ಕೋಲಾರ: ಕಾಲೇಜು ಎಂಬುದು ಗ್ರಾಮ ದೇವತೆಯ ತೇರು ಇದ್ದಂತೆ. ಆ ತೇರಿನ ಹಗ್ಗವನ್ನು ಒಟ್ಟಾಗಿ ಗಟ್ಟಿಯಾಗಿ ಹಿಡಿದು ಎಳೆದಾಗ, ಅದು ಇಡೀ ಊರೆಲ್ಲಾ ಮೆರವಣಿಗೆ ಮುಗಿಸಿ ಕೊನೆಗೆ ಹೇಗೆ ಅದೇ ಮೂಲ ಜಾಗಕ್ಕೆ ಬಂದು ನಿಲ್ಲುತ್ತದೆಯೋ, ಹಾಗೆಯೇ ವಿದ್ಯಾರ್ಥಿಗಳು ಸಹ ವಿದ್ಯೆ ಎನ್ನುವ ತೇರಿನ ಹಗ್ಗವನ್ನು ಮಧ್ಯದಲ್ಲಿ ಬಿಡದೇ ಅಂದುಕೊಂಡ ಗುರಿ ಮುಟ್ಟುವ ತನಕ ನಿಲ್ಲಬಾರದು ಎಂದು ಶಾಸಕ ಕೊತ್ತೂರು ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಟಿ ಚನ್ನಯ್ಯ ರಂಗಮAದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಲಕರ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಪುಸ್ತಕ ತಾಯಿ ಪೆನ್ನು ತಂದೆ, ಹೃದಯ ಗುರುಗಳು ಎನ್ನುವ ಧ್ಯೆಯವನ್ನಿಟ್ಟುಕೊಂಡಾಗ ಮಾತ್ರ ಯಶಸ್ಸಿ ಸಾಧ್ಯ ಹಾಗೂ ಭಾರತದ ದೇಶದಲ್ಲಿ ವಿದ್ಯೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರೇ ಮಾರ್ಗದರ್ಶಕರು ಅವರಂತೆ 32 ಡಿಗ್ರಿ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಟ ಒಂದು ಅಥವಾ ಎರಡು ಪದವಿಯನ್ನು ಮಾಡಿ ಎಂದು ತಿಳಿಸಿದರು
ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಕಷ್ಟಗಳು ಏನು ಅನ್ನೋದನ್ನು ಅನುಭವಿಸಿದ್ದೇನೆ ದುಡ್ಡು ಮಾಡಿರಬಹುದು ರಾಜಕೀಯದಲ್ಲಿ ಹೆಸರು ಮಾಡಿರಬಹುದು ಆದರೆ ದುಡ್ಡು ಎಲ್ಲಾ ಕಡೆ ಕೆಲಸ ಮಾಡೋದಿಲ್ಲ. ಗೌರವ ತುಂಬಾ ಮುಖ್ಯವಾಗುತ್ತದೆ ವಿದ್ಯೆಯೆಂಬ ಶಿಖರವನ್ನೆರಿದಾಗ ಮಾತ್ರ ಗೌರವ ತಾನಾಗಿಯೇ ಸಿಗುತ್ತದೆ ಎಂದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೆ, ಉತ್ತಮ ಸಂಸ್ಕಾರ ಮತ್ತು ಜ್ಞಾನವನ್ನು ಮೈಗೂಡಿಸಿಕೊಂಡು ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಮಾದರಿಯಾದ ನೂಟತ ಕಟ್ಟಡ ಕಾಮಗಾರಿಯನ್ನು ವಿನ್ಯಾಸ ಮಾಡಲಾಗಿದ್ದು ಎಂಟು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಯನ್ನು ಸಹ ನಾವೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ ರವಿ ಮಾತನಾಡಿ. ಕೋಲಾರ ಪ್ರಥಮ ದರ್ಜೇ ಕಾಲೇಜಿನಲ್ಲಿ ಅನೇಕರು ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನದಲ್ಲಿ ಇದ್ದಾರೆ ಈ ಕಾಲೇಜಿಗೆ ಎಂಟು ದಶಕಗಳ ಇತಿಹಾಸವಿದೆ ಬೆಂಗಳೂರು ವಿವಿ ಏಷ್ಯಾದಲ್ಲೆ ಸಾಕಷ್ಟು ಪ್ರಖ್ಯಾತಿಯನ್ನ ಹೊಂದಿದೆ. ಜಾಗತೀಕ ಮಟ್ಟದಲ್ಲಿ ಹೆಸರು ಮಾಡಿದೆ ಎಂದರೆ ಅದಕ್ಕೆ ಕೋಲಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾರಣವಾಗಿದ್ದಾರೆ ವಿವಿಯಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಕ್ಕಿದೆ ಕಠಿಣ ಶ್ರಮದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಅದನ್ನು ವಿದ್ಯಾರ್ಥಿಗಳು ಮನಗೊಂಡು ಓದಿನ ಬಗ್ಗೆ ಹಾಗೂ ಗುರಿ ಮುಟ್ಟುವ ಧ್ಯೇಯದೊಂದಿಗೆ ಇದ್ದಾಗ ಯಶಸ್ಸಿನ ಶಿಖರ ಏರಲು ಸಾಧ್ಯವಾಗುತ್ತದೆ ಎಂದರು.
ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಶೋಷಿತರಿಗೆ, ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು ಭಾರತದ ದೊಡ್ಡ ಶಕ್ತಿಯಾಗಿದೆ ಯುವ ಶಕ್ತಿ ಇದೆ ಯಾವ ರಾಷ್ಟ್ರಕ್ಕೆ ಹೋದರೂ ಭಾರತ ದೇಶದಲ್ಲಿರುವಷ್ಟು ಯುವ ಶಕ್ತಿ ಬೇರಾವುದೇ ದೇಶದಲ್ಲಿ ಇಲ್ಲ ದೇಶವನ್ನು ಕಟ್ಡುವ ಜಬಾಬ್ದಾರಿ ಯುವ ಜನತೆಯ ಮೇಲಿದೆ ಯಾವುದೇ ಅವಕಾಶಗಳು ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಡೋದಿಲ್ಲ, ಕಠಿಣ ತಪಸ್ಸು ಮಾಡಿದಾಗ ಯಶಸ್ಸು ನಿಮ್ಮನ್ನ ಹರಿಸಿ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಸದ ಎಂ ಮಲ್ಲೇಶ್ ಬಾಬು ಮಾತನಾಡಿ. ತಾಳ್ಮೆ ಕಠಿಣ ಪರಿಶ್ರಮ, ತೆಗೆದುಕೊಳ್ಳುವ ನಿರ್ದಾರ ಈ ಮೂರನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಗುರಿಯನ್ನು ಇಟ್ಟುಕೊಂಡು ಪ್ರಯತ್ನ ಪಟ್ಟರೆ ನಿಮ್ಮ ಗುರಿಯನ್ನು ನೀವು ಮುಟ್ಟಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳು ಯಶಸ್ಸಿನ ಸೂತ್ರಗಳ ಕುರಿತು ವಿವರಿಸಿದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನಾ ದ್ವೀತಿಯ ವರ್ಷದ ವಿದ್ಯಾರ್ಥಿನಿ ಕೀರ್ತನ ಆರ್. ಭರತನಾಟ್ಯ ನೃತ್ಯ ಗಮನ ಸೆಳೆಯಿತು ವಿವಿಧ ವಿಭಾಗಗಳ ಓದಿನಲ್ಲಿ ಹಾಗೂ ಕ್ರೀಡೆಯಲ್ಲಿ ಭಾಗಬಹಿಸಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಎಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಪ್ರಾಂಶುಪಾಲ ಮುನಿಸ್ವಾಮಪ್ಪ,
ಕೋಮುಲ್ ನಿರ್ದೇಶಕರಾದ ಚಂಜಿಮಲೆ ರಮೇಶ್, ಶಂಷೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಪ್ಸರ್, ಕುಡಾ ಅಧ್ಯಕ್ಷ ಮಹ್ಮದ್ ಅನೀಫ್,ಅಂತರಾಷ್ಟ್ರೀಯ ದೇಹದಾಡ್ಯ ಪಟು ಎ.ವಿ ರವಿ, ಪ್ರಾಧ್ಯಾಪಕರಾದ ಪ್ರಸನ್ನ ಕುಮಾರಿ ಮುಂತಾದವರು ಇದ್ದರು.
ವಿದ್ಯಾರ್ಥಿಗಳಲ್ಲಿ ಜ್ಞಾನದ ಕಿಚ್ಚು ಹೊತ್ತಿಸಿದ ಶಾಸಕ ಕೊತ್ತೂರು ಮಂಜುನಾಥ್



