ದಾವಣಗೆರೆ: ಕರ್ನಾಟಕ ಕ್ಷತ್ರೀಯ ಮರಾಠ ಸ್ಮಾರಕಗಳ ಅಭಿವೃದ್ದಿ ಒಕ್ಕೂಟ ಬೆಂಗಳೂರು ಇವರ ವತಿಯಿಂದ ಮೇ.17 ರಂದು ಬೆಳಿಗ್ಗೆ 11 ಗಂಟೆಗೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಶ್ರೀಮಂತ ಶ್ರೀ ಷಹಾಜಿರಾಜೆ ಭೋಂಸ್ಲೆ ಮಹಾರಾಜರ ಮತ್ತು ಸ್ವರಾಜ್ ಶ್ರೀ ಛತ್ರಪತಿ ಸಂಭಾಜಿ ಮಹಾರಾಜರ ಜಯಂತೋತ್ಸವವನ್ನು ಆಯೋಜಿಸಲಾಗಿದೆ.ಗವಿಪುರಂನ ಶ್ರೀಭವಾನಿಪೀಠದ ಶ್ರೀಗೋಸಾಯಿ ಮಹಾಸಂಸ್ಥಾನಮಠದ ಪರಮಪೂಜ್ಯ ಜಗದ್ಗುರು ವೇದಾಂತಾಚಾರ್ಯ ಶ್ರೀ ಶ್ರೀ ಶ್ರೀ ಮಂಜುನಾಥ ಸುರೇಶ ಭಾರತೀನಂದ ಸ್ವಾಮೀಜಿಗಳು ಮತ್ತು ಪೂಣೆಯ ಶ್ರೀ ಶ್ರೀ ಶ್ರೀ ಮಹಾರಾಜ್ ನಗರಕರ್ ದಿವ್ಯ ಸಾನಿಧ್ಯವನ್ನು ವಹಿಸುವರು.ಕಾರ್ಯಕ್ರವನ್ನು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಮತ್ತು, ಮಾಜಿ ಮಂತ್ರಿ, ರಾಜ್ಯ ಸ್ಕೌಟ್ಸ್ ಅಂಡ್ ಗೈಡ್ಸ್ ರ್ಮನ್ ಹಾಗೂ ಮರಾಠ ಸಮಾಜದ ಹಿರಿಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ ಉದ್ಘಾಟಿಸುವರು. ಕ್ಷತ್ರೀಯ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್ ಅಧ್ಯಕ್ಷತೆ ವಹಿಸುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹಾನಗಲ್ ಶಾಸಕರಾದ ಶ್ರೀನಿವಾಸಮಾನೆ, ವಿಧಾನಪರಿಷತ್ ಸದಸ್ಯರಾದ ಎಂ.ಜಿ.ಮೂಳೆ ಶ್ರೀಮಂತ ಶ್ರೀ ಷಹಾಜಿರಾಜೆ ಭೋಂಸ್ಲೆ ಮಹಾರಾಜರ ಮತ್ತು ಸ್ವರಾಜ್ ಶ್ರೀ ಛತ್ರಪತಿ ಸಂಭಾಜಿ ಮಹಾರಾಜರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಹರಿಹರ ಶಾಸಕ ಬಿ.ಪಿ ಹರೀಶ್, ದಾ.ದಕ್ಷಿಣ ಕ್ಷೇತ್ರದ ಶಾಸಕರಾದ ಸಮರ್ಥ ಶಾಮನೂರು, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಚನ್ನಗಿರಿ ಮಾಜಿ ಶಾಸಕರಾಧ ವಡ್ನಾಳ ರಾಜಣ್ಣ, ಮಾಡಾಳ ವಿರೂಪಾಕ್ಷಪ್ಪ, ಮಹಿಮಾ ಪಾಟೀಲ್, ವಕೀಲರಾದ ವೈ.ಎಂ ರಾಮಚಂದ್ರ ರಾವ್, ಮಾಜಿ.ಜಿ.ಪಂ ಸದಸ್ಯರಾದ ಹೊದಿಗೆರೆ ರಮೇಶ್, ಮಾಜಿ ಸಚಿವರಾಧ ಶ್ರೀಮಂತ ಪಾಟೀಲ್, ಖಾನಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳಕರ್, ತೇಜಸ್ವಿ ಪಾಟೀಲ್, ತುಮ್ ಕೋಸ್ ಅಧ್ಯಕ್ಷರಾಧ ಹೆಚ್.ಎಸ್ ಶಿವಕುಮಾರ್ ಭಾಗವಹಿಸುವರು.ಹರಿಹರದ ಜಿ.ಎಂ ಹನುಮಂತ ರಾವ್ ಮತ್ತು ಸುಭದ್ರಾಬಾಯಿ ಚಾರಿಟೆಬಲ್ ಟ್ರಸ್ಟ್ ಇವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವೇತನವನ್ನು ನೀಡಿ ಸನ್ಮಾನಿಸುವರು.



