ಮಂಗಳೂರು: ಸರ್ಫಿಂಗ್, ಸ್ಟ್ಯಾಂಡ್ ಅಪ್ ಪೆಡಲಿಂಗ್ ಮತ್ತಿತರ ವೃತ್ತಿಪರ ಜಲಕ್ರೀಡೆಗಳ ಚಟುವಟಿಕೆಗಳ ಮೂಲಕ ಸದಾ ಉತ್ಸಾಹದ ಅಲೆಗಳನ್ನು ಎಬ್ಬಿಸುತ್ತಿರುವ ಮಂಗಳೂರು ಮತ್ತು ನಗರ ಹೊರವಲಯದ ಕಡಲ ಕಿನಾರೆಗಳು ಈಗ ಇನ್ನಷ್ಟು ಪುಟಿದೇಳತೊಡಗಿವೆ.
ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್ನಲ್ಲಿ ಇದೇ 31ರಿಂದ ಜೂನ್ 2ರ ವರೆಗೆ ನಡೆಯಲಿರುವ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್ಷಿಪ್ಗೆ ತಯಾರಿ ಆರಂಭಗೊಂಡಿದ್ದು ಸ್ಥಳೀಯ ಸರ್ಫಿಂಗ್ ಕ್ಲಬ್ಗಳು ಸರ್ಫರ್ಗಳನ್ನು ಸಿದ್ಧಗೊಳಿಸುತ್ತಿದ್ದಾರೆ.
ನಗರದ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಮತ್ತು ಮಂತ್ರ ಸರ್ಫ್ ಕ್ಲಬ್ ಸಹಯೋಗದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ (ಎಸ್ಎಫ್ಐ) ಆಯೋಜಿಸಿರುವ ಚಾಂಪಿಯನ್ಷಿಪ್ನ ಐದನೇ ಆವೃತ್ತಿ ಪುರುಷ, ಮಹಿಳೆ, 16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು ಪ್ರಶಸ್ತಿಗಾಗಿ ಅಲೆಗಳ ಸವಾಲನ್ನು ಎದುರಿಸಲಿದ್ದಾರೆ.