ಬೆಂಗಳೂರು : ಬಾಗಲಗುಂಟೆ ಪೊಲೀಸರು 38 ಲಕ್ಷ ರೂಪಾಯಿ ಬೆಲೆಬಾಳುವ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡಿರುತ್ತಾರೆ.ಏಪ್ರಿಲ್ 28ರಂದು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಟನೇ ಮೈಲಿಗಲಿನಲ್ಲಿರುವ ಜೆವೆಲ್ಲರಿ ಶಾಪ್ ಬೀಗ ಮುರಿದು ಕಳವಾಗಿದ ಪ್ರಕರಣ ದಾಖಲಾಗಿತ್ತು.
ಹಿನ್ನೆಲೆಯಲ್ಲಿ ಆರೋಪಿಗಳಾದ ಸುರೇಶ್ ನೇಮಿಚಂದ್ರ ಮತ್ತು ಧನರಾಜ್ ಎಂಬ ಆರೋಪಿಗಳನ್ನು ಬಂಧಿಸಿ 38 ಲಕ್ಷ ಬೆಲೆಬಾಳುವ 22 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ತಿಳಿಸಿದರು.ಮತ್ತೊಂದು ಪ್ರಕರಣದಲ್ಲಿ ವೈಟ್ಫೀಲ್ಡ್ ಪೊಲೀಸರು ಆಂಧ್ರಪ್ರದೇಶದ 4 ಜನ ಆರೋಪಿಗಳನ್ನು ಬಂಧಿಸಿ ಒಂದು ಕೋಟಿ 16 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಬೆಳ್ಳಿ ಹಾಗೂ ವಜ್ರ ಆಭರಣ ವಶಪಡಿಸಿಕೊಂಡಿರುತ್ತಾರೆ.ಆರೋಪಿಗಳಾದ ರಮಾವತ್, ಪತ್ತುಕೋರಿ ಸುನಿಲ್, ನೂನ್ ಸಾವತ್ ನರೇಂದ್ರ ಮತ್ತು ಕರಿ ಸತೀಶ್ ರೆಡ್ಡಿ ರವರುಗಳನ್ನು ಬಂಧಿಸಿರುತ್ತಾರೆ.ಆರೋಪಿಗಳಿಂದ 584 ಗ್ರಾಂ ಚಿನ್ನಾಭರಣ, ಒಂದು ಕಾರ್, ಒಂದು ವಾಚ್ ಮತ್ತು 9,85,000 ನಗದನ್ನು ವಶಪಡಿಸಿಕೊಂಡಿರುತ್ತಾರೆ.ಆರೋಪಿಗಳು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಪ್ರತ್ಯೇಕ ಪ್ರಕರಣಗಳಲ್ಲಿ ಕಳವು ಪ್ರಕರಣ: 1 ಕೋಟಿ 50 ಲಕ್ಷ ಅಧಿಕ ಮೌಲ್ಯದ ಚಿನ್ನಾಭರಣ ವಶ 7 ಮಂದಿ ಆರೋಪಿಗಳ ಬಂಧನ



