ಬೆಂಗಳೂರು: ಜಯಲಲಿತಾ ಬಂಗಲೆ ಖರೀದಿಗೆ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ಜಯಲಲಿತಾ ಒಡೆತನದ “ವೇದಂ” ಬಂಗಲೆ ಖರೀದಿಸಲು ಜೋಸೆಫ್ ವಿಜಯ್ ಇರಾದೆ ಹೊರಹಾಕಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.ಬರೋಬ್ಬರಿ 350 ಕೋಟಿ ರೂಪಾಯಿಗೆ ಮಾಜಿ ಸಿಎಂ ಜಯಲಲಿತಾ ಅವರ ವೇದಂ ಬಂಗಲೆ ಖರೀದಿಗೆ ಜೋಸೆಫ್ ವಿಜಯ್ ಆಸಕ್ತಿ ತೋರಿದ್ದು, ಸದ್ಯ ಜಯಲಲಿತಾ ನಿಧನದ ಬಳಿಕ “ವೇದಂ” ನಿವಾಸದಲ್ಲಿ ಅವರ ಸಂಬಂಧಿ ದೀಪಾ ವಾಸಿಸುತ್ತಿದ್ದಾರೆ. ದೀಪಾ ಜೊತೆಗೆ ಜೋಸೆಫ್ ವಿಜಯ್ ಖರೀದಿ ಬಗ್ಗೆ ಮಾತುಕತೆ ಆರಂಭಿಸಿದ್ದು, ಖರೀದಿಗೆ ಮುಂದಾಗಿರುವುದಕ್ಕೆ ಪ್ರಬಲ ಕಾರಣವೂ ಇದೆ ಎನ್ನಲಾಗಿದೆ.ಸದ್ಯ ಜೋಸೆಫ್ ವಿಜಯ್ ವಾಸವಿರುವುದು ಚೆನ್ನೈನ ನೀಲಂಕರೈ ಬಡಾವಣೆಯ ನಿವಾಸದಲ್ಲಿ. ಅಲ್ಲಿಗೂ ತಮಿಳುನಾಡಿನ ವಿಧಾನಸಭಾ ಕಾರ್ಯಾಲಯಕ್ಕೂ 17 ಕಿ.ಮೀ ಅಂತರವಿದೆ. ಪ್ರತಿನಿತ್ಯ ರಾಜ್ಯದ ಸಿಎಂ ಆಗಿ ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಓಡಾಟ ಮಾಡಲು ಸಮಯಾವಕಾಶ ಹೆಚ್ಚು ತಗುಲಲಿದೆ. ಜೊತೆಗೆ ಅಂತಾ ಟ್ರಾಫಿಕ್ ಕಿರಿಕಿರಿ ಜನಸಾಮಾನ್ಯರಿಗೆ ತಟ್ಟುತ್ತಿದೆ. ಪೋಯಸ್ ಗಾರ್ಡನ್ನ ಜಯಲಲಿತಾ ನಿವಾಸ ವಿಧಾನಸಭಾ ಕಾರ್ಯಾಲಯಕ್ಕೆ ಸಮೀಪವಿದೆ. ಈ ನಿಟ್ಟಿನಲ್ಲಿ ಜಯಲಲಿತಾ ಅವರ ಸಂಬAಧಿ ದೀಪಾ ಜೊತೆಗೆ ಜೋಸೆಫ್ ವಿಜಯ್ ಮಾತುಕತೆ ನಡೆಸಿದ್ದಾರೆ. ಈ ನಿವಾಸವನ್ನು ತಮಗೆ ಕೊಟ್ಟರೇ, ಜಯಲಲಿತಾ ಅವರ ನೆನಪು ಹಾಗೂ ವಿಧಾನಸಭಾ ಕಾರ್ಯಾಲಯಕ್ಕೂ ಸಮೀಪವಿರುವಂತೆ ಆಗುತ್ತದೆ ಎಂಬ ವಿಚಾರ ಮುಂದಿಟ್ಟುಕೊAಡು ಮಾತುಕತೆ ಮಾಡುತ್ತಿದ್ದು, ಇದು ಯಾವ ಹಂತಕ್ಕೆ ತಲುಪಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಹೊರ ಬೀಳಬೇಕಿದೆ.



