ಬೆಂಗಳೂರು : ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಬಸ್ಪೇಟೆ ಬ್ರಿಡ್ಜ್ ಬಳಿ ಇರುವ ಪ್ರಿನ್ಸ್ ಹೋಟೆಲ್ ಮುಂಭಾಗ 75 ವರ್ಷದ ವೃದ್ದ ಮುಂಜಾನೆ ಮೂರು ಗಂಟೆ ಸಮಯದಲ್ಲಿ ಕೆಎಸ್ಆರ್ಟಿಸಿ ಬಸ್ ಇಳಿದು ರಸ್ತೆ ದಾಟುವ ಸಮಯದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾರೆ. ಚಿಕ್ಕಮಗಳೂರಿನಿಂದ ತ್ಯಾಮಗೊಂಡ್ಲಿಗೆ ಕೆಎಸ್ಆರ್ಟಿಸಿ ಬಂದು ಇಳಿದು ರಸ್ತೆ ದಾಟುತ್ತಿದ್ದ ಜಹೀರ್ ಅಹ್ಮದ್ 75, ಮೃತಪಟ್ಟಿರುತ್ತಾರೆ. ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಅಪರಿಚಿತ ವಾಹನ ವನ್ನು ಪತ್ತೆ ಮಾಡಲು ಅಪಘಾತದ ಜಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.



