ಬೆಂಗಳೂರು: 2022 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ವಸ್ತ್ರ ಸಂಹಿತೆ ವಿಚಾರವನ್ನು ಕೋರ್ಟ್ ಎತ್ತಿ ಹಿಡಿದಿತ್ತು. ನನಗೆ ಅನಿಸುತ್ತೆ, ದಾವಣಗೆರೆ ದಕ್ಷಿಣ ಫಲಿತಾಂಶ ಬಂದ ಬಳಿಕ ತುಷ್ಟೀಕರಣ ನೀತಿ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಮತ, ಧರ್ಮ ಬಿಟ್ಟು ಮಕ್ಕಳು ಶಾಲೆಗೆ ಬರಬೇಕಿತ್ತು. ಆದರೆ ರಾಜಕೀಯಕ್ಕಾಗಿ ಈಗ ಹಿಜಾಬ್ ಮುನ್ನೆಲೆಗೆ ತಂದಿದ್ದಾರೆ. ಯಾರೂ ಕೇಳಿರಲಿಲ್ಲ ಹಿಜಾಬ್ನ. ಶಿಕ್ಷಣ ಸಚಿವರೇ ಗೊಂದಲ ಸೃಷ್ಟಿಸಿದ್ದಾರೆ. ಇದಕ್ಕೆಲ್ಲಾ ಅವರೇ ಕಾರಣ ಎಂದು ಆರೋಪಿಸಿದ್ದಾರೆ.
ಕೋರ್ಟ್ ಒಮ್ಮೆ ನಿಲುವು ಕೊಟ್ರೆ ಅದನ್ನು ಪಾಲನೆ ಮಾಡಬೇಕು. ಇಲ್ಲಿ ಒಡೆದು ಆಳುವ ನೀತಿಯನ್ನು ಮಾಡಲು ಹೊರಟಿದ್ದಾರೆ. 2022 ರಲ್ಲಿ ನಾವು ತಂದ ಆದೇಶದಲ್ಲಿ ಹಿಜಾಬ್ ಇರಲಿಲ್ಲ, ಕೇಸರಿ ಶಾಲು ಎರಡು ಇರಲಿಲ್ಲ. ವಸ್ತç ಸಂಹಿತೆ ಈಗಲೂ ಜಾರಿ ಮಾಡಬೇಕು. ಮಾಡದೇ ಹೋದ್ರೆ ಹೋರಾಟ ಮಾಡಲಾಗುತ್ತದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ…,
ಹಿಜಾಬ್ ಜಾರಿಗೆ ಬಿಜೆಪಿ ನಾಯಕರ ಕಿಡಿ



