ಬೆಂಗಳೂರು : ಮಸೂದೆ ಸೋಲು ಎನ್ಡಿಎ ಗೆ ಮುಖಭಂಗ ಅಲ್ಲ. ಇದು ಮಹಿಳೆಯರಿಗೆ ಕಾಂಗ್ರೆಸ್ ಮಾಡಿರುವ ಅವಮಾನ, ಕಾಂಗ್ರೆಸ್ ಮಹಿಳೆಯರಿಗೆ ಮಾಡಿರುವ ಅನ್ಯಾಯ ಇದು. ಮಸೂದೆಗೆ ಸೋಲಾಗಿದ್ದು ಕೆಲವು ರಾಜಕೀಯ ಪಕ್ಷಗಳ ಪಿತ್ತೂರಿ ಮತ್ತು ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತವಾಗಿದೆ ಎಂದು ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಹಾಗೂ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು.ಮಹಿಳೆಯರ ಬಗ್ಗೆ ಮಾತನಾಡುವ ಅರ್ಹತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಮಹಿಳಾ ಘಟಕವನ್ನು ರದ್ದು ಮಾಡಿಬಿಡಿ. ಇನ್ನೆಷ್ಟು ವರ್ಷ ಮಹಿಳೆಯರನ್ನು ಕೇವಲ ಮತದಾರರನ್ನಾಗಿ ಬಳಸುತ್ತೀರಿ? ಮಹಿಳೆಯರು ದುರ್ಬಲರು ಎಂದು ಕಾಂಗ್ರೆಸ್ 60 ವರ್ಷ ಆಡಳಿತ ಮಾಡಿತು. ದೇಶದ 70 ಕೋಟಿ ಮಹಿಳೆಯರಿಗೆ ದ್ರೋಹ ಬಗೆಯಲಾಗಿದೆ. ಕಾಂಗ್ರೆಸ್ ನಿಂದ ಹೀನ ಕೆಲಸ ಇದು. ಕೇವಲ ಮಸೂದೆಗೆ ವಿರೋಧವಲ್ಲ ಇದು ಕಾಂಗ್ರೆಸ್ ರಕ್ತದಲ್ಲೇ ಇರುವ ಮಹಿಳಾ ವಿರೋಧಿಯ ನೀತಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ನಾರಿ ಶಕ್ತಿ ಜಾಗೃತವಾಗಿದೆ ಎಂದು ಆರ್ ಅಶೋಕ್ ಆಕ್ರೋಶ ಅವರ ಹಾಕಿದರು.ಮಹಿಳೆಯರಿಗೆ ಸಂವಿಧಾನದತ್ತ ಮೀಸಲಾತಿ ಕೊಡುವ ತೀರ್ಮಾನ ಮಾಡಿದ್ದು ಮೋದಿ ಅವರು. ನಿನ್ನೆ ಈ ಬಿಲ್ ಸರ್ವಾನುಮತದಿಂದ ಅಂಗೀಕಾರ ಆಗಬೇಕಾಗಿತ್ತು. ಒಮ್ಮತದಿಂದ ಎಲ್ಲರೂ ಇದಕ್ಕೆ ಅಂಕಿತ ಹಾಕಿಸಬೇಕಾಗಿತ್ತು. ದೇಶದ ಮಹಿಳೆಯರಿಗೆ ಮೀಸಲಾತಿ ಕೊಡಬೇಕಾಗಿತ್ತು. ಇದು ಮಹಿಳಾ ಸಬಲೀಕರಣ ಬಿಲ್, ವಿಫಲ ಸಾಮಾನ್ಯ ಘಟನೆ ಅಲ್ಲ. ಇದು ಸಾಮಾನ್ಯ ವಿಚಾರವು ಅಲ್ಲ. ಇದು ರಾಜಕೀಯ ಪ್ರೇರಿತ, ಪಿತೂರಿ, ಮಹಿಳಾ ಭಾವನೆಗಳ ನಿರ್ಲಕ್ಷ÷್ಯ. ಮಹಿಳೆಯರ ಹಕ್ಕುಗಳ ಬಗ್ಗೆ ವೇದಿಕೆಯಲ್ಲಿ ಕಳೆದ 60 ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದೆ.
ವೇದಿಕೆಯಲ್ಲಿ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಆದರೆ, ಕಾರ್ಯರೂಪಕ್ಕೆ ತರುವಲ್ಲಿ ಶೂನ್ಯ. ಮಹಿಳೆಯರಿಗೆ ನ್ಯಾಯ ಕೊಡದೆಡ, ಬಿಲ್ಗೆ ಬೆಂಬಲ ಕೊಡದ ಧೈರ್ಯ ಇಲ್ಲದ ಮೇಲೆ ಮಾತನ್ನಾಡುವ ಹಕ್ಕಿಲ್ಲ. ಮಹಿಳಾ ಮೋರ್ಚಾ ಏಕೆ ನಿಮಗೆ? ಮಹಿಳಾ ಘಟಕ ನಿಮ್ಮದು ರದ್ದು ಮಾಡಿ. ನಾವು ಹಕ್ಕು ಸಿಕ್ಕಿದೆ ವಿಧಾನಸಭೆಗೆ ಹೋಗುತ್ತೇವೆ ಎಂದು ಅಲಗಲಿರುವ ಮಹಿಳೆಯರು ಆಸೆ ಇಟ್ಟುಕೊಂಡಿದ್ದರು.ಇದು ಕೇವಲ ಮಸೂದೆ ಅಲ್ಲ. ಕೋಟ್ಯಂತರ ಮಹಿಳೆಯರಿಗೆ ಕೊಟ್ಟ ಹೊಡೆತ ಇದು. ಕೋಟ್ಯಾಂತರ ಮಹಿಳೆಯರಿಗೆ ಮಾಡಿದ ಅಪಮಾನ ಇದು. ನಾನು ಕಾಂಗ್ರೆಸ್ ಅವರನ್ನು ಕೇಳುತ್ತೇನೆ. ಮಹಿಳೆಯರನ್ನ ಇನ್ನೆಷ್ಟು ವರ್ಷ ಕೇವಲ ಮತದಾರರಾಗಿಯೇ ನೋಡುತ್ತೀರಿ? ನೀವು ಮಹಿಳೆಯರನ್ನ ದುರ್ಬಲರನ್ನಾಗಿ ಮಾಡಿದ್ರಾರಲ್ಲ. ನೆಹರು, ಇಂದಿರಾಗಾAಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ತಿಳಿದುಕೊಂಡಿದ್ದು ತಪ್ಪು. ದೇಶದ 70 ಕೋಟಿ ಮಹಿಳೆಯರಿಗೆ ದ್ರೋಹ ಮಾಡಿದ್ದೀರಿ. ನೀವು 60 ವರ್ಷಗಳ ಕಾಲ ಆಡಳಿತ ಮಾಡಿದಾಗ ಮಹಿಳೆಯರ ಬಗ್ಗೆ ಗಮನವೇ ಇರಲಿಲ್ಲ. ಮೋದಿ ಅವರು ಈ ಶಾಸನ ತಂದಾಗ ಅದಕ್ಕೆ ಬೆಂಬಲಿಸದೇ ಹೀನಾ ಕಾರ್ಯ ಮಾಡಿದ್ದೀರಿ. ಕಾಂಗ್ರೆಸ್ ರಕ್ತದಲ್ಲೇ ಇರುವ ಮಹಿಳಾ ವಿರೋಧಿ ನೀತಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಿಂದ ಮಹಿಳೆಯರಿಗೆ ಅನ್ಯಾಯ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲು ಹಿನ್ನೆಲೆ ವಿಧಾನಸಭೆ -ವಿಧಾನಪರಿಷತ್ ವಿಪಕ್ಷ ನಾಯಕರು ಕಿಡಿ



