ಬೆಂಗಳೂರು: ಮಹಡಿ ಮೇಲಿಂದ ತಳ್ಳಿ ತಾಯಿಯನ್ನು ಪುತ್ರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್ಆರ್ನಗರದಲ್ಲಿ ನಡೆದಿದೆ. ತಾಯಿ ಸಾವಿತ್ರಮ್ಮನ(72) ಕೊಲೆಯಾದ ಮೃತ ದುರ್ದೈವಿ. ಪುತ್ರ ವೆಂಕಟೇಶ (42) ಎಂಬಾತನೇ ಕೊಲೆಗೈದ ಪಾಪಿ ಪುತ್ರ. ಆರ್ಆರ್ ನಗರದ ಬೆಮಲ್ ಲೇಔಟ್ ಮನೆಯಲ್ಲಿ ಈ ಘಟನೆ ನಡೆದಿದೆ. .
ಪಾರ್ಶ್ವವಾಯು ಅನಾರೋಗ್ಯದಿಂದ ಮನೆಯಲ್ಲೇ ಇದ್ದ ತಾಯಿ ಸುಮಾರು 4-5 ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು. ಇದೇ ಬೇಸರದಿಂದ ಮೂರನೇ ಮಹಡಿಯಿಂದ ತಾಯಿಯನ್ನ ನೂಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.



