ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಇದೀಗ ದೇಶ ವಿದೇಶಗಳಲ್ಲಿ ಚರ್ಚೆಯಾಗುತ್ತಿದೆ. ಕ್ರಿಕೆಟ್ ವಲಯದಲ್ಲಿ ಈತನದ್ದೇ ಮಾತು. 15ರ ಹರೆಯದ ಈ ಬಾಲಕನನ್ನು ಉಳಿದ ಬ್ಯಾಟರ್ ಗಳಿಂದ ವಿಭಿನ್ನವಾಗಿರಿಸಿರುವ ಅಂಶ ಯಾವುದು? ಇದಕ್ಕೆ ಒಬ್ಬೊಬ್ಬ ಕ್ರಿಕೆಟ್ ಪಂಡಿತರೂ ಒಂದೊAದು ಉತ್ತರ ನೀಡಬಹುದು. ಇದೀಗ ಇಂಗ್ಲೆAಡ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಅವರು ವೈಭವ್ ಬ್ಯಾಟಿಂಗ್ ನ ವಿಶೇಷತೆಯನ್ನು ಗಮನಿಸಿದ್ದಾರೆ. ಅವರ ಹಬ್ಯಾಟಿಂಗ್ ನಲ್ಲಿರುವ ಅಪರೂಪದ ಸಾಮರ್ಥ್ಯವನ್ನು ಗುರುತಿಸಿದ್ದಾರೆ. ಅವರ ಪ್ರಕಾರ ವೈಭವ್ ಸೂರ್ಯವಂಶಿ ಅವರ ಅಸಾಧಾರಣ ರಿಯಾಕ್ಷನ್ ಟೈಮ್(ಚೆಂಡಿಗೆ ಪ್ರತಿಕ್ರಿಯಿಸುವ ಸಮಯ)ವೇ ಅವರ ವಿಶೇಷತೆ ಎಂದು ತಿಳಿಸಿದ್ದಾರೆ.
ಮೈಕಲ್ ವಾನ್, ಫಿಲ್ ಟಫ್ನೆಲ್, ಡೇವಿಡ್ ಲಾಯ್ಡ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅವರೊಂದಿಗಿನ ‘ಸ್ಟಿಕ್ ಟು ಕ್ರಿಕೆಟ್’ ಪಾಡ್ಕಾಸ್ಟ್ನಲ್ಲಿ ಮಾತನಾಡುವ ವೇಳೆ ಕುಕ್ ಈ ವಿಷಯವನ್ನು ಪ್ರಸ್ತಾಪಿಸಿದರು. ಅತ್ಯಂತ ವೇಗದ ಎಸೆತಗಳಿಗೂ ಯಾವುದೇ ಆತುರವಿಲ್ಲದೆ, ಕಾಯ್ದು ಪ್ರತಿಕ್ರಿಯಿಸುವ ಕಲೆ ಸೂರ್ಯವಂಶಿ ಅವರಿಗಿದೆ ಎಂದು ಕುಕ್ ತಿಳಿಸಿದ್ದಾರೆ.
`ಅವರ ಬ್ಯಾಟಿಂಗ್ನಲ್ಲಿ ಕಂಡುಬರುವ ಪ್ರಮುಖ ಅಂಶವೆAದರೆ ಅಲ್ಲಿ ಯಾವುದೇ ಪೂರ್ವಸಿದ್ಧತೆ ಇರುವಂತೆ ಕಾಣುವುದಿಲ್ಲ’ ಎಂದು ಹೇಳಿದ್ದಾರೆ. “ಹೆಚ್ಚಿನ ಬ್ಯಾಟರ್ಗಳು, ಅದರಲ್ಲೂ ಅತ್ಯುತ್ತಮ ಹಿಟ್ಟರ್ಗಳು ಸಹ, ಚೆಂಡು ತಮಗೆ ಸಿಕ್ಸರ್ ಬಾರಿಸಲು ಅನುಕೂಲಕರವಾಗಿರುವ ಒಂದು ಅಥವಾ ಎರಡು ನಿರ್ದಿಷ್ಟ ಸ್ಲಾಟ್ಗಳಿಗೆ ಬೀಳುವವರೆಗೂ ಕಾಯುತ್ತಾರೆ. ಆದರೆ ಈತನ ವಿಷಯದಲ್ಲಿ, ನೀವು ಗಂಟೆಗೆ 99 ಮೈಲಿ ವೇಗದಲ್ಲಿ ಐದು ಎಸೆತಗಳನ್ನು ಎಸೆದರೂ, ಆತ ಕೊನೆಯ ಕ್ಷಣದವರೆಗೂ ಕಾಯ್ದು, ಅತ್ಯಂತ ಸರಾಗವಾಗಿ ಪ್ರತಿಕ್ರಿಯಿಸಿ ಅದನ್ನೂ ಸಿಕ್ಸರ್ಗೆ ಅಟ್ಟುತ್ತಾನೆ. ಅಷ್ಟು ಸಲೀಸಾಗಿ ಆತ ಹೊಡೆಯುತ್ತಾನೆ. ಇದೇ ಅವರಲ್ಲಿರುವ ಅತ್ಯಂತ ಅಪರೂಪದ ಮತ್ತು ಅಸಾಮಾನ್ಯ ಗುಣ ಎಂದು ನಾನು ಭಾವಿಸುತ್ತೇನೆ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದೇ ಮಾತು ಹೇಳಿದ್ದ ಯುವಿಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಸಹ ಇತ್ತೀಚೆಗೆ ಮಾತನಾಡುವ ವೇಳೆ ವೈಭವ್ ಸೂರ್ಯವಂಶಿ ಅವರ ಅಸಾಧಾರಣ ಬ್ಯಾಟ್ ಸ್ಪೀಡ್ ಬಗ್ಗೆ ಮಾತನಾಡಿದ್ದರು. ತನಗಿಂತಲೂ ಈತನ ಬ್ಯಾಟ್ ಸ್ಪೀಡ್ ವೇಗವಾಗಿದೆ. ನನ್ನ ಕ್ರಿಕೆಟ್ ಬದುಕಿನಲ್ಲೇ ಇಷ್ಟು ಅತ್ಯುತ್ತಮ ಬ್ಯಾಟ್ ಸ್ಪೀಡ್ ಇರುವ ಮತ್ತೊಬ್ಬ ಬ್ಚಾಟರ್ ಅನ್ನು ನೋಡಿಲ್ಲ ಎಂದಿದ್ದರು. ಇದೀಗ ಅದೇ ರೀತಿಯ ಮಾತನ್ನು ವಿಶ್ವ ಕ್ರಿಕೆಟ್ನ ಅತ್ಯಂತ ತಾಂತ್ರಿಕವಾಗಿ ಪರಿಣತ ಬ್ಯಾಟರ್ ಗಳಾದ ಒಬ್ಬರಾದ ಕುಕ್ ಸಹ ಹೇಳಿದ್ದಾರೆ.
`ವೈಭವ್ ಸೂರ್ಯವಂಶಿ ರಿಯಾಕ್ಷನ್ ಟೈಂ ಸೂಪರ್!’



