ಬೆಂಗಳೂರು; ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ 7 ಸ್ಥಾನಗಳ ಚುನಾವಣೆ ಇದೀಗ ತೀವ್ರ ಕುತೂಹಲ ಕೆರಳಿಸುತ್ತಿದೆ. 7 ಸ್ಥಾನಗಳಿಗೆ 7 ಸ್ಥಾನಗಳು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಅವಿರೋಧವಾಗಿ ಆಯ್ಕೆಯಾಗುತ್ತಿತ್ತು ಎಂದು ಇದುವರೆಗೂ ಹೇಳಲಾಗುತ್ತಿತ್ತು. ಆದರೆ ಇದೀಗ ಬಿಜೆಪಿ ಹಾಗೂ ಜೆಡಿಎಸ್ನಿಂದ 8 ನೇ ಅಭ್ಯರ್ಥಿಯಾಗಿ ಜೆಡಿಎಸ್ನ ಗೋವಿಂದರಾಜ್ ಅವರನ್ನು ಕಣಕ್ಕಿಳಿಯಲಿದ್ದಾರೆ. ಇದರಿಂದ ಇದೀಗ ಚುನಾವಣೆ ಕಾಂಗ್ರೆಸ್ ಜೆಡಿಎಸ್ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ತಮ್ಮದೇ ಗೆಲುವು ಎಂದು ಬೀಗುತ್ತಿದ್ದ ಕಾಂಗ್ರೆಸ್ಗೆ ಇದೀಗ 8ನೇ ಅಭ್ಯರ್ಥಿ ಕಣಕ್ಕಿಳಿಯುತ್ತಿರುವುದು ಕೊಂಚ ತ್ರಾಸದಾಯಕವಾಗಲಿದೆ. ಜೆಡಿಎಸ್ ಬಿಜೆಪಿಯವರು ತಮ್ಮ ಅಭ್ಯರ್ಥಿ ಗೆಲ್ಲಲು ನಾಲ್ಕೈದು ಮತಗಳು ಕಡಿಮೆಯಾಗುವ ಬಗ್ಗೆ ಯಾವ ರೀತಿ ತಂತ್ರಗಾರಿಕೆ ರೂಪಿಸಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.ತಮ್ಮ ಐದನೇ ಅಭ್ಯರ್ಥಿ ಸುಲಭವಾಗಿ ಗೆಲುತ್ತಾರೆ ಎಂಬ ಕಾಂಗ್ರೆಸ್ ಪಾಳಯದಲ್ಲಿ ಲೆಕ್ಕಚಾರ ನಡೆದಿದ್ದು, ಆದರೆ ಎರಡು ಸ್ಥಾನಗಳಲ್ಲಿ ಅವಕಾಶವಿದ್ದ ಬಿಜೆಪಿ ಜೆಡಿಎಸ್ನಿಂದ ಮೂರನೇ ಅಭ್ಯರ್ಥಿ ಕಣಕ್ಕಿಳಿಯುತ್ತಿರುವುದು ಗೆಲ್ಲುವ ಅಭ್ಯರ್ಥಿಗಳಿಗೆ ಯಾರಿಗೆ ತೊಡಕಾಗಬಹುದು ಎಂದು ಮಾತುಗಳು ಇದೀಗ ಕೇಳಿಬರುತ್ತಿವೆ.
ರಂಗೇರುತ್ತಿದೆ ಮೇಲ್ಮನೆ ಚುನಾವಣೆ ಜೆಡಿಎಸ್ನಿಂದ 8ನೇ ಅಭ್ಯರ್ಥಿ ಕಣಕ್ಕಿಳಿಯುವ ಕುತೂಹಲ



