ಬೆಂಗಳೂರು: ರಾಜ್ಯ ಸರ್ಕಾರ ಕೊಡ ಮಾಡುವ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ, ಕೆಯುಡಬ್ಲೂಜೆ ಹಿರಿಯ ಸದಸ್ಯರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.
ಕೆ.ಜಿ.ರಸ್ತೆ, ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕರಾದ ಕೇಸರಿ ಹರವೂ ಅವರು ಅಭಿನಂದನಾ ಭಾಷಣ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಉಪಾಧ್ಯಕ್ಷ ಎಸ್ ಬಿ ಮದನ್ ಗೌಡ , ಖಜಾಂಚಿ ವಸುದೇವಹೊಳ್ಳ ಎಂ, ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಬಿ ಯು ಡಬ್ಲೂ÷್ಯಜೆ ಅಧ್ಯಕ್ಷ ಎಸ್.ಸೋಮಶೇಖರ ಗಾಂಧಿ,i ಉಪಾಧ್ಯಕ್ಷರಾದ ಆರ್.ಜೈಕುಮಾರ್ ಗೌಡ್ರು, ಕೆ ಎಸ್ ಸ್ವಾಮಿ, ಎಚ್ ಕೆ ಬಸವರಾಜ್, ದೇವರಾಜ್, buತಿರಿ ಕಾರ್ಯಕಾರಿ ಸಮಿತಿ ಸದಸ್ಯ ಎನ್. ಶಿವಾನಂದ ಹಾಗೂ ಹಿರಿಯ ಪತ್ರಕರ್ತೆ ಶಶಿಕಲ ಇತರೆ ಪದಾಧಿಕಾರಿಗಳು ಪತ್ರಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಬೀದರ್ ಸಮ್ಮೇಳನಕ್ಕೆ ಕಾರಣಾಂತರದಿAದ ಬರಲು ಸಾಧ್ಯವಾಗದೆ ಇದ್ದ ಕೆಯುಡಬ್ಲೂ÷್ಯಜೆ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.
ಕೆಯುಡಬ್ಲ್ಯೂಜೆಯಿಂದ ಡಾ.ಸಿದ್ಧನಗೌಡ ಪಾಟೀಲರಿಗೆ ಸನ್ಮಾನ



