ಬೆಂಗಳೂರು: ನಿನ್ನೆ ಸಂಜೆ ಸುರಿದ ಭಾರಿ ಬಿರುಗಾಳಿಗೆ ಸಂಭವಿಸಿರುವ ಅನಾಹುತ ಮತ್ತು ನಷ್ಟದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಈ ಘಟನೆ ಸಂಭವಿಸುವ ಮುನ್ನವೆ ಜಿಬಿಎ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮಹಾನಗರದಲ್ಲಿ ಒಣಗಿರುವ ಮರಗಳು, ಕೊಂಬೆಗಳನ್ನು ಮುಂಜಾಗ್ರತಾ ಕ್ರಮವಾಗಿ ಕತ್ತರಿಸಬೇಕಿತ್ತು. ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಅಸ್ಥಿತ್ವಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ಇನ್ನು ಸೆಟಲ್ ಆದಂತೆ ಕಾಣುತ್ತಿಲ್ಲ.



