ಮುಂಬೈ: ಕಿಮ್ ಗಾರ್ಥ್ (27ಕ್ಕೆ2) ಹಾಗೂ ಎಲಿಸ್ ಪೆರಿ ಅವರ ಬ್ಯಾಟಿಂಗ್ (ಅಜೇಯ 34) ಬಲದಿಂದ ಆಸ್ಟ್ರೇಲಿಯಾ ತಂಡವು ಭಾನುವಾರ ಇಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಎದುರು ಜಯಿಸಿತು.
ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಜಯಿಸಿದ ಆಸ್ಟ್ರೇಲಿಯಾ, ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.ಟಾಸ್ ಗೆದ್ದು ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಜಾರ್ಜಿಯಾ ವೇರ್ ಹ್ಯಾಮ್, ಕಿಮ್ ಗಾರ್ತ್, ಅನಾಬೆಲ್ ಸದರ್ಲೆಂಡ್ ಅವರು ಭಾರತದ ಪ್ರಮುಖ ಬ್ಯಾಟರ್ಗಳ ವಿಕೆಟ್ ಕಬಳಿಸಿದರು.
ಇದರಿಂದಾಗಿ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್ಗಳ ಸಾಧಾರಣ ಮೊತ್ತ ಗಳಿಸಿತು.
ಭಾರತದ ದೀಪ್ತಿ ಶರ್ಮಾ 30 (27ಎ) ಸ್ಮೃತಿ ಮಂದಾನಾ (23; 25ಎ)ಹಾಗೂ ರಿಚಾ ಘೋಷ್ (23, 19ಎ) ರನ್ ಗಳಿಸಿದರು.
ಅದಕ್ಕುತ್ತರವಾಗಿ ಪ್ರವಾಸಿ ತಂಡವು 19 ಓವರ್ಗಳಲ್ಲಿ 4 ವಿಕೆಟ್ಗೆ 133 ರನ್ ಗಳಿಸಿ ಜಯಿಸಿತು.