ನ್ಯೂಯಾರ್ಕ್: ನಿನ್ನೆ(ಬುಧವಾರ) ನಡೆದ ಟಿ20 ವಿಶ್ವಕಪ್ ಟೂರ್ನಿಯ 25ನೇ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೆರಿಕ ವಿರುದ್ಧ ಗೆದ್ದು ಸೂಪರ್ 8ಕ್ಕೆ ಪ್ರವೇಶ ಪಡೆಯಿತು.
ಅರ್ಧಶತಕ ಬಾರಿಸಿ ಭಾರತ ತಂಡದ ಗೆಲುವುವಿನ ರೂವಾರಿ ಎನಿಸಿಕೊಂಡ ಸೂರ್ಯಕುಮಾರ್ ಯಾದವ್ ಅವರು ಈ ಸಾಧನೆಯ ಹೊರತಾಗಿಯೂ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಸೂರ್ಯಕುಮಾರ್ ಯಾದವ್ ಅಮೆರಿಕ ವಿರುದ್ಧದ ಪಂದ್ಯದಲ್ಲಿ 49 ಎಸೆತ ಎದುರಿಸಿ 50 ರನ್ ಗಳಿಸಿ ಅರ್ಧಶತಕ ಬಾರಿಸಿದರು.
ಈ ವೇಳೆ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿಧಾನಗತಿಯ (ಅತಿ ಹೆಚ್ಚು ಎಸೆತ ಎದುರಿಸಿ) ಅರ್ಧಶತಕ ಬಾರಿಸಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡರು. ಕೆಟ್ಟ ದಾಖಲೆ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿದೆ. ಅವರು ಇದೇ ಆವೃತ್ತಿಯಲ್ಲಿ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ 52 ಎಸೆತ ಎದುರಿಸಿ ಅರ್ಧಶತಕ ಬಾರಿಸಿದ್ದರು.