ಬೆಂಗಳೂರು: ರಾಜ್ಯದ ಉಪ-ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಿನ್ನೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಸ್ಪರ್ಶ ಆಸ್ಪತ್ರೆಯಲ್ಲಿ ಡಿಕೆಶಿ ಪುತ್ರಿ ಐಶ್ವರ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅವರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಇನ್ನು ರಾಜ್ಯದ ಉಪ-ಮುಖ್ಯಮಂತ್ರಿ ಮಾತ್ರವಲ್ಲದೇ, ಈಗ ತಾತನ ಸ್ಥಾನವನ್ನು ಡಿಕೆಶಿ ಮನೆಯಲ್ಲಿ ಹೊತ್ತಿದ್ದು, ಅವರ ರಾಜಕೀಯ ಗುರು ಎಸ್.ಎಂ.ಕೃಷ್ಣರ ಜನ್ಮದಿನದಂದೇ ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ವಿಶೇಷವಾಗಿದೆ.
ಒಂದು ಕಡೆ ಎಸ್.ಎಂ.ಕೃಷ್ಣ, ಡಿಕೆಶಿಗೆ ಗುರುವಿನ ಸ್ಥಾನ ವಹಿಸಿದ್ರೆ, ಇನ್ನೊಂದು ಕಡೆಯಿಂದ, ಅವರ ಜೊತೆಗೆ ಬೀಗ ಸಂಬಂಧವನ್ನು ಡಿಕೆಶಿ ಮಾಡಿರುವುದು ಗಮನಾರ್ಹ. ಇನ್ನು ಇದೇ ತಿಂಗಳ 15 ರಂದು ಡಿಕೆಶಿ ಹುಟ್ಟುಹಬ್ಬವಿದ್ದು, ಮೊಮ್ಮಗಳ ಆಗಮನ ಡಿಕೆಶಿಗೆ ಅವರ ಹುಟ್ಟುಹಬ್ಬಕ್ಕೆ ಮೊದಲ ಗಿಫ್ಟ್ ಆಗಿದೆ. ಇನ್ನು ರಾಜ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಏನಾದರೂ ಹೈಕಮಾಂಡ್ ನಾಯಕರು ಹಸಿರು ನಿಶಾನೆ ತೋರಿಸಿದ್ರೆ, ಈ ವರ್ಷದ ಹುಟ್ಟುಹಬ್ಬಕ್ಕೆ ಡಿಕೆಶಿಗೆ ಡಬಲ್ ಧಮಾಕ ಸಿಕ್ಕಂತಾಗುತ್ತದೆ.
ತಾತನಾದ ಡಿಸಿಎಂ ಡಿಕೆಶಿ!



