ಬೆಂಗಳೂರು; ಪ್ರಧಾನಿಗಳು ವಿದೇಶಲ್ಲಿ ಹೋಗಿ ಎಚ್ಚರಿಕೆ ವಹಿಸಿಲ್ಲ ಎಂದರೆ ಬಡತನಕ್ಕೆ ಹೋಗಬೇಕಾಗುತ್ತದೆ ಎಂದಿದ್ದಾರೆ
ಆ ದೇಶಕ್ಕೆ ಹೇಳಿದ್ರಾ ಭಾರತಕ್ಕೆ ಹೇಳಿದ್ರಾ ಎಂದು ನೋಡಬೇಕು ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ 12 ವರ್ಷದಿಂದ ಅಧಿಕಾರ ವಹಿಸಿದ್ದಾರೆ. ಎರಡು ಕಂಪನಿಗಳಿಗೆ ರಕ್ಷಣೆ ಕೊಡಲು ಜನರಿಗೆ ಹೊರೆ ಹಾಕಿದ್ದಾರೆ. ಬಡತನದ ಸಂದೇಶ ನೀಡಿದ್ದು ತಲೆ ತಗ್ಗಿಸುವ ವಿಚಾರ. ಆರ್ಥಿಕ ವ್ಯವಸ್ಥೆ ಹಾಳಾಗಿದ್ದರೆ ಅದಕ್ಕೆ ಅವರೇ ಕಾರಣ. ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಅವರೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರಾಹುಲ್ ಗಾಂದಿ ವಿದೇಶಕ್ಕೆ ಹೋಗಿ ದೇಶದ ಬಗ್ಗೆ ಮಾತಾಡಿದ್ರು ಅಂತಾರೆ. ಆದರೆ ದೇಶ ಬಡತನದಲ್ಲಿದೆ ಎಂದು ದೇಶದ ಮಾನ ಕಳೆಯುವ ಪ್ರಯತ್ನ ಮಾಡಿದ್ದಾರೆ. ಅವರ ಸ್ನೇಹಿತರಿಗೆ ನಷ್ಟ ಆಗುತ್ತೆ ಎಂದು ಜನರ ಮೇಲೆ ಹೊರೆ ಹಾಕ್ತಿದ್ದಾರೆ. ಬಿಜೆಪಿಗರು ಏನೇ ಮಾಡಿದ್ರೂ ಅನಾಚಾರ ಆಗೋದಿಲ್ಲ. ಕಾಂಗ್ರೆಸ್ ನವರು ಮಾಡಿದರೆ ಅನಾಚಾರ, ತಪ್ಪು. ಅವರ ಚಿನ್ನ ಪ್ಯೂರಿಟಿ ಜಾಸ್ತಿ, ಸುವೆಂದು ಅಧಿಕಾರಿ ಮೇಲೆ ಆರೋಪ, ಹೋರಾಟ ಮಾಡಿದರು. ಈಗ ವಾಶಿಂಗ್ ಮಿಷಿನ್ ಗೆ ಹಾಕಿ ಕ್ಲೀನ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.ಒನ್ ನೇಷನ್ ಒನ್ ಇಲೆಕ್ಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೇರೆ ಬೇರೆ ಸಮಯದಲ್ಲಿ ಚುನಾವಣೆ ಆಗಿದೆ. ಯಾವ ರೀತಿ ಆಡಳಿತ ನ್ಯಾಯ ಕೊಡ್ತೀರಿ ಎಂದು ಹೇಳಬೇಕು.
ಪ್ರಧಾನಿ ಹೇಳಿಕೆಗೆ ಡಿ.ಕೆ.ಸುರೇಶ್ ವಾಗ್ದಾಳಿ



