ಚನ್ನೈ: ತಮಿಳುನಾಡಿನಲ್ಲಿ ನೂತನ ಸರ್ಕಾರ ಅಸ್ಥಿತ್ವಕ್ಕೆ ಬರಲು ಅಗತ್ಯ ಬಹುಮತದ ಗೊಂದಲ ಎದುರಾಗಿದೆ.
ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ನಿನ್ನೆ ತಮ್ಮ ಪಕ್ಷದ ಬೆಂಬಲಿಗರು ಹಾಗೂ ಕಾಂಗ್ರೆಸ್ ಪಕ್ಷದ ಐದು ಶಾಸಕರ ಬೆಂಬಲದೊAದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ ರಾಜ್ಯಪಾಲರು ಅಗತ್ಯ ಬಹುಮತದೊಂದಿಗೆ ಬರಲು ಸೂಚಿಸಿದ್ದರು. ಆದರೆ ಇನ್ನೂ ಸರ್ಕಾರ ರಚನೆಗೆ ಬೇಕಾಗಿರುವ ಆರು ಶಾಸಕರ ಬೆಂಬಲ ಅಧಿಕೃತವಾಗಿ ದಳಪತಿ ವಿಜಯ್ ಸೇರಿಲ್ಲ. ಹೀಗಾಗಿ ಸರ್ಕಾರ ರಚನೆ ವಿಳಂಬವಾಗಬಹದು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಎಐಎಡಿಎಂಕೆ ಪಕ್ಷದಲ್ಲಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ಕೆಲ ಶಾಸಕರ ಗುಂಪೊAದು ಮುಂದಾಗಿದೆ. ಇದರಿಂದಾಗಿ ಷಣ್ಮುಗಂ ನೇತೃತ್ವದ ಶಾಸಕರು ತಮ್ಮ ಮುಖಂಡ ಎಡಪ್ಪಾಣಿ ಪಳನಿ ಸ್ವಾಮಿಯವರಿಗೆ ಬೆಂಬಲ ನೀಡಲು ಅವರನ್ನು ಒತ್ತಾಯಿಸುತ್ತಾರೆ. ಪಕ್ಷದ 47 ಶಾಸಕರ ಪೈಕಿ 25 ಶಾಸಕರು ಷಣ್ಮುಗಂನವರೊAದಿಗೆ ಗುರುತಿಸಿಕೊಂಡಿದ್ದು ಅವರನ್ನೆಲ್ಲಾ ಈಗಾಗಲೇ ಪುದುಚೇರಿಯ ರೆಸಾರ್ಟ್ಗೆ ಸ್ಥಳಾಂತರಿಸಲಾಗಿದೆ.
ಪಳನಿಸ್ವಾಮಿಯವರು ಇಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ. ಇದರ ಮಧ್ಯೆ ವಿಜಯ್ಕೂಡ ರಾಜ್ಯಪಾಲರನ್ನು 11ಗಂಟೆಗೆ ಭೇಟಿ ಮಾಡಿ ಸರ್ಕಾರ ರಚನೆಗೆ ಮತ್ತೊಮ್ಮೆ ಕೋರಿದ್ದಾರೆ.
ಎಐಎಡಿಎಂಕೆ ಪಕ್ಷದಲ್ಲಿ ಒಡಕು ತೀವ್ರವಾಗಿದ್ದು, ವಿಜಯ್ ಬೆಂಬಲಿಸುವ ಮತ್ತು ವಿರೋಧಿಸುವ ಗುಂಪು ಎಂದು ಪ್ರತ್ಯೇಕವಾಗಿವೆ. ಒಟ್ಟಾರೆ ಇಂದು ಸಂಜೆ ನಾಳೆಯೊಳಗಾಗಿ ತಮಿಳುನಾಡು ರಾಜಕೀಯ ವಲಯದಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಒಂದು ಹಂತದಲ್ಲಿ ತಮಿಳುನಾಡಿನ ಹೆಸರಾಂತ ಚಿತ್ರನಟ ರಜನಿಕಾಂತ್ ಅವರು ಹಂಗಾಮಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಎಐಎಡಿಎಂಕೆ ಪಕ್ಷದಲ್ಲಿ ಗೊಂದಲ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರ ರಚನೆ ಕಸರತ್ತು ತಮಿಳುನಾಡು ಎಐಎಡಿಎಂಕೆಯಲ್ಲಿ ಒಡಕು | ರಾಜ್ಯಪಾಲರ ಭೇಟಿಯಾದ ವಿಜಯ್



