ಬೆಂಗಳೂರು: ರಾಜ್ಯದಲ್ಲಿ ಮೇ 9 ಕ್ಕೆ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು . ಮಠ ಮಾನ್ಯಗಳಿಗೆ ಭೇಟಿ ನೀಡಿ ಸ್ವಾಮೀಜಿಗಳನ್ನು ಆಹ್ವಾನಿಸಿದ್ದಾರೆ.
ಹೀಗೆ ಮಠ ಮಾನ್ಯಗಳ ಸ್ವಾಮೀಜಿಗಳನ್ನು ಭೇಟಿ ಮಾಡುತ್ತಿರುವುದರ ಹಿಂದೆ ಅಡಗಿದ್ಯಾ ರಾಜಕೀಯ ಲೆಕ್ಕಾಚಾರ ಎನ್ನುತ್ತಿದೆ ಮೂಲಗಳು.
ಬಿಎಸ್ವೈ ಸಾರ್ಥಕ 50 ವರ್ಷ ರಾಜ್ಯ ರಾಜಕಾರಣದಲ್ಲಿ ಪೂರೈಸಿದ ಹಿನ್ನೆಲೆ ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿನಂದನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಸಕಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಸಾರ್ಥಕ 50 ವರ್ಷ ಪೂರೈಕೆ ಮಾಡಿರುವ ಯಡಿಯೂರಪ್ಪ, ಎಲ್ಲಾ ಸಮುದಾಯದ ವಿಶ್ವಾಸ ಗಳಿಸಿದ್ದರು. ಈಗ ತಾನು ರಾಜಕಾರಣದಲ್ಲಿ ಉನ್ನತ ಸ್ಥಾನಮಾನ ಗಳಿಸಬೇಕೆಂದರೆ, ಯಡಿಯೂರಪ್ಪರ ಹಾದಿಯಲ್ಲೇ ಸಾಗಬೇಕು. ಅದಕ್ಕಾಗಿ ವೇದಿಕೆ ಸಿದ್ಧಪಡಿಸಿಕೊಳ್ಳಬೇಕು.



