ಬೆಂಗಳೂರು : ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿಕ್ಷಕರು ಪಿಐಎಲ್ ಹಾಕಿರುವುದಕ್ಕೆ ಕೋರ್ಟ್ ಆದೇಶ ಮಾಡಿದೆ. ಶಿಕ್ಷಕರು ಇದೀಗ ಪಿಐಎಲ್ ವಾಪಸ್ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ. ಮರುಪರಿಶೀಲನೆ ಮಾಡಿ ಎಂದು ಕೋರ್ಟ್ ಎಲ್ಲೂ ಹೇಳಿಲ್ಲ 2025-26ರಲ್ಲಿ ಏನು ಮಾಡಿದ್ದೀರಿ ಅದನ್ನು ಮಾಡಿ ಎಂದು ಹೇಳಿದೆ.



