ಹೈದರಾಬಾದ್: ಖ್ಯಾತ ನಟ ಜೂನಿ-ಯರ್ ಎನ್ ಟಿಆರ್ ತಮ್ಮ ತಾಯಿಶಾಲಿನಿ ಹಾಗೂ ಪತ್ನಿ ಪ್ರಣತಿ ಅವರೊಂದಿಗೆ ಹೈದರಾಬಾದ್ನ ಓಬುಲ್ ರೆಡ್ಡಿ ಶಾಲೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಜನ ಸಾಮಾನ್ಯ ರಂತೆ ಸರತಿ ಸಾಲಲ್ಲಿ ನಿಂತು ಕಾದು ಮತದಾನ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಅಲ್ಲು ಅರ್ಜುನ್ ಹೈದರಾಬಾದ್ ನ ಬಿಎಸ್ಎನ್ಎಲ್ ಸೆಂಟರ್ ಜುಬಿಲಿ ಹಿಲ್ಸ್ನಲ್ಲಿ ಮತದಾನ ಮಾಡಿದರು.ಪವರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಕೂಡ ತಮ್ಮ ಪತ್ನಿ ಸಮೇತ ಆಗಮಿಸಿ ಮತದಾನ ಮಾಡಿದರು. ಮೆಗಾಸ್ಟಾರ್ ಚಿರಂಜೀವಿ ತಮ್ಮ ಪತ್ನಿ ಸುರೇಖಾ ಅವರೊಂದಿಗೆ ಆಗಮಿಸಿ ಮತ ಹಕ್ಕು ಚಲಾಯಿಸಿದರು.
ಟಾಲಿವುಡ್ ನ ನಿರ್ದೇಶಕ ಮತ್ತು ಸಿನಿಮಟೋಗ್ರಾಫರ್ ತೇಜ ಅವರು ಪತ್ನಿ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಕಡಪದಲ್ಲಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಹೈದರಾಬಾದ್ ನಲ್ಲಿ ಮಾಜಿ ಸಿಎಂ ಎಂ ಚಂದ್ರಬಾಬು ನಾಯ್ಡು ಮತದಾನ ಮಾಡಿದರು. ಹೈದರಾಬಾದ್ ನಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಇಡೀ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.