ಷಿಣ ಭಾರತದಲ್ಲಿ ಶಿಕ್ಷಣಸ್ಥರ ಸಂಖ್ಯೆ ಹೆಚ್ಚಿದೆ ಎಂದು ವಿವರಿಸಿದರು. ಕೆ.ಪಿ.ಸಿ.ಸಿ. ವಸಂತ ಕವಿತಾ ರೆಡ್ಡಿ ಮಾತನಾಡಿ ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ನೇತ್ರತ್ವದಲ್ಲಿ ಮಹಿಳೆಯರ ಮೀಸಲಾತಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ. ಕಾಂಗ್ರೆಸ್ ಪಕ್ಷವು ಕೇಂದ್ರದ ಆಡಳಿತ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ದ ನೂತನವಾದ ಕಾನೂನುಗಳನ್ನು ಜಾರಿಗೆ ತರಲಾಯಿತು, ಗರ್ಭಿಣಿ ಮಹಿಳೆಯರಿಗೆ ರಜೆ, ಪೋಕ್ಸೋ ಕಾಯ್ದೆ, ಮಹಿಳೆಯರ ಸಂರಕ್ಷಣೆಗೆ ವಿಶೇಷವಾದ ಅನೇಕ ಕಾನೂನುಗಳನ್ನು ಅನುಷ್ಟಕ್ಕೆ ತಂದಿದೆ ಅದರೆ ಬಿಜೆಪಿ ಭೇಟಿ ಬಚಾವೋ, ಭೇಟಿ ಪಡವೂ ಎಂಬುವುದು ಪ್ರಚಾರಕ್ಕೆ ಸಿಮೀತವಾಯಿತೆ ಹೊರತಾಗಿ ಅನುಷ್ಟಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ, ಮನಮೋಹನ್ ಸಿಂಗ್, ನರಸಿಂಹರಾವ್ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರೂ ಸಹ ಬಿಲ್ ಪಾಸ್ ಆಗಲಿಲ್ಲ. ಎಂದ ಅವರು ಕಾಂಗ್ರೆಸ್ ಪಕ್ಷದ ಆಡಳಿತ ಇರುವ ಹಲವಾರು ರಾಜ್ಯಗಳಲ್ಲಿ ಶೇ 50 ರಷ್ಟು ಮೀಸಲಾತಿಯನ್ನು ನೀಡಿದೆ ಅದರೆ ಪಾರ್ಲಿಮೆಂಟ್ನ ಬಿಜೆಪಿ ಆಡಳಿತದಲ್ಲಿ ಮಾತ್ರ ಸಾಧ್ಯವಾಗದೆ ಇರುವುದಕ್ಕೆ ಇಚ್ಚಾ ಕೊರತೆಯೇ ಕಾರಣ ಎಂದು ಆರೋಪಿಸಿದ ಅವರು ಮಹಿಳಾ ಮೀಸಲಾತಿ ಕುರಿತು ಚರ್ಚೆಗಳಾಗಿ ಜಾರಿಗೆ ತರಬೇಕೆಂದು ಆಗ್ರಹ ಪಡೆಸಿದರು. ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹೇಮ ಮಾಲಿನಿ, ಪದಾಧಿಕಾರಿಗಳಾದ ಮಂಗಳ, ಶ್ರೀನಿವಾಸಪುರ ಉಪಾಧ್ಯಕ್ಷೆ ಉಮಾದೇವಿ,ಬಂಗಾರಪೇಟೆ ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಶ್ರೀನಿವಾಸ್, ಮಂಜುನಾಥ್ ಉಪಸ್ಥಿತರಿದ್ದರು.
ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಚರ್ಚಿಸದೆ ಬಿಜೆಪಿ ಮಹಿಳಾ ಮೀಸಲಾತಿ ವಿಧೇಯಕ ಮಂಡನೆ; ರೂಪಕಲಾ ಶಶಿಧರ್



