ತಿ.ನರಸೀಪುರ: ಬಿಜೆಪಿ ಜೆಡಿಎಸ್ ಮೈತ್ರಿಕೂಟ ಪ್ರಾಬಲ್ಯವಿರುವ ತಾಲೂಕಿನ ಮೂಗೂರು ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಭಾಗ್ಯ ಅವಿರೋಧವಾಗಿ ಆಯ್ಕೆಯಾದರು.ಗ್ರಾಮ ಪಂಚಾಯಿತಿಯ ಹಿಂದಿನ ಉಪಾಧ್ಯಕ್ಷೆ ಶಾಂತಿ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯ ಅವರೊಬ್ಬರೆ ನಾಮಪತ್ರವನ್ನು ಸಲ್ಲಿಸಿದ್ದರಿಂದ ಇವರ ವಿರುದ್ಧವಾಗಿ ಯಾರು ನಾಮಪತ್ರ ಸಲ್ಲಿಸಿದ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಎಚ್ ಸಿ ರತೀಶ್ ಘೋಷಣೆ ಮಾಡಿದರು.
24 ಸದಸ್ಯರ ಸಂಖ್ಯಾಬಲವನ್ನು ಹೊಂದಿರುವ ಪಂಚಾಯಿತಿಯಲ್ಲಿ 14ಸದಸ್ಯರು ಹಾಜರಿದ್ದು, 11 ಮಂದಿ ಗೈರಾಗಿದ್ದರು. ಬಿಜೆಪಿ ನಿಷ್ಟಾವಂತ ಕಾರ್ಯಕರ್ತೆಯಾಗಿರುವ ಭಾಗ್ಯ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹಾಗೂ ಕ್ಷೇತ್ರದ ಮುಖಂಡರಾದ ಹಿರಿಯ ಶಸ್ತ್ರ ಚಿಕಿತ್ಸಕ ತಜ್ಞ ಡಾ.ಎಂ.ರೇವಣ್ಣ ಸನ್ಮಾನಿಸಿ ಅಭಿನಂದಿಸಿದರು.ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯರಾಜ್), ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ನಿರ್ದೇಶಕ ಪೂಜಿತ್ ಕುಮಾರ್, ಪಿಎಸಿಸಿಎಸ್ಅಧ್ಯಕ್ಷ ಜಗದೀಶಮೂರ್ತಿ, ಗ್ರಾ.ಪಂ ಅಧ್ಯಕ್ಷ ಎಂ.ಡಿ.ಲೋಕೇಶ್, ಅಭಿವೃದ್ಧಿ ಅಧಿಕಾರಿ ಪ್ರಕಾಶ್, ತಾ.ಪಂ ಮಾಜಿ ಸದಸ್ಯ ಎಂ.ಚಂದ್ರಶೇಖರ್, ಗ್ರಾಪಂ ಸದಸ್ಯರಾದ ಶಿವಣ್ಣ, ಚಂದ್ರಮ್ಮ, ರತ್ನಮ್ಮ, ಲಕ್ಷ್ಮಿ, ಸವಿತ, ಬಿ.ಎಸ್.ತಂಗಮ್ಮ, ಪುಟ್ಟಮಾದಯ್ಯ, ಎಂ.ಎನ್.ಗಿರೀಶ್, ಎಂ.ಬಿ.ಮಹೇಶ್, ಟಿ.ಎಂ. ಚೇತನ, ಮುಖಂಡರಾದ ಎಂ. ಸಿದ್ದರಾಜು, ಗೌಡ್ರು ಪ್ರಕಾಶ್, ಆಡಿಟರ್ ಮಂಜುನಾಥ್, ಮಹದೇವಸ್ವಾಮಿ (ಅರವಿಂದ), ಹೊಸಹಳ್ಳಿ ಚಿನ್ನಸ್ವಾಮಿ ಹಾಗೂ ಇತರರು ಇದ್ದರು.