ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮೇಲಿಂದ ಮೇಲೆ ಚರ್ಚೆಗೆ ಬಂದಿದ್ದಾಗಿದೆ. ಕಾಂಗ್ರೆಸ್ನ ಹೈಕಮಾಂಡ್ ನಾಯಕರು ಶತಾಯಗತಾಯ ನಾಯಕತ್ವ ಬದಲಾವಣೆ ಮಾಡಿಯೇ ತೀರುತ್ತಾರೆ ಎಂಬ ಅದೆಷ್ಟೋ ಸಂದರ್ಭದಲ್ಲಿ, ಏನು ಆಗದೇ ಇದ್ದಂತೆ ರಾಜಕೀಯ ಮುಂದುವರೆದಿದ್ದಾಗಿದೆ. ಆದ್ರೆ, ಈ ಬಾರಿ ಅಂತಹ ವಾತಾವರಣ ಇಲ್ಲ ಎಂಬ ಗಾಢವಾದ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ. ಅದಕ್ಕೆ ಸಾಲು ಸಾಲು ಪ್ರಬಲ ಕಾರಣಗಳು ಕೂಡ ಇದೆ. ನಾವು ಇಂದು ಹೇಳಲು ಹೊರಟಿರುವುದು ಅದೇ ಕಥೆಯನ್ನ. ಅಷ್ಟಕ್ಕೂ ಮೇ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸುತ್ತಾ? ಶತಾಯಗತಾಯ ನಾನು ಮುಖ್ಯಮಂತ್ರಿ ಆಗಬೇಕು ಎಂಬ ಡಿಕೆಶಿ ಕನಸು ನನಸಾಗುತ್ತೆ? ಹೀಗೆ ಹಲವು ಪ್ರಶ್ನೆಗಳು ಚರ್ಚೆಗೆ ಬಂದಿದ್ದು, ಅದಕ್ಕೆಲ್ಲಾ ನಾವು ಇಂದು ಉತ್ತರ ಹೇಳಲು ಹೊರಟಿದ್ದೇವೆ.
ರಾಜ್ಯ ರಾಜಕಾರಣದಲ್ಲಿ ಅಧಿಕಾರ ಯಾರಿಗೂ ಶಾಶ್ವತವು ಅಲ್ಲ, ಸಿಗುವುದಿಲ್ಲ ಎನ್ನುವಂತೆಯೂ ಇಲ್ಲ. ಹೀಗಾಗಿ, ಸದ್ಯ ಮೇ ತಿಂಗಳ 20 ಕ್ಕೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ಧರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇಜರ್ ಬದಲಾವಣೆಯ ನಿರೀಕ್ಷೆಯಲ್ಲಿದೆ.
1. ರಾಜ್ಯದಲ್ಲಿ ಈಗಾಗಲೇ ಎರಡೆರಡು ಬಾರಿ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅಧಿಕಾರ ನಡೆಸಿದ್ದಾರೆ.
2. ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
3. ದಾಖಲೆಯ 17 ಬಜೆಟ್ ಮಂಡನೆ ಹಾಗೂ ಅತಿ ಹೆಚ್ಚು ಕಾಲ (ದೀರ್ಘಾವಧಿಯ) ಮುಖ್ಯಮಂತ್ರಿ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.
4. ಇನ್ನು ಮೂಲತಃ ಕಾಂಗ್ರೆಸ್ನವರೇ ಅಲ್ಲದ ಸಿದ್ಧರಾಮಯ್ಯ, ಪಕ್ಷಕ್ಕೆ ಸೇರ್ಪಡೆಯಾದಾಗಿನಿಂದಲೂ ಲ್ರಬಲ ಅಹಿಂದ ಎಂದು ಪ್ರತಿಪಾದಿಸುತ್ತಾ, ಆ ವೋಟ್ ಬ್ಯಾಂಕ್ ತಮ್ಮ ಬಳಿಯಿಟ್ಟುಕೊಂಡು ಅಧಿಕಾರ ಮುಂದುವರೆಸಿದ್ದಾರೆ.
5. ಗ್ಯಾರೆಂಟಿಗಳ ಘೋಷಣೆ ಮೂಲಕ ಅದಿಕಾರಕ್ಕೆ ಬಂದಾಗಲೂ ಅವರೇ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ.
6. ಈಗ ಅವರು ನಿರ್ಗಮಿಸಲೇಬೇಕಾದ ವಾತಾವರಣ ಪಕ್ಷದಲ್ಲಿ, ಸರ್ಕಾರದಲ್ಲಿ ನಿರ್ಮಾಣವಾಗುತ್ತಿದ್ದು ಇದಕ್ಕೆ ಹೈಕಮಾಂಡ್ ನಾಯಕರು ಯಾವ ರೀತಿ ಸಮಸ್ಯೆ ಜಟಿಲವಾಗದಂತೆ ನೋಡಿಕೊಳ್ಳುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
7. 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಿ, ಸಿದ್ಧರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ.
8. ಈಗ ಅಧಿಕಾರ ಬೇರೆಡೆಗೆ ವರ್ಗಾವಣೆ ಮಾಡಬೇಕಿದೆ.
9. ಸತತವಾಗಿ 2008 ರಿಂದ ಈವರೆಗೂ ಒಂದಿಲ್ಲೊಂದು ಹುದ್ದೆಯನ್ನು ಸಿದ್ಧರಾಮಯ್ಯ ನಿಭಾಯಿಸಿದ್ದು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ.
10. ಇನ್ನು ಅತ್ಯಂತ ಹೆಚ್ಚು ಅವಧಿ ಸಿಎಂ ಆಗಿದ್ದ ದೇವರಾಜ್ ಅರಸ್ ಅವರ ದಾಖಲೆಗಳನ್ನು ಸರಿಗಟ್ಟಿರುವ ಸಿದ್ಧರಾಮಯ್ಯ ಬದಿಗೆ ಸರಿಸಿದ್ದಾರೆ.
ಸದ್ಯ ಅವರು ಅಧಿಕಾರ ಬಿಟ್ಟು ಕೊಡಲೇಬೇಕಾದ ಸ್ಥಿತಿ ಡಿಕೆಶಿ ನಿರ್ಮಿಸಿದ್ದಾರೆ. ಅದೇನೇ ಇರಲಿ, ಮುಂದಿನ ಚುನಾವಣೆ ಹಿತದೃಷ್ಟಿಯಿಂದ ಸಿದ್ಧರಾಮಯ್ಯ ಈಗ ಮುಖ್ಯಮಂತ್ರಿ ಗಾದಿಯನ್ನು ಬಿಟ್ಟುಕೊಡಲೇಬೇಕಿದೆ ಎಂಬ ಮಾತುಗಳು ಜೋರಾಗಿ ಚರ್ಚೆಯಾಗುತ್ತಿ
ಮೇ ತಿಂಗಳಲ್ಲೇ ಬೀಸುತ್ತಾ ರಾಜಕೀಯದಲ್ಲಿ ಬಿರುಗಾಳಿ? ವಿಶೇಷ ವರದಿ



