ಬೆಂಗಳೂರು: ನಿನ್ನೆ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರವೇ ಸೃಷ್ಟಿಯಾಗಿದೆ.
170 ಕ್ಕೂ ಅಧಿಕ ಮರಗಳು ಧರೆಗುರುಳಿದ್ರೆ 408 ಮರದ ಕೊಂಬೆಗಳು ಮುರಿದು ಬಿದ್ದಿವೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68 ಕಡೆ ಜಲಾವೃತವಾಗಿದೆ. ರಸ್ತೆಯಲ್ಲಿ ಮರಗಳು ಧರೆಗುರಳಿದಿದ್ದರಿಂದ ಟ್ರಾಫಿಕ್ ಜಾಮ್ಗೆ ಜನ ಹೈರಾಣಾಗಿರುವ ಘಟನೆಯೂ ಸಂಭವಿಸಿದೆ. 25 ವರ್ಷಗಳ ಬಳಿಕ ಏಪ್ರಿಲ್ ನಲ್ಲಿ ದಾಖಲೆ ಮಳೆ ದಾಖಲಾಗಿದೆ. ವಿಧಾನಸೌಧ, ಪೊಲೀಸ್ ಕಮಿಷನರ್ ಕಚೇರಿ, ಇನ್ಫೆಂಟ್ರಿ ರೋಡ್, ಲ್ಯಾವೆಲ್ಲೆ ರೋಡ್, ಶಿವಾಜಿನಗರ, ರಿಚ್ಮಂಡ್ ಟೌನ್, ಅವೆನ್ಯೂ ರೋಡ್ ಸುತ್ತಮುತ್ತ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಸುಮ್ಮನಹಳ್ಳಿ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗಿದೆ. ಕಾರು-ಲಾರಿ ಸೇರಿದಂತೆ 7-8 ವಾಹನಗಳ ಮಧ್ಯೆ ಅಪಘಾತವಾಗಿದ್ದು, ಹಲವಾರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಲ್ಫ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮುಳುಗಡೆಯಾದ್ರೆ, ಮಲ್ಲೇಶ್ವರಂ, ಯಶವಂತಪುರದ ಬೃಹದಾಕಾರದ ಮರಗಳು ಧರೆಗುರುಳಿದ್ವು. ಕೆಲವೆಡೆ ಕಾರುಗಳೂ ಕೂಡ ಮುಳಗಡೆಯಾದ ದೃಶ್ಯಗಳು ಕಂಡುಬAದವು. ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕೊಠಡಿಗೆ ಮಳೆ ನೀರು ನುಗ್ಗಿದೆ. ಕಿಟಕಿಯಿಂದ ಮಳೆನೀರು ನುಗ್ಗಿ ನೆಲದ ಮೇಲೆ ಹರಿದಿದೆ. ಮಳೆ ನೀರಲ್ಲಿ ದಿನಪತ್ರಿಕೆಗಳು ತೇಲಿವೆ. ಶಾಂತಿನಗರದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.ಬಿನ್ನಿಮಿಲ್ ರಸ್ತೆಯಲ್ಲಿ 30 ಅಡಿ ಉದ್ದದ ಗೋಡೆ ಕುಸಿತಗೊಂಡಿದ್ದು ಕಿರಿದಾದ ರಸ್ತೆಗೆ ಬೃಹತ್ ಗೋಡೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.ಮುಖ್ಯಮಂತ್ರಿಗಳ ನಿವಾಸ “ಕಾವೇರಿ” ಸೇರಿದಂತೆ ಅಂದಾಜು 40 ಕಡೆ ಮರ ಬಿದ್ದಿರುವ ಘಟನೆ ವರದಿಯಾಗಿದೆ. ಮಲ್ಲೇಶ್ವರ ದ ಮಾರ್ಗೋಸಾ ರಸ್ತೆಯಲ್ಲಿ ಹತ್ತಾರು ಕಡೆ ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಹೀಗಾಗಿ ಪ್ರಮುಖ ಸಂಚಾರ ರಸ್ತೆಯಾದ ಮಾರ್ಗೋಸಾ ರಸ್ತೆ ಬಂದ್ ಆಗಿತ್ತು. ಮಳೆ, ಗಾಳಿಗೆ ಸಿಟಿ ಯೂನಿಯನ್ ಬ್ಯಾಂಕ್ ನ ಬೃಹತ್ ನಾಮಫಲಕ ಬಿದ್ದುಹೋಗಿದೆ.
ಅಗ್ನಿಶಾಮಕ ದಳದವರು ಮತ್ತು ಬೃಹತ್ ಬೆಂಗಳೂರು ನಗರ ಪಾಲಿಕೆಯ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಮುಖ್ಯಮಂತ್ರಿಗಳ ನಿವಾಸ, ಮುಖ್ಯ ಕಾರ್ಯದರ್ಶಿಗಳ ನಿವಾಸ, ಕರ್ನಾಟಕ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯ ಕಾಂಪೌAಡ್ ಒಳಗಡೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಕಾಂಪೌಂಡ್, ಸಿಐಡಿ ಕಚೇರಿಯ ಕಾಂಪೌAಡ್ ಒಳಗಡೆ ಸೇರಿದಂತೆ ಇನ್ನೂ ಇತರಡೆ ಮರಗಳು ಬಿದ್ದಿರುವುದನ್ನು ತೆರವುಗೊಳಿಸಲು ಹರ ಸಾಹಸ ಪಡುತ್ತಿದ್ದಾರೆ.
ಹಾಗೆಯೇ ಬಸವನಗುಡಿ ಯಲ್ಲಿರುವ ದಾಸಪ್ಪ ಮೆಮೋರಿಯಲ್ ಆಸ್ಪತ್ರೆಯ ಒಳಗಡೆ ಮಳೆ ನೀರು ತುಂಬಿಕೊAಡು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಪರದಾಡುವ ಪರಿಸ್ಥಿತಿ ಬಂದಿದೆ.ಇದಲ್ಲದೆ ಬೆಂಗಳೂರು ರೈಲ್ವೆ ಸ್ಟೇಷನ್ ಮುಂಭಾಗ ಕಾರ್ ಮೇಲೆ ಮರ ಬಿದ್ದಿರುವುದು, ಅಭಿನಯ ರಸ್ತೆಯಲ್ಲಿ ದೊಡ್ಡ ಮರ ಬಿದ್ದಿರುವುದು, ಅಪಾರ್ಟ್ಮೆಂಟ್ ಗಳಲ್ಲಿ ನೀರು ನುಗ್ಗಿ ಜನಗಳಿಗೆ ತೊಂದರೆಯಾಗಿರುವುದು ಮತ್ತು ಹಾವುಗಳು ಸಹ ನೀರಿನಲ್ಲಿ ತೇಲಾಡುತ್ತಿರುತ್ತವೆ ಎಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿರುತ್ತಾರೆ.ಸಂಚಾರ ಸಿಕ್ಕು ಸಮಸ್ಯೆಯೂ ಸಹ ಜಾಸ್ತಿ ಆಗಿರುತ್ತದೆ. ಸಂಚಾರಿ ಪೊಲೀಸರು ಸಾರ್ವಜನಿಕರ ರಸ್ತೆಗಳಲ್ಲಿ ಮುರಿದುಬಿದ್ದಿರುವ ಮರಗಳನ್ನು ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳ ನೆರವು ಕೋರಿರುತ್ತಾರೆ.
ಮಳೆ ಅವಾಂತರ: 170 ಮರಗಳು ಧರಾಶಾಹಿ, 68 ಕಡೆ ಜಲಾವೃತ



