ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕು ದೊಡ್ಡ ಕುರುಬರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾದ ನಾರಾಯಣಪ್ಪ ಮುರಳಿ ಸುಬ್ರಮಣಿ ಪ್ರಕಾಶ್ ಮಾದೇಶ್ ರಾಜ್ ಕುಮಾರ್ ಸೋಮಣ್ಣ ಮೀನಮ್ಮ ಮಂಜುಳಮ್ಮ ಪಟಲಪ್ಪ ಜಯಣ್ಣ ನವೀನ್ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆನೂತನ ನಿರ್ದೇಶಕರುಗಳನ್ನು ಗ್ರಾಪಂ ಸದಸ್ಯ ದಿನೇಶ್ ಡಿಸಿ ಅಭಿನಂದಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅತಿ ಮುಖ್ಯವಾಗಿದೆ ಎಲ್ಲಾ ನಿರ್ದೇಶಕರುಗಳು ಒಗ್ಗಟ್ಟಾಗಿ ಸಂಘವನ್ನು ಅಭಿವೃದ್ಧಿಪಡಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಐ ಬಸಪುರ ಗ್ರಾಪಂ ಅಧ್ಯಕ್ಷ ನಾಗಮಣಿ ಮಂಜುನಾಥ್ ಮಾಜಿ ಅಧ್ಯಕ್ಷ ರಾಮೇಗೌಡ ಆನಂದ್ ಗ್ರಾಫಂ ಮಾಜಿ ಸದಸ್ಯ ಕೆಂಪೇಗೌಡ ಹಾಗೂ ದೊಡ್ಡ ಕುರುಬರಹಳ್ಳಿ ಗ್ರಾಮದ ಮುಖಂಡರು ಹಾಜರಿದ್ದರು.