ಕನಕಪುರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿವೇಶನದ ಇ- ಸ್ವತ್ತು ಪರಿಷ್ಕರಣೆ ಮಾಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಪಂಚಾಯ್ತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಅಡಿಕೆ ಹಳ್ಳ ಗ್ರಾಮದ ಶಿವಮ್ಮ ಕೋ ಶಿವಣ್ಣ ಅವರಿಗೆ ಸೇರಿದ ಆಸ್ತಿಗೆ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯಿಂದ ಕಳೆದ ಡಿ. 28 ರಂದು ಇ- ಸ್ವತ್ತು ಮಾಡಿಕೊಡಲಾಗಿತ್ತು, ನ್ಯಾಯಾಲಯದಲ್ಲೂ ನಮ್ಮ ಪರವಾಗಿ ಆದೇಶವಾಗಿತ್ತು ಈ ಆಸ್ತಿಯ ಇ- ಸ್ವತ್ತನ್ನು ಯಾವುದೇ ರೀತಿ ತಿದ್ದುಪಡಿ ಮಾಡದಂತೆ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕಳೆದ ಮೇ.9ರಂದು ದೂರು ಸಲ್ಲಿಸಲಾಗಿತ್ತು.
ದೂರು ನೀಡಿದರು ಸಹ ಗ್ರಾಮ ಪಂಚಾಯಿತಿ ಅಧಿಕಾರಿ ಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಎದುರುದಾರರಿಗೆ ಇ-ಸ್ವತ್ತು ತಿದ್ದುಪಡಿ ಮಾಡಿಕೊಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ನ್ಯಾಯಾಲಯದ ಆದೇಶಕ್ಕೆ ವಿರುದ್ಧ ವಾಗಿ ನಡೆದು ಕೊಂಡಿದ್ದಾರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳನ್ನು ಈ ಕೂಡಲೇ ಸೇವೆಯಿಂದ ವಜಾ ಮಾಡಿ. ಶಿಸ್ತು ಕ್ರಮ ಕೈ ಗೊಳ್ಳುವಂತೆ ಶಿವಮ್ಮ ಅವರ ಮಗ ಅಡಿಕೆ ಹಳ್ಳ ಗ್ರಾಮದ ಪವನ್ ಕುಮಾರ್ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರಿನ ಅನ್ವಯ ಸದರಿ ದೂರನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಯ್ತಿ ಉಪ ಕಾರ್ಯದರ್ಶಿ ಗಳು ತಾಲೂಕು ಪಂಚಾಯ್ತಿ ಅಧಿಕಾರಿ ಗಳಿಗೆ ಆದೇಶ ಮಾಡಿದ್ದರೂ ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯ್ತಿ ಇಒ ಸೂಚನೆ ಮೇರೆಗೆ ಯೋಜನಾಧಿಕಾರಿ ಕುಮಾರ್, ವ್ಯವಸ್ಥಾಪಕ ಮುತ್ತುರಾಜ್,ವಿಷಯ ನಿರ್ವಾಹಕರಾದ ಶೋ ರಾಜು ಅವರು ಸ್ಥಳಿಯ ಅಧಿಕಾರಿಗಳು ಹಾಗೂ ದೂರುದಾರರ ಸಮ್ಮುಖದಲ್ಲಿ ಅಡಿಕೆ ಹಳ್ಳ ಗ್ರಾಮಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.