LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ʼಆಸೀಸ್ ವಿರುದ್ಧ ಬಿರುಸಿನ ಶತಕ ಬಾರಿಸಿದ ಸ್ಮ್ರತಿ ಮಂದಾನʼ

ಆಸ್ಟ್ರೇಲಿಯಾ ವಿರುದ್ಧ ಕೇವಲ ೭೭ ಎಸೆತಗಳಲ್ಲಿ ಶತಕ ಬಾರಿಸಿದ ಭಾರತ ತಂಡದ ಉಪನಾಯಕಿ ಸ್ಮ್ರತಿ ಮಂದಾನ ಅವರು ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದ್ದಾರೆ. ಆರಂಭಿಕರಾಗಿ ಕ್ರೀಸಿಗಿಳಿದು ಅತಿ ಹೆಚ್ಚು ಏಕದಿನ ಶತಕ ಗಳಿಸಿದ ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಸುಝಿ ಬೇಟ್ಸ್ ಮತ್ತು ಟಾಮಿ ಬ್ಯೂಮ್ಯಾಂಟ್ ಅವರ ಸಾಲಿಗೆ ಸೇರಿದ್ದಾರೆ. ಇನ್ನೊಂದು ಶತಕ ಹೊಡೆದರೆ ಅವರು ಈ ಪಟ್ಟಿಯಲ್ಲಿ ಒಂದನೇ ಸ್ಥಾನಕ್ಕೇರಲಿದ್ದಾರೆ. ಒಟ್ಟಾರೆ ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕಗಳ ವಿಶ್ವದಾಖಲೆ ನಿರ್ಮಾಣಕ್ಕೆ ಅವರಿಗೆ ಇನ್ನು ಮೂರು ಶತಕಗಳ ಅಗತ್ಯವಿದೆ.

ಚಂಡೀಗಢದ ಮಹಾರಾಜ ಯಾದವೀಂದ್ರ ಸಿAಗ್ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ  ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅವರು ತಮ್ಮ ಏಕದಿನ ವೃತ್ತಿಜೀವನದ ೧೨ನೇ ಶತಕವನ್ನು ಗಳಿಸಿದರು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ೪೯.೫ ಓವರ್ ಗಳಲ್ಲಿ ೨೯೨ ರನ್ ಕಲೆ ಹಾಕಿತು. ಆರಂಭಿಕ ಆಠಗಾರ್ತಿ ಸ್ಮತಿ ಮಂಧನಾ ಕೇವಲ ೭೭ ಎಸೆತಗಳಲ್ಲಿ ಶತಕ ಗಳಿಸಿದರು. ಒಟ್ಟಾರೆ ಅವರು ೯೧ ಎಸೆತಗಳಿಂದ ೧೪ ಬೌಂಡರಿ ಮತ್ತು ೪ ಸಿಕ್ಸರ್ ಗಳಿದ್ದ ೧೧೭ ರನ್ ಗಳಿಸಿ ಔಟಾದರು.

ಆಸ್ಟ್ರೇಲಿಯಾ ವಿರುದ್ಧ ಮಂದಾನ ಹೊರತುಪಡಿಸಿ ಬೇರೆ ಯಾವ ಬ್ಯಾಟರ್ ಸಹ ಅರ್ಧಶತಕವನ್ನೂ ಗಳಿಸಲು ಶಕ್ತವಾಗಲಿಲ್ಲ. ದೀಪ್ತಿ ಶರ್ಮಾ ೪೦(೫೩), ರಿಚಾ ಗೋಷ್ ೨೯(೩೩), ಪ್ರತಿಕಾ ರಾವಲ್ ೨೫(೩೨) ಉತ್ತಮ ಕೊಡುಗೆ ನೀಡಿದರು. ಆಸ್ಟ್ರೇಲಿಯಾ  ಪರ ಜಾರ್ಸಿ ಬೌನ್ ಅವರು ೩ ವಿಕೆಟ್ ಮತ್ತು ಆ್ಯಶ್ಲೆ ಗಾರ್ಡ್ನರ್ ೨ ವಿಕೆಟ್ ಎಗರಿಸಿದರು. ಭಾರತದ ಪರವಾಗಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಇದು ಎರಡನೇ ಅತಿ ವೇಗದ ಶತಕವಾಗಿದೆ. ಈ ವರ್ಷದ ಜನವರಿಯಲ್ಲಿ ಐರ್ಲೆಂಡ್ ವಿರುದ್ಧ ಅವರೇ ೭೦ ಎಸೆತಗಳಲ್ಲಿ ಶತಕ ಗಳಿಸಿದ್ದು ವೇಗದ ಶತಕವಾಗಿದೆ. ಮಂದನಾ ಅವರ ಎಲ್ಲಾ ೧೨ ಏಕದಿನ ಶತಕಗಳು ಆರಂಭಿಕ ಆಟಗಾರ್ತಿಯಾಗಿ ಬಂದಿವೆ.

ಇದು ಸ್ಮöÈತಿ ಮಂದಾನ ಅವರು ಈ ವರ್ಷ ಹೊಡೆಯುತ್ತಿರುವ ಮೂರನೇ ಏಕದಿನ ಶತಕವಾಗಿದೆ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬೇರೆ ಬೇರೆ ವರ್ಷಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಗೌರವಕ್ಕೂ ಅವರೀಗ ಪಾತ್ರರಾಗಿದ್ದಾರೆ. ೨೦೨೪ ರಲ್ಲಿ ಅವರು ನಾಲ್ಕು ಶತಕಗಳನ್ನು ಗಳಿಸಿದ್ದರು. ಈ ಶತಕದೊಂದಿಗೆ ಮಂಧನಾ ಅವರು ಮೆಗ್ ಲ್ಯಾನಿಂಗ್ ಅವರ ಅತಿ ಹೆಚ್ಚು ಶತಕಗಳ ದಾಖಲೆಗೆ ಹತ್ತಿರವಾಗಿದ್ದಾರೆ. ಲ್ಯಾನಿಂಗ್ ೧೫ ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು