ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರು ಮ್ಯಾಚ್ಗಳ ಏಕದಿನ ಸರಣಿ ಶುರುವಾಗಿದೆ. ಎಡ್ಜ್ಬಾಸ್ಟನ್ನಲ್ಲಿ ನಡೆದ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಜಯ ಸಾಧಿಸಿದೆ. ಇನ್ನು ದ್ವಿತೀಯ ಪಂದ್ಯವು ಜುಲೈ 16 ರಂದು ಕಾರ್ಡಿಫ್ನಲ್ಲಿ ನಡೆಯಲಿದೆ.ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಕಾರ್ಡಿಫ್ನಲ್ಲಿ ನಡೆಯಲಿರುವ ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲೂ ಟೀಮ್ ಇಂಡಿಯಾ ಗೆದ್ದರೆ 2-0 ಅಂತರದಿಂದ
ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ನಾಳಿನ (ಜು.16) ಪಂದ್ಯದಲ್ಲಿ ಆಂಗ್ಲರ ಪಡೆಯಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇನ್ನು ಈ ಪಂದ್ಯದ
ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.2ನೇ ಪಂದ್ಯವು ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 5:30 ಕ್ಕೆ (ಕಾರ್ಡಿಫ್ಸ್ಥಳೀಯ ಸಮಯ ಮಧ್ಯಾಹ್ನ 1:00 ಗಂಟೆ) ಮ್ಯಾಚ್ ಆರಂಭವಾಗಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ಸೋನಿ ಸ್ಪೋರ್ಟ್್ಸ ನೆಟ್ವರ್ಕ್ (Sony Sports Ten 1, 3, 4 ಮತ್ತು 5) ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋಸ್ಟಾರ್ ಆಯಪ್ ಮತ್ತು ವೆಬ್ಸೈಟ್ನಲ್ಲೂ ಈ ಪಂದ್ಯದ ಲೈವ್ ಸ್ಟ್ರಿಮಿಂಗ್ ಇರಲಿದೆ. ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನ ನೆರವು ನೀಡುವ ಒಂದು ಸಮತೋಲಿತ ಮೈದಾನವಾಗಿದೆ. ಆರಂಭದಲ್ಲಿ ಬ್ಯಾಟರ್ಗಳಿಗೆ ಈ ಪಿಚ್ ಉತ್ತಮವಾಗಿರಲಿದ್ದು,
ಒಮ್ಮೆ ಕ್ರೀಸ್ಗೆ ಸೆಟ್ ಆದರೆ ದೊಡ್ಡ ರನ್ ಗಳಿಸಲು ಇಲ್ಲಿ ಉತ್ತಮ ಅವಕಾಶವಿದೆ. ಇನ್ನು ಪಂದ್ಯದ ಆರಂಭದಲ್ಲಿ ಗಾಳಿಯ ವೇಗದಿಂದಾಗಿ ವೇಗದ ಬೌಲರ್ಗಳಿಗೆ ಪಿಚ್ ನೆರವಾಗಲಿದೆ. ಆದರೆ ಪಂದ್ಯ ಮುಂದುವರಿದಂತೆ ಪಿಚ್ ನಿಧಾನಗತಿಯಾಗಲಿದ್ದು, ಸ್ಪಿನ್ನರ್ಗಳು ಮತ್ತು ಸ್ಲೋ ಬೌಲರ್ಗಳಿಗೆ ಹೆಚ್ಚಿನ ವಿಕೆಟ್ ಪಡೆಯಲು ಸಹಾಯ ಮಾಡುತ್ತದೆ.
IND vs ENG ನಡುವಣ 2ನೇ ಏಕದಿನ ಪಂದ್ಯ ಇಂದು



