ಬೆಂಗಳೂರು; ಪ್ರಾಚೀನ ಭರತನಾಟ್ಯ ಕಲೆಯನ್ನು ಉಳಿಸಿ, ರಕ್ಷಿಸಿ, ಪೋಷಿಸುವ ಹೊಣಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಭರತನಾಟ್ಯ ಕಲಾವಿದೆ ಗುರು ವಿದ್ವಾನ್ ಡಾ.ಪ್ರಿಯಾ ಗಣೆಶ್ ಅಭಿಪ್ರಾಯಪಟ್ಟರು.
ಭರತ ನಾಟ್ಯವು ದಕ್ಷಿಣ ಭಾರತದಲ್ಲಿ ಪ್ರಸಿದ್ದಿ ಪಡೆದ ಪ್ರಾಚೀನ ಶಾಸ್ತ್ರೀಯ ನೃತ್ಯ ಕಲೆ. ಇದರ ಇತಿಹಾಸ ಸುಮಾರು ಸಾವಿರ ವರ್ಷಗಳ ಹಿಂದಿನದು.ತಮಿಳನಾಡಿನ ಚಿದಂಬರ ದೇವಾಲಯದಲ್ಲಿ ಕೆತ್ತಿದ ಶಿಲ್ಪಗಳು ಈ ನೃತ್ಯಕ್ಕೆ ಪ್ರೇರಣೆ ಯಾಗಿದೆ.ಭಾವ ರಾಗ ತಾಳಗಳ ಸಮನ್ವಯದಿಂದ ಈ ನೃತ್ಯ ರೂಪುಗೊಂಡಿದೆ. ಭಾವವನ್ನು “ಭ” ರಾಗವನ್ನು “ರ” ತಾಳವನ್ನು ‘ತ” ಸೂಚಿಸುತ್ತದೆ.ಈ ಮೂರು ಅಂಶಗಳ ಸಮನ್ವಯವೇ ಭತರನಾಟ್ಯ.
ಉಮಾಮಹೇಶ್ ತತ್ವರ್ತಿ, ಮೃದುಲ ದಂಪತಿಗಳ ಮಗಳಾದ ಕುಮಾರಿ ಲಕ್ಷ್ಮೀ ಅನನ್ಯ ತತ್ವರ್ತಿ ತನ್ನ 7ನೇ ವರ್ಷದ ಬಾಲಕಿ ಯಾಗಿದ್ದಾಗಲೇ ತನ್ನ ನೃತ್ಯಾಭಿನಯನಕ್ಕೆ ನಾಂದಿ ಹಾಡಿದರು.ಇವರ ಮೊದಲ ಗುರು ಪೂಣೆ ಯಲ್ಲಿನ ಡಾ ಲಕ್ಷ್ಮೀ ಪಂಡಿತ್ ಬಳಿ ಇವರ ನಾಟ್ಯದಲ್ಲಿ ಪ್ರಥಮಾಂಕ ಪ್ರಾರಂಭ ವಾಯಿತು.ತದನಂತರ ಬೆಂಗಳುರಿನಲ್ಲಿ ವಿದ್ವಾನ್ಡಾ ಪ್ರಿಯಾಗಣೆಶ್ ಬಳಿ ಭರತ ನಾಟ್ಯದಲ್ಲಿನ ವಿವಿಧ ಪ್ರಾಕಾರಗಳನ್ನು ಕಲಿತರು, ಪದವಿನ್ಯಾಸ, ಹಸ್ತಮುದ್ರೆ, ದೃಷ್ಠಿ, ಮುಂತಾದ ಸೂಕ್ಷ್ಮ ಅಂಶಗಳನ್ನು ಮನನ ಮಾಡಿಕೊಂಡರು. ಈಗ 11ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಲಕ್ಷ್ಮೀ ಅನನ್ಯ ಓದಿನಲ್ಲಿ ಸಹಾ ಮುಂದಿದ್ದಾರೆ.
ಭಾನುವಾರ ರಾತ್ರಿ ಎಲಕ್ಟ್ರಾನಿಕ್ ಸಿಟಿ ಯಲ್ಲಿನ ಸಿಂಭಾಸಿಸ್ ಅಡಿಟೋರಿಯಮ್ ನಲ್ಲಿ ಲಕ್ಷ್ಮೀ ಅನನ್ಯ ರಂಗ ಪ್ರವೇಶ ನಡೆಯಿತು. ಇವರ ರಂಗಪ್ರವೇಶದಲ್ಲಿ ರಾಮ ಭಕ್ತಿಯ ಮಹಿಮೆ ಹಾಗೂ ಹನುಮಂತನಲ್ಲಿರುವ ರಾಮ ಭಕ್ತಿಯನ್ನು ಕುರಿತು ಕೀರ್ತನಗಳಿಗೆ ಉತ್ತಮ ಅಭಿನಯದ ನೃತ್ಯಗಳನ್ನು ವೀಕ್ಷಕ ವರ್ಗ ಕಣ್ತುಂಬಿಸಿಕೊAಡರು. ಭದ್ರಾಚಲಂ ರಾಮದಾಸನು ಸಹಾ “ಶ್ರೀ ರಾಮ ನೀನಾಮ ಎಂತ ರುಚಿರಾ” ಎಂದು ಹಾಡಲಿಲ್ಲವೇ. ಪ್ರಶಿದ್ದ ಕೀರ್ತನಾಚಾರ್ಯ ತ್ಯಾಗರಾಜು ಸಹಾ “ಮರುಗೇಲರಾ ಓ ರಾಘವಾ” ಎಂದು ಹಾಡಲಿಲ್ಲವೇ. ತೆಲುಗಿನಲ್ಲಿ ಭಾಗವತವನ್ನು ಬರದ ಬೊಮ್ಮೆರ ಪೋತನ ಸಹಾ ತಾನು ಬರದ ಭಾಗತವನ್ನು ಕೋದಂಡ ರಾಮನಿಗೆ ಅಂಕಿತ ನೀಡಲಿಲ್ಲವೇ. ಅಂತಹ ಶ್ರೀರಾಮನನ್ನು ಕುರಿತು ಮೂಡಿಬಂದ ಭರತನಾಟ್ಯ ವೀಕ್ಷಕರ ಅಭಿನಂದನೆಗಳಿಗೆ ಪಾತ್ರವಾಯಿತು.
ಪ್ರಥಮದಲ್ಲಿ ಪುಷ್ಪಾಂಜಲಿ ಯಲ್ಲಿ ಗಣೇಶ ಸ್ತುತಿ,ಹಾಗು ರಾಮನಾಮವ ನುಡಿ ನುಡಿ, ಕಾಮೋದ್ರೇಕ ಬಿಡಿಬಿಡಿ ಎಂದು ಸಾರುವ ಕೀರ್ತನೆಗಳೊಂದಿಗೆ ಭರತನಾಟ್ಯ ನೃತ್ಯ ಕಾರ್ಯಕ್ರಮ ಪ್ರಾರಂಭವಾಯಿತು. ಕವಿತೆ, ವರ್ಣ, ಥಿಲ್ಲಾನ ಮುಂತಾದ ನೃತ್ಯ ಭಂಗಿಗಳಿಗೆ ಅನನ್ಯ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ರಾಮ ನಾಮದಲ್ಲೇ ಭಕ್ತಿ ಇದೆ.ಅಂತಹ ರಾಮನಾಮದ ಮಹಿಮೆ ಇಂದಲೇ ರತ್ನಾಕರನು ವಾಲ್ಮೀಕಿ ಯಾಗಿ ರಾಮಾಯಣವನ್ನು ಬರದನು.
ಹನುಮಂತನಲ್ಲಿರುವ ರಾಮ ಭಕ್ತಿಯ ಮಾರ್ಗಗಳನ್ನು ಹೇಳುತ್ತಾ ಶ್ರವಣಂ, ಕೀರ್ತನ, ಸ್ಮರಣಂ, ಪಾದಸೇವನಂ, ಅರ್ಚನಂ, ವಂದನಂ, ದಾಶ್ಯಂ, ಸಖ್ಯಂ ಹಾಗೂ ಆತ್ಮನಿವೇದನ ಮುಖ್ಯವಾಗಿ ಬೇಕಾಗಿದೆ ಎಂದು ಸಾರುವ ನೃತ್ಯಾಭಿನಯ ವೀಕ್ಷಕರಲ್ಲಿ ಭಕ್ತಿ ಭಾವವನ್ನು ಉಂಟುಮಾಡಿತು.
ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕುಮಾರಿ ಅನನ್ಯ ರವರ ನೃತ್ಯಗಳು ಇತರ ನೃತ್ಯ ಪಟುಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ಇವರಿಗೆ ನಾಟ್ಯಕಲಾ ಕುಸುಮ, ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿಗಳು ಇವರ ಮಡಿಲಿಗಡ ಸೇರಿವೆ.
ವೇದಿಕೆಯ ಕಾರ್ಯಕ್ರಮದಲ್ಲಿ ಲಕ್ಷ್ಮೀ ಪಂಡಿತ್, ಅನಂದ ಪಾಂಡುರAಗ, ವಿದ್ವಾನ್ ಅನಿಲ್ ಕುಮಾರ್, ಪ್ರಿಯಾ ಗಣೆಶ್ ರವರು ಮಾತನಾಡಿ ಲಕ್ಷ್ಮೀ ಅನನ್ಯ ತತ್ವರ್ತಿ ರವರ ನೃತ್ಯಾಭಿನಯವನ್ನು ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು.
ಪ್ರಾತ್ಯಕ್ಷಕ ಸಂಗೀತದಲ್ಲಿ ನಟ್ಟುವಾಂಗದಲ್ಲಿ ಪದ್ಮಗಂಧಿನಿರಾವ್, ಓಕಲ್ ರೋಹಿತ್ ಭಟ್, ಮೃದಂಗದಲ್ಲಿ ಶ್ರೀಹರಿ ರಂಗಸ್ವಾಮಿ, ರಿಥಿಮ್ ಪ್ಯಾಡ್ ನಲ್ಲಿ ಲಕ್ಷ್ಮೀನಾರಾಯಣ, ಕೊಳಲಿನಲ್ಲಿ ನರಸಿಂಹ ಮೂರ್ತಿ ಲಕ್ಷ್ಮೀ ಅನನ್ಯ ರವರ ನೃತ್ಯಗಳಿಗೆ ಸಹಕಾರ ನೀಡಿದರು.
ಪ್ರಧಾನವಾಗಿ ಕೊರಿಯೊಗ್ರಫಿ ರೂಪಕಲ್ಪನೆಯಲ್ಲಿ ವಿದ್ವಾನ್ ಡಾ ಪ್ರಿಯಾ ಗಣೆಶ್ ರವರ ಶ್ರಮ ಇಂದಿನ ಕುಮಾರಿ ಲಕ್ಷ್ಮೀ ಅನನ್ಯ ತತ್ವರ್ತಿ ರವರಿಂದ ಸಾರ್ಥವಾಯಿತು. ವಿಶ್ಲೇಷನೆ ಯಿಂದ ಕೂಡಿದ ನಿರೂಪಣೆ ಯಲ್ಲಿ ಮೃದುಲ ಭೀಮವರಪು, ಭುವನ,ಲಿಖಿತ್ ಕೃಷ್ಣ ಕಿಕ್ಕೇರಿ ರವರು ಪ್ರೇಕ್ಷಕ ವರ್ಗದ ಅಭಿಮಾನಕ್ಕೆ ಪಾತ್ರರಾದರು.
– ಲೇಪಾಕ್ಷಿ ಸಂತೋಷರಾವ್, ಬೆಂಗಳೂರು.
ಪ್ರಾಚೀನ ಭರತ ನಾಟ್ಯ ಕಲೆಯನ್ನು ರಕ್ಷಿಸಿ ಪೋಷಿಸುವ ಹೊಣಗಾರಿಕೆ ನಮ್ಮೆಲ್ಲರ ಮೇಲಿದೆ: ವಿದ್ವಾನ್ ಡಾ.ಪ್ರಿಯಾ ಗಣೇಶ್ ಅಭಿಪ್ರಾಯ



