ಬೆಂಗಳೂರು: ಖ್ಯಾತ ಚಿತ್ರ ಕಲಾವಿದ ಲಿಯೋನಾರ್ಡೊಡ ವಿಂಚಿ ಅವರ ಜನ್ಮದಿನವಾದ ಏಪ್ರಿಲ್ 15 ಅನ್ನು ಗೌರವಾರ್ಥವಾಗಿ ಅಂತರಾಷ್ಟ್ರೀಯ ಕಲಾ ಸಂಘ ಮತ್ತು ಯುನೆಸ್ಕೊ ಇದನ್ನು ವಿಶೇಷವಾಗಿ ವಿಶ್ವಕಲಾ ದಿನವನ್ನಾಗಿ ಘೋಷಿಸಿದೆ ಎಂದು ಸಾಹಿತಿಗಳು ಹಾಗೂ ಸಾಮಾಜಿಕ ಚಿಂತಕರಾದ “ಡಾ.ವೆಂಕಟೇಶ್ ಆರ್.ಚೌಥಾಯಿ” ಯವರು, ಕಾರ್ಯಕ್ರಮದಲ್ಲಿ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನೆಲಮಂಗಲ ಪಟ್ಟಣದ ಪೇಟೆ ಬೀದಿಯಲ್ಲಿರುವ “ಶ್ರೀ ಗೋವರ್ಧನ್ ಕೆ. ರವರ ಮಾಸ್ಟರ್ ಆರ್ಟ್್ಸ ಗ್ಯಾಲರಿಯಲ್ಲಿ” “ವಿಶ್ವಕಲಾ ದಿನಾಚರಣೆಯ” ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.“ಲಿಯೋನಾರ್ಡೋ ಡ ವಿಂಚಿ” ವಿಶ್ವ ಕಂಡಂತಹ ಒಬ್ಬ ಶ್ರೇಷ್ಠ ಚಿತ್ರಕಲಾವಿದರು.ಕೇವಲ ಚಿತ್ರಕಲಾವಿದರು ಮಾತ್ರವಲ್ಲ. ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ. ಸಂಗೀತಗಾರ, ಸಂಶೋಧಕ, ಶರೀರ ರಚನಾ ಶಾಸ್ತ್ರಜ್ಞ, ವರ್ಣ ಚಿತ್ರಗಾರ, ಶಿಲ್ಪಕಲಾವಿದ, ರೇಖಾಗಣಿತ ಶಾಸ್ತ್ರಜ್ಞ. ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿರುವ ಇವರ ಸಾಧನೆ, ಇಂದಿನ ಯುವ ಜನಾಂಗಕ್ಕೆ ಮಾದರಿ. ಇಂಥ ವಿಶಿಷ್ಟ ಸಾಧಕರ ಜನ್ಮದಿನವನ್ನು “ವಿಶ್ವಕಲಾ ದಿನ”ವೆಂದು ಇಡೀ ವಿಶ್ವವೇ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿಶ್ವ ಕಂಡ ಅತೀ ಶ್ರೇಷ್ಠ ವರ್ಣ ಚಿತ್ರಗಾರ. ಇವರ ವಿಶ್ವಖ್ಯಾತ “ಮೊನಾಲಿಸಾ ಮತ್ತು ಲಾಸ್ಟ್ ಸಪ್ಪರ್ “ ವರ್ಣ ಚಿತ್ರಗಳು, ಇಡೀ ವಿಶ್ವದಲ್ಲಿ ಅತ್ಯಂತ ಮೌಲ್ಯಯುತವಾದವುಗಳು. ಅಷ್ಟೇ ಅಲ್ಲ, ಕಲೆ ಮತ್ತು ಕಲಾವಿದರ ಕೆಲಸವನ್ನು ಗುರುತಿಸುವುದು, ಕಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುವುದು, ಶಾಂತಿ, ಸ್ವಾತಂತ್ರ್ಯ ,ಅಭಿವ್ಯಕ್ತಿ ಮತ್ತು ಸಹೋದರತ್ವದ ಸಂಕೇತವಾಗಿ ಲಿಯೋನಾರ್ಡೋ ಡ ವಿಂಚಿ ಅವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಚಿತ್ರಕಲಾವಿದರು, ಸಾಹಿತಿಗಳು, ಚಿಂತಕರು, ಪತ್ರಕರ್ತರು, ಯುವಕರು ಭಾಗವಹಿಸಿದ್ದು ಸಂತೋಷದಾಯಕ. ವಿಶ್ವಕಲಾ ದಿನಾಚರಣೆಯು ಎಲ್ಲರಿಗೂ ಮಾದರಿಯಾಗಲೆಂದು ಶುಭ ಹಾರೈಸಿದರು.
ಹಿರಿಯ ಸಾಹಿತಿಗಳು ಹಾಗೂ ಪ.ಪೂ. ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಂ ವಿ ನೆಗಳೂರ ಮಾತನಾಡಿ, ನಿಜಕ್ಕೂ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾದದ್ದು. ಖ್ಯಾತ ಚಿತ್ರ ಕಲಾವಿದರಾದ ಲಿಯೋನಾರ್ಡೋ ಡ ವಿಂಚಿ ಹಾಗೂ ರಾಜಾ ರವಿವರ್ಮ ಅವರು ಈ ನಾಡಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಕೊಟ್ಟ ಕೊಡುಗೆ ಅಪಾರ. ವಿಶ್ವದಲ್ಲಿ ಲಕ್ಷ ಲಕ್ಷ ಚಿತ್ರ ಕಲಾವಿದರು ಇದ್ದರೂ, ಅವರೆಲ್ಲರನ್ನು ಮೀರಿ ಸಾಧನೆ ಮಾಡಿದ ಮಹನೀಯರಿವರು. ಇಂತಹ ಸಾಧಕರು ಬಹುಮುಖ ಪ್ರತಿಭೆಯಿಂದ, ನಿಸ್ವಾರ್ಥ ಸೇವೆಯಿಂದ, ಖ್ಯಾತಿಯನ್ನು ಹೊಂದಿರುವುದು ಇಂದಿನ ಜನಾಂಗಕ್ಕೆ ಮಾದರಿ ಎಂದು ಹೇಳಬಹುದು. ಕಲಾವಿದರಿಗೆ ಪ್ರೋತ್ಸಾಹ ನೀಡುವ, ಹುರಿದುಂಬಿಸುವ ಇಂದಿನ ದಿನಾಚರಣೆ ನಿಜಕ್ಕೂ ಸುಂದರ ಮತ್ತು ಅರ್ಥಪೂರ್ಣ. ಸಾಹಿತ್ಯ ಲೋಕದಲ್ಲಿ ನಾಡು ಕಂಡ ಶ್ರೇಷ್ಠ ಸಾಧಕ ಡಾ ಶಿವರಾಂ ಕಾರಂತರು. ಇವರು ಕೂಡ ಬಹುಮುಖ ಪ್ರತಿಭಾವಂತರು. ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರವಲ್ಲ, ಕಲೆ, ಸಾಹಿತ್ಯ, ರಂಗಭೂಮಿ, ಯಕ್ಷಗಾನ, ಸಂಗೀತ… ಹೀಗೆ ನಾನಾ ಕ್ಷೇತ್ರದಲ್ಲಿ ಹೆಸರು ಮಾಡಿದವರು.ಅಂತಹ ಮಹಾನ್ ಸಾಧಕರ ಆದರ್ಶಗಳು ಕೂಡ ಇಂದಿನ ಯುವ ಜನಾಂಗಕ್ಕೆ ಬೇಕಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯನ್ನು ತಂದಿದೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. ಕನ್ನಡ ಹೋರಾಟಗಾರರು, ನಮ್ಮ ನಾಡ ಧ್ವನಿ ಪತ್ರಿಕೆಯ ಸಂಪಾದಕರಾದ “ಶ್ರೀ ಡಿ .ಸಿದ್ದರಾಜು” ರವರು ಮಾತನಾಡಿ, ನಿಜಕ್ಕೂ ಇಂಥಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿಯಾಯಿತು. ಇಡೀ ವಿಶ್ವದಲ್ಲಿ ಖ್ಯಾತಿ ಹೊಂದಿದ್ದ ಶ್ರೇಷ್ಠ ಚಿತ್ರ ಕಲಾವಿದರಾದ ಲಿಯೋನಾರ್ಡೋ ಡ ವಿಂಚಿ ಹಾಗೂ ರಾಜಾ ರವಿವರ್ಮ ಅವರು ನೀಡಿದ ಕೊಡುಗೆ ಅಪಾರ. ವಿಶ್ವ ಕಂಡ ಮಹಾನ್ ಸಾಧಕರು. ಇಂತಹ ಮಹನೀಯರ ಜನ್ಮದಿನವನ್ನು ವಿಶ್ವಕಲಾ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಇದರ ಜೊತೆಗೆ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ವಿಶಿಷ್ಟ.ಹಾಗೆಯೇ, ಗ್ರಾಮೀಣ ಭಾಗದ ಪ್ರತಿಭಾವಂತರನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅವರಿಗೆ ತರಬೇತಿ ಶಿಬಿರವನ್ನುಆಯೋಜಿಸಿ, ಪ್ರತಿಭಾವಂತರನ್ನು ಗುರುತಿಸಿದರೆ, ಇಂತಹ ಕಾರ್ಯಕ್ರಮಕ್ಕೆ ಒಂದು ಅರ್ಥವೆಂದು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಖ್ಯಾತ ಚಿತ್ರಕಲಾವಿದರು ಹಾಗೂ ಕರ್ನಾಟಕ ಇಂಟರ್ನಾ್ಯಷನಲ್ ಆರ್ಟಿಸ್ಟ್ ವಿಲೇಜ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ, “ಡಾ. ಅಪ್ಪಾಸಾಹೇಬ ಗಾಣಿಗೇರ” , ಇಡೀ ವಿಶ್ವ ಕಂಡ ಮಹಾನ್ ಸಾಧಕ “ಲಿಯೋನಾರ್ಡೋ ಡ ವಿಂಚಿ”. ಅಂತಹ ಮಹಾನ್ ಸಾಧಕ ಹುಟ್ಟಿದ ದಿನವನ್ನು ವಿಶ್ವಕಲಾ ದಿನಾಚರಣೆಯನ್ನಾಗಿ ಮಾಡಿದ ಶ್ರೇಯಸ್ಸು ಯುನೆಸ್ಕೊ ಗೆ ಸಲ್ಲುತ್ತದೆ. ಮೊದಲ ಬಾರಿಗೆ ಇದನ್ನು 2012 ರಲ್ಲಿ ಆಚರಿಸಲಾಯಿತು.ಮನುಷ್ಯ ಹಣ,ಆಸ್ತಿ, ಅಂತಸ್ತು ಮಾಡಿದರೆ ಹೆಸರು ಮಾಡಲು ಆಗುವುದಿಲ್ಲ. ನಿಸ್ವಾರ್ಥ ಮನೋಭಾವನೆಯಿಂದ ಸಮಾಜಕ್ಕೆ, ನಾಡಿಗೆ ,ವಿಶ್ವಕ್ಕೆ ಏನಾದರೂ ಕೊಡುಗೆಯನ್ನು ಕೊಟ್ಟು ಹೋದಾಗ ಮಾತ್ರ ಹೆಸರು ಮಾಡಲು ಸಾಧ್ಯ. ಅಂತಹ ವಿಶಿಷ್ಟ ನಿಸ್ವಾರ್ಥ ಸೇವೆಯಿಂದ ಸಾಧನೆ ಮಾಡಿದವರು ಖ್ಯಾತ ಚಿತ್ರಕಲಾವಿದ “ಲಿಯೋನಾರ್ಡೋ ಡ ವಿಂಚಿ” ಇಡೀ ಕರ್ನಾಟಕ ಮತ್ತು ಭಾರತ ದೇಶದಲ್ಲಿ “ರಾಜಾ ರವಿವರ್ಮ” ಅವರು ಖ್ಯಾತಿಯನ್ನು ಪಡೆದರೆ, ಇಟಲಿ ದೇಶದಲ್ಲಿ ಹುಟ್ಟಿ ಬೆಳೆದು ಖ್ಯಾತಿಯನ್ನ ಪಡೆದಿರುವುದು “ಲಿಯೋನಾರ್ಡೋ ಡ ವಿಂಚಿ” ಕೇವಲ ಇಟಲಿಯಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಹೆಸರು ಮಾಡಿದವರು ಇವರು. ಇವರು ಜನ್ಮದಿನವನ್ನು ಅಂತರಾಷ್ಟ್ರೀಯ ಕಲಾಸಂಘ ಹಾಗೂ ಯೂನಿಸ್ಕೋ ಇದನ್ನು ಘೋಷಿಸಿ, ಇಡೀ ವಿಶ್ವವೇ ಆಚರಿಸುವಂತೆ ಮಾಡಿತು. ಉದ್ದೇಶವಿಷ್ಟೇ,
ವಿಶೇಷ ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಅವರ ಕಲೆಗೆ ವಿಶಿಷ್ಟವಾದ ಗೌರವ ನೀಡುವುದು ಮುಖ್ಯವಾಗಿದೆ. ಇದು ಲಲಿತಕಲೆಗಳ ಅಂತರಾಷ್ಟ್ರೀಯ ಆಚರಣೆ ಆಗಿದೆ.ಸೃಜನಶೀಲ ಚಟುವಟಿಕೆಗಳ ಜಾಗೃತಿಯನ್ನು ಉತ್ತೇಜಿಸುವುದಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಚಿತ್ರಕಲೆಗೆ ಗೌರವವನ್ನು ನೀಡುವುದಾಗಿದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಕಲೆಯ ಪ್ರಾಮುಖ್ಯತೆಯನ್ನು ತಿಳಿಸುವುದೇ ಇದರ ಮೂಲ ಉದ್ದೇಶ. ಆದ್ದರಿಂದ ಇಂದಿನ ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯರು, ಚಿಂತಕರು, ಕಲಾವಿದರು ಭಾಗವಹಿಸಿದ್ದು ಅತ್ಯಂತ ಸಂತೋಷವನ್ನು ತಂದಿದೆ.ಎಲ್ಲರಿಗೂ ಶುಭವಾಗಲಿ. ವಿಶ್ವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕಲಾವಿದರಾದ “ಶ್ರೀ ಗೋವರ್ಧನ ಕೆ” ಅವರ “ಮಾಸ್ಟರ್ ಆರ್ಟ್್ಸ ಗ್ಯಾಲರಿಯಲ್ಲಿ”ವಿಶೇಷವಾಗಿ ಮೂಡಿಬಂದಿತು. ಅವರು ಕೂಡ ಕಾರ್ಯಕ್ರಮದಲ್ಲಿ ಸ್ಥಳದಲ್ಲಿಯೇ ವಿಶೇಷ ಚಿತ್ರವನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರ ಕಲಾವಿದರಾದ ಶ್ರೀ ರಾಜೇಶ್, ಶ್ರೀ ಗಂಗಾಧರ್, ಶ್ರೀ ಗಾಳಿ ಹನುಮಂತ, ಶ್ರೀ ಮಲ್ಲಿಕಾರ್ಜುನ. ಇವರೆಲ್ಲರೂ ಸ್ಥಳದಲ್ಲೇ ಚಿತ್ರ ಬಿಡಿಸುವುದರ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಪತ್ರಕರ್ತರಾದ ಶ್ರೀ ಶರಣಬಸಪ್ಪ ಗೌಡರ, ಸಮಾಜ ಸೇವಕರಾದ ಶ್ರೀ ವಿಶ್ವನಾಥ್, ಶ್ರೀಯುತ ಗಂಗಾಧರ್, ಶ್ರೀಯುತ ಕಿರಣ್, ಶ್ರೀಯುತ ಅರುಣ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಯಶಸ್ಸು ತಂದರು.
ಸೃಜನಶೀಲತೆ-ಕಲಾತ್ಮಕ ಅಭಿವ್ಯಕ್ತಿಯನ್ನು ಉತ್ತೇಜಿಸುವ ವಿಶ್ವ ಕಲಾ ದಿನಾಚರಣೆ ಇಂದಿನ ಕಲಾವಿದರಿಗೆ ಮಾದರಿ: ಡಾ.ವೆಂಕಟೇಶ್ ಆರ್.ಚೌಥಾಯಿ ಅಭಿಪ್ರಾಯ



