LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ʼಅಭಿಷೇಕ್ ಶರ್ಮಾ ಆರ್ಭಟದ ಮುಂದೆ ಪಾಕ್ ನಿರುತ್ತರʼ

ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದ ಅಭಿಷೇಕ್ ಶರ್ಮಾ ಮತ್ತು ಉಪನಾಯಕ ಶುಭಮನ್ ಗಿಲ್ ಅವರ ಸ್ಫೋಟಕ ಇನ್ನಿಂಗ್ಸ್ ನ ನೆರವಿನಿಂದ ಭಾರತ ತಂಡ ೬ ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಏಷ್ಯಾ ಕಪ್ ನ ಸೂಪರ್ ಸಿಕ್ಸ್ ನ ತನ್ನ ಮೊದಲ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದು ಬೀಗಿದೆ.

ದುಬೈನ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ ೨೦ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೭೧ ರನ್ ಕಲೆ ಹಾಕಿತು. ಇದನ್ನು ಭಾರತ ತಂಡ ಯಾವುದೇ ವಿಕಟ್ ನಷ್ಟವಿಲ್ಲದೆ ಇನ್ನೂ ೭ ಎಸೆತಗಳು ಬಾಕಿ ಉಳಿದಿರುವಂತೆ ಬೆಂಬತ್ತಿ ವಿಜಯಭೇರಿ ಬಾರಿಸಿತು. ಆರಂಭಿಕ ಬ್ಯಾಟರ್ ಗಳಾದ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಭಾರತಕ್ಕೆ ಅದ್ಬುತ ಆರಂಭ ನೀಡಿದರು. ಕಳೆದ ಪಂದ್ಯದಲ್ಲಿ ಶಾಹಿನ್ ಶಾ ಅಫ್ರಿದಿ ಅವರ ಮೊದಲ ಎಸೆತವನ್ನು ಅಭಿಷೇಕ್ ಶರ್ಮಾ ಬೌಂಡರಿಗಟ್ಟಿದ್ದರು. ಈ ಬಾರಿ ಬೌನ್ಸರ್ ಆಗಿ ಬಂದ ಪ್ರಥಮ ಎಸೆತವನ್ನು ಲೆಗ್ ಲಾಂಗ್  ಕಡೆಗೆ ಸಿಕ್ಸರ್ ಗೆತ್ತಿದರು. ಅಲ್ಲಿಗೇ ಪಾಕಿಸ್ತಾನದ ಜಂಘಾಬಲ ಉಡುಗಿತ್ತು.

ಗಿಲ್ - ಅಭಿಷೇಕ್ ಶತಕದ ಜೊತೆಯಾಟ ಇವರಿಬ್ಬರು ೯.೫ ಓವರ್ ಗಳಲ್ಲಿ ಮೊದಲ ವಿಕೆಟ್ ಗೆ ೧೦೫ ರನ್ ಗಳ ಮಹತ್ವದ ಜೊತೆಯಾಟ ಆಡಿದ್ದು ಪಂದ್ಯವನ್ನು ಸಂಪೂರ್ಣವಾಗಿ ಪಾಕಿಸ್ತಾನದ ಕೈಯಿಂದ ಕಿತ್ತುಕೊಂಡಿತು. ಅದಾಗಲೇ ಅರ್ಧಶತಕ ಗಳಿಸಿದ ಅಭಿಷೇಕ್ ಶರ್ಮಾ ಮತ್ತು ಅರ್ಧಶತಕದ ಸನಿಹ ಇದ್ದ ಶುಭಮನ್ ಗಿಲ್(೨೮ ಎಸೆತದಲ್ಲಿ ೪೭ ರನ್) ಅವರು ಮೈದಾನದ ಮೂಲೆಮೂಲೆಗೂ ಚೆಂಡನ್ನಟ್ಟಿ ಪಾಕಿಸ್ತಾನದ ಫೀಲ್ಡರ್ ಗಳ ಬೆವರಿಳಸಿದ್ದರು. ಆದರೆ ೧೦ನೇ ಓವರ್ ನಲ್ಲಿ ಶುಭಮನ್ ಗಿಲ್ ಅವರನ್ನು ಫಹೀಮ್ ಅಶ್ರಫ್ ಅವgÄÀ ಕ್ಲೀ ನ್ ಬೌಲ್ಡ್ ಮಾಡುವುದರೊಂದಿಗೆ ಭಾರತದ ಮೊದಲ ವಿಕೆಟ್ ಪತನಕ್ಕೆ ಕಾರಣರಾದರು. ಮುಂದಿನ ಓವರ್ ನಲ್ಲೇ ನಾಯಕ ಸೂರ್ಯಕುಮಾರ್ ಅವರನ್ನು ಹ್ಯಾರಿಸ್ ರೌಫ್ ಅವರು ಖಾತೆ ತೆರೆವ ಮೊದಲೇ ಅಬ್ರಾರ್ ಅಹ್ಮದ್ ಅವರಿಗೆ ಕ್ಯಾಚ್ ಕೊಡಿಸಿದರು.

ಆದರೂ ಪಾಕಿಸ್ತಾನದ ಆರ್ಭಟ ಕಡಿಮೆ ಯಾಗಿರಲಿಲ್ಲ. ಭಾರತ ಮಿಸ್ ಫೀಲ್ಡಿಂಗ್ ಮತ್ತು ಕ್ಯಾಚ್ ಡ್ರಾಪ್ ಗಳ ಭರಪೂರ ಲಾಭ ಪಡೆದ ಪಾಕಿಸ್ತಾನ ತಂಡದ ಪವರ್ ಪ್ಲೇನಲ್ಲಿ ೫೫ ರನ್ ಪೇರಿಸಿತ್ತು. ಮೊದಲ ೧೦ ಓವರ್ ಗಳು ಮುಗಿಯಬೇಕಾದರೆ ಒಂದೇ ವಿಕೆಟ್ ನಷ್ಟಕ್ಕೆ ೯೧ ರನ್ ಗಳಿಸಿತ್ತು. ಫರ್ಹಾನ್ ಅವರು ಅರ್ಧಶತಕ ಗಳಿಸಿ ಭಾರತಕ್ಕೆ ಕಂಟಕವಾಗಿದ್ದರು. ಆದರೆ ಆ ಬಳಿಕ ಶಿವಂ ದುಬೆ ಮತ್ತು ಕುಲ್ದೀಪ್ ಯಾದವ್ ಅವರು ವಿಕೆಟ್ ಕೀಳುವುದರೊಂದಿಗೆ ರನ್ ಮೇಲೂ ನಿಯಂತ್ರಣ ತAದರು. ಇದರಿಂದಾಗಿ ಭಾರೀ ಮೊತ್ತ ಗಳಿಸುವ ಸೂಚನೆ ನೀಡದ್ದ ಪಾಕ್ ಬಳಗ ಅಂತಿಮವಾಗಿ ೨೦ ಓವರ್ ಗಳು ಮುಗಿದಾಗ ಕೇವಲ ೧೭೧ ರನ್  ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು