ಕನಕಪುರ: ರಾಜ್ಯ ಯುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ಮಾತನಾಡುವ ನೈತಿಕತೆ ಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್ ರವರಿಗೆ ಇಲ್ಲ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ಟೀಕಿಸಿದ್ದಾರೆ.
ನಗರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಈ ಜಿಲ್ಲೆಯನ್ನು ಪ್ರತಿನಿಧಿಸಿದ ನಂತರ ಜಿಲ್ಲೆಯ ಪ್ರಗತಿಯ ಚಿತ್ರಣವೇ ಬದಲಾಗಿದ್ದು ರಾಮನಗರ ವನ್ನು ಜಿಲ್ಲಾ ಕೇಂದ್ರ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ, ದೇವೇಗೌಡ ರವರು ಹಾರೋಬೆಲೆ ಡ್ಯಾಂ, ಇಗ್ಗಲೂರು ಡ್ಯಾಂ ನಿರ್ಮಾಣವಾಗಿದ್ದರಿಂದ ನೀರು ಹರಿದು ಬಂದು ಈ ಭಾಗದ ರೈತರು ಜೀವನ ಕಟ್ಟಿಕೊಂಡಿದ್ದಾರೆ, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೂರು ಚುನಾವಣೆಗಳಲ್ಲಿ ಸೋತರು ಎಂದೂ ಮನೆ ಸೇರಿರಲಿಲ್ಲ, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ರೈತರ,ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಲೇ ಬಂದಿದ್ದು ನೀವು ಉಪಮುಖ್ಯಮಂತ್ರಿಯಾಗಿ ಮೂರು ವರ್ಷ ಕಳೆದರೂ ಈ ಜಿಲ್ಲೆಗೆ ಕೊಟ್ಟು ಕೊಡುಗೆ ಏನು,ಜನತೆಗೆ ಕೊಟ್ಟ ಮಾತಿ ನಂತೆ ಮೇಕೇದಾಟು ಯೋಜನೆ ಜಾರಿಗೆ ತರಲಿಲ್ಲ,ಆದರೆ ನೀವು ಜಿಲ್ಲೆಯ ಬಿಡದಿ ಬಳಿ ಉಪನಗರದ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಬಳಿಸುವ ಸಂಚು ನಡೆಸಿದ್ದು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೀಳು ಮಟ್ಟದ ಹೇಳಿಕೆಗಳನ್ನು ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು ಇಂತಹ ಬಾಲಿಷತನದ ಹೇಳಿಕೆಗಳನ್ನು ಮುಂದುವರಿಸಿದ್ದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ದಿಶಾ ಸಮಿತಿ ಸದಸ್ಯ ರಾಜೇಶ್, ಜೆಡಿಎಸ್ ಮುಖಂಡ ಪುಟ್ಟರಾಜು,ಮಾತನಾಡಿ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ಮಾತನಾಡುವ ಸಚಿವ ಡಿ.ಕೆ.ಶಿವಕುಮಾರ್ ರವರು ತಮ್ಮ ಸ್ಟೇಟಸ್ ಮೊದಲು ಹೇಗಿತ್ತು ಎಂಬುದರ ಬಗ್ಗೆ ನೆನಪು ಮಾಡಿ ಕೊಂಡರೆ ಒಳ್ಳೆಯದು ತಾಲ್ಲೂಕಿನ ಮಹಾ ಜನತೆ ನಿಮ್ಮ ಹಾಗೂ ನಿಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ದರ್ಪ, ದೌರ್ಜನ್ಯ ಮತ್ತು ಭಯದಿಂದ ರೋಸಿ ಹೋಗಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ರವರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೀವು ನಿಮ್ಮ ಕುಟುಂಬ ರಾಜಕಾರಣದ ಬಗ್ಗೆ ಮೊದಲು ಅವಲೋಕನ ಮಾಡಿಕೊಳ್ಳಿ ತಮ್ಮ ಸಹೋದರನ ಸೋಲನ್ನು ಸಹಿಸದೆ ಅಧಿಕಾರ ವಂಚಿತರಾಗಿರಲು ಸಾಧ್ಯವಾಗದೇ ಪಕ್ಷದ ಕಾರ್ಯಕರ್ತರಿಗೆ ನೀಡಬೇಕಾಗಿದ್ದ ತಾ. ಬಗರ್ ಹುಕುಂ ಹಾಗೂ ಬಮೂಲ್ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ಕುಟುಂಬ ರಾಜಕಾರಣವಲ್ಲವೇ,ದೇವೇಗೌಡರದು ರೈತ ಪರವಾದ ಹೋರಾಟ ಆದರೆ ರಾಜ್ಯ ಸರ್ಕಾರ ಹಾಗೂ ಶಿವಕುಮಾರ್ ಅವರದ್ದು ರೈತ ವಿರೋಧಿ ನೀತಿ ಎಂದು ಕಿಡಿಕಾರಿದ ಅವರು
ಇನ್ನೂ ಮುಂದೆ ಜೆಡಿಎಸ್ ಪಕ್ಷದ ಮುಖಂಡರ ಬಗ್ಗೆ ಕೀಳಾಗಿ ಮಾತಾನಾಡಿದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ನಿರಂತರ ಹೋರಾಟವನ್ನು ನಡೆಸುವುದಾಗಿ ತಿಳಿಸಿದರು.
ಮುಖಂಡರುಗಳಾದ ಜಯರಾಮೇಗೌಡ, ನಂಜೇಗೌಡ, ಸ್ಟುಡಿಯೋ ಚಂದ್ರು ಚನ್ನೇಗೌಡ ಮಾತನಾಡಿ ನಿಖಿಲ್ ಕುಮಾರ್ ಸ್ವಾಮಿಯವರು ಮೂರು ಬಾರಿ ಕುತಂತ್ರ ದಿಂದ ಸೋತರೂ ದೃತಿಗೆಡದೆ ಸರ್ಕಾರದ ವೈಫಲ್ಯಗಳ ವಿರುದ್ಧ ಒಂದು ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು
ಬರುತ್ತಾ ಜನ ಮನ್ನಣೆಯನ್ನ ಗಳಿಸುತ್ತಿರುವುದನ್ನು ಸಹಿಸಿ ಕೊಳ್ಳಲು ಆಗದೆ ಅವರ ಮೇಲೆ ಕೀಳು ಮಟ್ಟದ ಭಾಷೆ ಯಲ್ಲಿ ಟೀಕಿಸುತ್ತಿರುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ, ಈ ಕೀಳುಮಟ್ಟದ ರಾಜಕೀಯವನ್ನು ಬಿಟ್ಟು ಜಿಲ್ಲೆಯ, ರಾಜ್ಯದ ರೈತರ, ಜನ ಸಾಮಾನ್ಯರ ಅಭಿವೃದ್ಧಿ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದರು.
ತಾಲೂಕು ಜೆಡಿಎಸ್ ಹಿರಿಯ ಮುಖಂಡ ಸಿದ್ದಮರಿಗೌಡ, ತಾಲೂಕು ಜೆಡಿಎಸ್ ಉಪಾಧ್ಯಕ್ಷ ರಾಮಕೃಷ್ಣ, ಕುರಿಗೌಡನ ದೊಡ್ಡಿಕುಮಾರ್, ತೊಪ್ಪಗನಹಳ್ಳಿ ರಾಜಗೋಪಾಲ್, ತಾ. ಜೆಡಿಎಸ್ ಮಹಿಳಾ ಅಧ್ಯಕ್ಷೆ ಪವಿತ್ರ,ಸುವರ್ಣಮ್ಮ ಯುವ ಮುಖಂಡರುಗಳಾದ ರಾಜೇಂದ್ರ, ತಿಮ್ಮೇಗೌಡ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
ದೇವೇಗೌಡರ ಕುಟುಂಬದ ಸ್ಟೇಟಸ್ ಮಾತನಾಡುವ ಡಿಕೆಶಿ ತಮ್ಮ ಸ್ಟೇಟಸ್ ನೋಡಿಕೊಳ್ಳಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ಟೀಕೆ



