ರಾಮನಗರ: ಹೆತ್ತ ಮಗುವನ್ನೇ ತಾಯಿ ಸಿಟ್ಟಿನಲ್ಲಿ ನದಿಗೆ ಬಿಸಾಡಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ.
ನದಿ ಪಾಲಾಗಿರುವ ಮಗು ಭಾಗ್ಯ ಹಾಗೂ ಶ್ರೀನಿವಾಸ್ ದಂಪತಿಯದ್ದು ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಕೊಂಡಾಪುರ ಬಳಿಯ ಕಣ್ವ ನದಿಗೆ 1 ವರ್ಷ 6 ತಿಂಗಳ ಹಸುಗೂಸನ್ನ ತಾಯಿಯೇ ಎಸೆದಿದ್ದಾಳೆ.ಕಳೆದ 2 ವರ್ಷಗಳಿಂದ ಭಾಗ್ಯ ಮನೆಯಲ್ಲೇ ವಾಸವಿದ್ದು ಬೆಳಿಗ್ಗೆ ಮಗು ಎಲ್ಲಿ ಎಂದು ಕುಟುಂಬಸ್ಥರು ಕೇಳಿದಾಗ ನದಿಯಲ್ಲಿ ಎಸೆದಿರೋದಾಗಿ ಭಾಗ್ಯ ಹೇಳಿದ್ದಾಳೆ ಎನ್ನಲಾಗಿದೆ , ವಿಷಯ ತಿಳಿದ ಗ್ರಾಮಸ್ಥರು ನದಿಯಿಂದ ಮೃತ ಮಗುವಿನ ಶವ ಹೊರತೆಗೆದಿದ್ದಾರೆ, ಕೆರೆಗೆ ಎಸೆದಿರೋದಕ್ಕೆ ನಿಖರ ಕಾರಣ ತಿಳಿದುಬಂದಿರುವುದಿಲ್ಲ. ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.