10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದ್ದ ತೆಲುಗು ಟೈಟನ್ಸ್ ಕೊನೆಗೂ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಶುಕ್ರವಾರ ನಡೆದ ಲೀಗ್ನ 36ನೇ ಪಂದ್ಯದಲ್ಲಿ ತೆಲುಗು 37-36ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿದೆ.ಈ ಮೂಲಕ ತೆಲುಗು ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ್ದು, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈ ಸೋಲಿನ ಹೊರತಾಗಿಯೂ ಹರಿಯಣಾ ಸ್ಟೀಲರ್ಸ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.ಉಭಯ ತಂಡಗಳ ಫೈಟ್ ಆರಂಭದಿಂದಲೂ ರೋಚಕತೆ ಹುಟ್ಟಿಸಿತ್ತು. ಪ್ರತಿಯೋಂದು ಅಂಕಕ್ಕಾಗಿ ಎರಡೂ ತಂಡಗಳು ಜಿದ್ದಿಗೆ ಬಿದ್ದವು.