ಆರ್ಸಿಬಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತ ಶತಕ ಬಾರಿಸಿದರು. 57 ಎಸೆತಗಳಲ್ಲಿ ಶತಕ ಪೂರೈಸಿದ ಸುದರ್ಶನ್ಗೆ ಇದು ಮೂರನೇ ಐಪಿಎಲ್ ಶತಕವಾಗಿದೆ. ಅಂತಿಮವಾಗಿ ಸುದರ್ಶನ್ 58 ಎಸೆತಗಳಲ್ಲಿ 100 ರನ್ ಗಳಿಸಿ ಹೇಜಲ್ವುಡ್ಗೆ ಬಲಿಯಾದರು. ಈ ಶತಕದೊಂದಿಗೆ, ಸಾಯಿ ಸುದರ್ಶನ್ ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ 2000 ಐಪಿಎಲ್ ರನ್ಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು.ಸಾಯಿ ಸುದರ್ಶನ್ ಕಳೆದ ಮೂರು ಸೀಸನ್ಗಳಲ್ಲಿ ತಲಾ ಒಂದೊAದು ಶತಕದಂತೆ ಮೂರು ಶತಕಗಳನ್ನು ಬಾರಿಸಿದ್ದಾರೆ. ಅಂದರೆ 2024 ರ ಐಪಿಎಲ್ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದ ಸುದರ್ಶನ್, ಆ ನಂತರ 2025 ರ ಐಪಿಎಲ್ನಲ್ಲಿ ತಮ್ಮ ಎರಡನೇ ಶತಕ ಬಾರಿಸಿದ್ದರು. ಇದೀಗ ಅವರು ಐಪಿಎಲ್ 2026 ರಲ್ಲಿ ಆರ್ಸಿಬಿ ವಿರುದ್ಧ ತಮ್ಮ ಮೂರನೇ ಶತಕವನ್ನು ಕಲೆಹಾಕಿದ್ದಾರೆ.ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್, ಭುವನೇಶ್ವರ್ ಕುಮಾರ್ ಮತ್ತು ಹೇಜಲ್ವುಡ್ ಮೇಲೆ ದಾಳಿ ನಡೆಸಿ ಪವರ್ ಪ್ಲೇನಲ್ಲಿ ಭಾಗಶಃ ಎಸೆತಗಳನ್ನು ತಾವೇ ಎದುರಿಸಿ ಅರ್ಧಶತಕದ ಸಮೀಪಕ್ಕೆ ಬಂದರು. ಆದರೆ ಇತ್ತ ನಾಯಕ ಗಿಲ್ ಆ ವೇಳೆಗೆ ಎದುರಿಸಿದ್ದು ಕೇವಲ ನಾಲ್ಕೈದು ಎಸೆತಗಳನ್ನು ಮಾತ್ರ. 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸುದರ್ಶನ್, ನಾಯಕ ಗಿಲ್ ಜೊತೆಗೆ ಅರ್ಧಶತಕದ ಜೊತೆಯಾಟವನ್ನು ನಡೆಸಿದರು. ಸುದರ್ಶನ್ ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ನಂತರ ಸುದರ್ಶನ್ 59 ಎಸೆತಗಳಲ್ಲಿ ಗಿಲ್ ಜೊತೆ ಶತಕದ ಜೊತೆಯಾಟ ನಡೆಸಿದರು. ಸುದರ್ಶನ್ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.



