ಬೆಂಗಳೂರು: ನಮಗೇ ಕುಡಿಯೋಕೆ ನೀರಿಲ್ಲ, ಹಾಗಿದ್ದಾಗ 3,500 ಸಾವಿರ ಕ್ಯೂಸೆಕ್ ನೀರು ಕೊಡಿ ಅಂದರೆ ಹೇಗೆ? ಎಂದು ಡಿಸಿಎಂ ಪರಮೇಶ್ವರ್ ಕಿಡಿಕಾರಿದ್ದಾರೆ.ಮಾಧ್ಯಮದವರೊಂದಿಗೆ ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರವಾಗಿ ಮಾತನಾಡಿದ ಅವರು, ನಮಗೇ ಕುಡಿಯಲು ನೀರಿಲ್ಲ. ಹಾಗಿದ್ದಾಗ 3,500 ಸಾವಿರ ಕ್ಯೂಸೆಕ್ ನೀರು ಕೊಡಿ ಅಂದರೆ ಹೇಗೆ? ಇದರ ಬಗ್ಗೆ ಚರ್ಚೆಗೆ ಸಿಎಂ ಸರ್ವಪಕ್ಷದ ಸಭೆ ಕರೆಯುತ್ತಾರೆ. ಸೋಮವಾರ (ಆ.3) ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಬರುತ್ತಾರೆ, ಅವರ ಜೊತೆಗೂ ಸಿಎಂ ಚರ್ಚೆ ಮಾಡಬಹುದು. ಇವತ್ತು ರಾಮಲಿಂಗಾರೆಡ್ಡಿ ಸಭೆ ಕರೆದಿದ್ದಾರೆ, ಮುಂದೇನು ಮಾಡಬೇಕು ಅಂತ ಚರ್ಚಿಸುತ್ತಾರೆ. ಈ ಸಂಬAಧ ಸಹಜವಾಗಿ ರೈತರು ಪ್ರತಿಭಟನೆ ಮಾಡ್ತಾರೆ, ನಿನ್ನೆಯಿಂದ ಹೋರಾಟ ಮಾಡ್ತಿದ್ದಾರೆ. ಸರ್ಕಾರ ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ ಎಂದಿದ್ದಾರೆ. ಮೇಕೆದಾಟು ವಿಚಾರವಾಗಿ ಮಾತನಾಡಿ, ಮೇಕೆದಾಟು ಯೋಜನೆಗೆ ಆಕ್ಷೇಪ ಮಾಡುವಂತಿಲ್ಲ ಅಂತ ಸಂಸತ್ ಹೇಳಿದೆ.



