ಬೆಂಗಳೂರು : ನಿಷೇಧಿತ ಮಾದಕ ವಸ್ತುಗಳಾದ ಕೊಕೀನ್, ಮೆತಂಫೇಟಮಿನ್, ಗಾಂಜಾ ಹಾಗೂ ಇನ್ನೂ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಡಿಯಲ್ಲಿ ವಿದೇಶಿ ಇಬ್ಬರು ಮಹಿಳೆ ಸೇರಿದಂತೆ 10 ಜನರನ್ನು ಯಲಹಂಕ ಉಪನಗರ ದೇವರ ಜೀವನ ಹಳ್ಳಿ ಬಾಣಸವಾಡಿ ಕೋರಮಂಗಲ ಬೊಮ್ಮನಹಳ್ಳಿ ಮತ್ತು ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬಂಧಿಸಿ ಮಾರುಕಟ್ಟೆ ಮೌಲ್ಯದ ಆದರದ ಮೇಲೆ 23 ಕೋಟಿ 63 ಲಕ್ಷ 26,000 ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ರವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.



